ಸುದ್ದಿಗಳು

‘ಯಜಮಾನ’ ಸಕ್ಸಸ್, ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿದ ದರ್ಶನ್

ಬೆಂಗಳೂರು, ಫೆ.12:

ದರ್ಶನ್ ಸಿನಿಮಾಗಳೇ ಹಾಗೇ.. ಬಿಡುಗಡೆಗೂ ಮುನ್ನ ಒಂದು ರೀತಿ ಸದ್ದು ಮಾಡಿದ್ರೆ, ಬಿಡುಗಡೆಯ ನಂತರವೂ ಅಷ್ಟೇ ಸದ್ದು ಮಾಡುತ್ತವೆ. ಬರುವಾಗ ಯಾವ ರೀತಿ ಕ್ರೇಜ್ ಇರುತ್ತೋ ಬಂದ ನಂತರವೂ ಆ ಕ್ರೇಜ್ ಡಬ್ಬಲ್ ಆಗುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಈ ಯಜಮಾನ ಸಿನಿಮಾ ಹಾಡುಗಳು ಮೂರು ಕೂಡ ಅಷ್ಟೇ ಫೇಮಸ್ ಜೊತೆ ಅಭಿಮಾನಿಗಳಿಗೆ ಇಷ್ಟವಾಗಿವೆ. ಇದೀಗ ಟ್ರೇಲರ್ ಕೂಡ ಅಷ್ಟೇ ಫೇಮಸ್ ಆಗಿದೆ. ಅಷ್ಟೇಅಲ್ಲ ದಾಖಲೆ ಸೃಷ್ಟಿ ಮಾಡಿದೆ. ಇದೀಗ ಈ ಖುಷಿ ಡಬ್ಬಲ್ ಆಗಿದೆ.

ಕೋಟಿ ಕೋಟಿ ವೀವ್ಸ್ ಪಡೆದ ಟ್ರೇಲರ್

ಹೌದು, ‘ಯಜಮಾನ’ ಟ್ರೇಲರ್ ಈಗಾಗಲೇ ಸಕ್ಕತ್ ಸದ್ದು ಮಾಡುತ್ತಿದೆ. ಕಳೆದ ಎರಡು ದಿನಗಳಿಂದಲೂ ಯುಟ್ಯೂಬ್, ಅಭಿಮಾನಿಗಳ ಸ್ಟೇಟಸ್, ಫೇಸ್ ಬುಕ್ ಗಳಲ್ಲಿ ಯಜಮಾನ ಹಾಗೂ ಅದರಲ್ಲಿರುವ ಡೈಲಾಗ್ ಗಳದ್ದೇ ಹವಾ. ಟ್ರೈಲರ್ ಬಿಡುಗಡೆಗೊಂಡಾಗಿನಿಂದಲೂ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿ ಇದೆ. ಇದುವರೆಗೂ 12 ಮಿಲಿಯನ್ ಗೂ ಅಧಿಕ ವೀವ್ಸ್ ಕಂಡಿದ್ದು, 2.37 ಲಕ್ಷ ಮಂದಿ ಲೈಕ್ಸ್ ಮಾಡಿದ್ದಾರೆ. ಈ ಖುಷಿಗೆ ಕೇಕ್ ಕತ್ತರಿಸಿ ಸಂಭ್ರಮ ಮಾಡಲಾಗಿದೆ.

ಕೇಕ್ ಕತ್ತರಿಸಿದ ದಚ್ಚು

ಇನ್ನು ಈ ಫೋಟೋಗಳನ್ನು ಹಂಚಿಕೊಂಡಿದ್ದು, ಡಿ ಕಂಪನಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ `ಯಜಮಾನ’ ಖಡಕ್ ಟ್ರೈಲರ್ ಹೊಸ ದಾಖಲೆ ಬರೆದಿದ್ದು, ಬಾಕ್ಸ್ ಆಫೀಸ್ ಸುಲ್ತಾನ್ ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಹಾಗೂ ಅಭಿಮಾನಿಗಳೊಂದಿಗೆ ಸಿಹಿ ಹಂಚಿಕೊಂಡಿದ್ದಾರೆ. 24 ಗಂಟೆಗಳಲ್ಲಿ 115 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡು ಕೆಲವೇ ಗಂಟೆಗಳಲ್ಲಿ ಅತಿ ಹೆಚ್ಚು ಲೈಕ್ ಮಾಡಿರುವ ಟ್ರೈಲರ್ ಸಹ ಇದಾಗಿದೆ. 30 ಗಂಟೆಗಳಿಂದ ಯುಟ್ಯೂಬ್ ಅಲ್ಲಿ ದೇಶದಾದ್ಯಂತ ನಂಬರ್ 1 ಸ್ಥಾನದಲ್ಲಿ ರಾರಾಜಿಸುತ್ತಿದೆ  ಎಂದು ಟ್ವೀಟ್ ಮಾಡಿದೆ.

ಹೆಸರು ಬದಲಾಯಿಸಿಕೊಂಡ ದರ್ಶನ್ ..

#sandalwood #kannadamovies #balkaninews #yajamanakannadamovietrailer #yajamanamovies #yajamanakannadamovieindarshan #darshanandrashmikamandanna

Tags