ಸುದ್ದಿಗಳು

23ರಿಂದಲೇ ‘ಯಜಮಾನ’ ನ ಹವಾ ಶುರು

ಬೆಂಗಳೂರು, ಫೆ.19:

ಯಜಮಾನನ ಹವಾ ಈಗಾಗಲೇ ಶುರುವಾಗಿದೆ. ‘ಯಜಮಾನ’ ಸಿನಿಮಾ ಸೆಟ್ಟೇರಿದಾಗಿನಿಂದಲೂ ತನ್ನದೇ ಆದ ಹವಾ ಕ್ರಿಯೇಟ್ ಮಾಡಿತ್ತು. ಇದೀಗ ಈ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಸಿನಿಮಾದ ಟಿಕೆಟ್ ಮುಂಚೆಯೇ ಲಭ್ಯವಾಗುತ್ತಿದೆ. ಅಷ್ಟೇ ಅಲ್ಲ ಈ ಸಿನಿಮಾ ಆನ್‌ಲೈನ್ ಟಿಕೆಟ್ 23 ರಿಂದ ಸಿಗಲಿದೆ.

23ರಂದು ಆನ್‌ ಲೈನ್‌ ನಲ್ಲಿ ಟಿಕೆಟ್

ಹೌದು, ಪಿ.ಕುಮಾರ್ ಹಾಗೂ ವಿ.ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಹಲವಾರು ವಿಷಯಗಳಿಂದ ಸುದ್ದಿಯಾಗಿದೆ. ಈ ಸಿನಿಮಾದ ಹಾಡುಗಳಂತೂ ಫುಲ್ ಟ್ರೆಂಡಿಂಗ್ನಲ್ಲಿ ಇದ್ದವು. ಇನ್ನು ಟ್ರೇಲರ್ ಬಗ್ಗೆ ಮಾತಾಡೋದೆ ಬೇಡ. ಯಾಕಂದ್ರೆ ಈ ಸಿನಿಮಾ ಟ್ರೇಲರ್ ನೋಡಿದ ಮಂದಿ ಫುಲ್ ಮಾರ್ಕ್ಸ್ ಕೊಡುವುದರ ಜೊತೆಗೆ ಸಿನಿಮಾ ಯಾವಾಗಪ್ಪ ಬರುತ್ತೆ ಅಂತಾ ಕಾಯುವಂತಾಗಿತ್ತು. ಇದೀಗ ಸಿನಿಮಾ ನೋಡುವ ಕಾತುರತೆ ಹೆಚ್ಚಾಗಿದೆ.

ಮಾರ್ಚ್ 1ರಂದು ತೆರೆಗೆ

ಇನ್ನು ಈ ಸಿನಿಮಾ ಮಾರ್ಚ್ 1ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಸಿನಿಮಾದ ಹವಾ ಈಗಾಗಲೇ ಹೆಚ್ಚಾಗಿದ್ದು, ಅಭಿಮಾನಿಗಳು ಬಿಡುಗಡೆಯ ದಿನವನ್ನು ಫುಲ್ ಹಬ್ಬವನ್ನಾಗಿ ಮಾಡಲು ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ಈ ಸಿನಿಮಾದ ಟಿಕೆಟ್ ಮುಂಚಿತವಾಗಿ ಲಭ್ಯವಾಗುತ್ತಿವೆ. ಇನ್ನು ಈ ಸಿನಿಮಾದ ಟಿಕೆಟ್ 23ರಿಂದಲೇ ಆನ್‌ ಲೈನ್‌ ನಲ್ಲಿ ಲಭ್ಯವಾಗುತ್ತಿವೆ. ಇದೀಗ ಟಿಕೆಟ್ ಕೊಳ್ಳಲು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ.

ಸೆಟ್ಟೇರಿತು ವೈಶಿಷ್ಟ್ಯತೆಯ ‘ನಿರ್ಮಾಣ ಸಂಖ್ಯೆ 3 ‘

#yajamanakannadamovie #yajamanatrailer #balkaninews #darshanandrashmikamandanna #balkaninews #onlinebookingstart

Tags

Related Articles