ಸುದ್ದಿಗಳು

‘ಯಜಮಾನ’ ಚಿತ್ರದ ಶಿವನಂದಿ ವಿಡಿಯೋ ಹಾಡು ಬಿಡುಗಡೆ

ಬೆಂಗಳೂರು, ಮಾ.16:

‘ಯಜಮಾನ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ಇದೀಗ ಈ ಸಿನಿಮಾದ ಶಿವನಂದಿ ಹಾಡು ಬಿಡುಗಡೆಯಾಗಿದೆ. ಈ ಸಿನಿಮಾ ಬಿಡುಗಡೆಗೂ ಮೊದಲು ಲಿರಿಕಲ್ ಹಾಡು ಬಿಡುಗಡೆಯಾಗಿ ಯುಟ್ಯೂಬ್‌ ನಲ್ಲಿ ಸಕ್ಕತ್ ಸದ್ದು ಮಾಡಿತ್ತು. ಇದೀಗ ಈ ಸಿನಿಮಾದ ವಿಡಿಯೋ ಹಾಡು ಬಿಡುಗಡೆ ಮಾಡಲಾಗಿದ್ದು, ಯಜಮಾನನ ಅವತಾರ ಮತ್ತೊಮ್ಮೆ ಪ್ರದರ್ಶನವಾಗಿದೆ. ಇನ್ನು ಈ ಹಾಡು ಬಿಡುಗಡೆ ಹಿನ್ನೆಲೆಯಲ್ಲಿ ನಟ ದರ್ಶನ್ ಟ್ವಿಟ್ಟರ್ ಮೂಲಕ ಅಭಿಪ್ರಾಯ ತಿಳಿಸುವಂತೆ ಕೋರಿದ್ದಾರೆ.

ವಿಡಿಯೋ ಹಾಡಿನಲ್ಲಿದೆ ‘ಯಜಮಾನ’ ನ ಖದರ್

ಹೌದು, ಸದ್ಯ ಬಾರೀ ಸದ್ದು ಮಾಡುತ್ತಿರುವ ಯಜಮಾನ ಸಿನಿಮಾ ಈಗಾಗಲೇ ದೇಶ ವಿದೇಶಗಳಲ್ಲೂ ತನ್ನ ಹವಾ ಕ್ರಿಯೇಟ್ ಮಾಡಿದೆ. ಬಿಡುಗಡೆಯಾದ ದಿನದಿಂದಲೂ ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಮಯದಲ್ಲಿ ಇದೀಗ ಈ ಸಿನಿಮಾದ ವಿಡಿಯೋ ಹಾಡು ಬಿಡುಗಡೆಯಾಗಿದ್ದು, ಅದ್ಬುತ ರೆಸ್ಪಾನ್ಸ್ ಪಡೆಯುತ್ತಿದೆ.ಹೌದು, ಬಿಡುಗಡೆಯಾದ ಒಂದು ದಿನದಲ್ಲಿ ಬರೋಬ್ಬರಿ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು  ಮುನ್ನುಗ್ಗುತ್ತಿದೆ.

ಹಾಡಿನಲ್ಲಿದ್ದಾರೆ ಸ್ಟಾರ್ ನಟರು

ಇನ್ನೂ ಈ ಸಿನಿಮಾ ಈ ಹಾಡು ಬಿಡುಗಡೆ ಮುನ್ನವೇ ಲಿರಿಕಲ್ ವಿಡಿಯೋ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿತ್ತು. ಈಗ ಈ ಹಾಡು ಬಿಡುಗಡೆಯಾಗಿದೆ. ವಿಶೇಷವೆಂದರೆ ಈ ಹಾಡಿನಲ್ಲಿ ನಟರಾದ ಪ್ರಜ್ವಲ್ ದೇವರಾಜ್, ಪ್ರೇಮ್, ವಿನೋದ್ ಪ್ರಭಾಕರ್, ಶರಣ್, ಚಿರಂಜೀವಿ ಸರ್ಜಾ ಹಾಗೂ ದರ್ಶನ್ ಅವರ ಮಗ ವಿನೀಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಷ. ಯಜಮಾನ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ನಟಿಸಿದ್ದಾರೆ. ಬಿ.ಸುರೇಶ್ ಹಾಗೂ ಶೈಲಜಾ ನಾಗ್ ಅವರ ಮಿಡಿಯಾ ಹೌಸ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ನಿರ್ದೇಶಕ ಪಿ.ಕುಮಾರ್ ಹಾಗೂ ವಿ.ಹರಿಕೃಷ್ಣ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಅದ್ದೂರಿಯಾಗಿ ನಡೆಯಿತು ರಿಷಬ್ ಶೆಟ್ಟಿ ಪತ್ನಿಯ ಸೀಮಂತ ಕಾರ್ಯ…!

#shivanandi #darshan #darshanyajamana #kannadamovies #balkaninews

Tags