ಸುದ್ದಿಗಳು

ದಸರಾ ಅಂದರೆ ಅದೇನಷ್ಟು ದರ್ಶನ್ ಗೆ ತುಂಬಾ ಸ್ಪೆಷಲ್..?!?

ಇಡೀ ಮೈಸೂರನ್ನು ಸೈಕಲ್ ನಲ್ಲೇ ಸುತ್ತುತ್ತಿದ ದಚ್ಚು..!

ಚಾಲೆಜಿಂಗ್ ಸ್ಟಾರ್ ದರ್ಶನ್  ಅಂದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ದರ್ಶನ್  ಸ್ಯಾಂಡಲ್‍ವುಡ್ ನ ದುಬಾರಿ ನಟನೂ ಹೌದು!!. ಚಂದನವನದಲ್ಲಿ ದಸರಾ ಬಂತೆಂದರೆ ಸಾಕು ಸ್ಟಾರ್ ನಟರಿಗೆ ಈ ಹಬ್ಬ ಜೋರಾಗಿಯೇ ಇರುತ್ತದೆ. ಅದರಲ್ಲೂ ಆಯುಧ ಪೂಜೆ ಬಂತೆಂದರೆ ಇನ್ನೂ ವಿಶೇಷ ಯಾಕೆಂದರೆ ಒಳಗಿದ್ದ ವಾಹನಗಳು ಹೊರಗೆ ಬರುವ ಸಮಯ. ಆವಾಗಲೇ ನಮ್ಮ ಚಂದನವನದ ಡಿ-ಬಾಸ್  ತಮ್ಮ ಬಳಿ ಇರುವ  ಎಲ್ಲಾ ವಾಹನಗಳಿಗೆ ವಿಶೇಷ ಪೂಜೆ ಮಾಡುತ್ತಾರೆ….

Related image

ತಮ್ಮ ಪ್ರೀತಿಯ ವಾಹನಗಳಿಗೆ ಆಯುಧ ಪೂಜೆ ಮಾಡುವ ದಚ್ಚು

ಅದರಲ್ಲೂ ಚಂದನವನದ ಡಿ ಬಾಸ್ ಗೆ ವಾಹನದ ಮೇಲೆ ಎಲ್ಲಿಲ್ಲದ ಕ್ರೇಜ್.. ಹಾಗಾಗಿ ದರ್ಶನ್ ಅವರ ಹತ್ತಿರ ದುಬಾರಿ ಕಾರಿ ಕಲೆಕ್ಷನ್ ಗಳಿವೆ.. ಹಲವಾರು ಕಾರು, ಬೈಕುಗಳನ್ನು ಹೊಂದಿರುವ ದರ್ಶನ್ ಆಯುಧ ಪೂಜೆಯಂದು ತಮ್ಮೆಲ್ಲಾ ವಾಹನಗಳಿಗೆ ವಿಶೇಷವಾಗಿ ಆಯುಧ ಪೂಜೆ ಮಾಡುತ್ತಾರೆ..  ಈ ಬಾರಿ ದಸಾರೆಗೆ ದರ್ಶನ್ ನ ಹೊಸ ಲ್ಯಾಂಬೋರ್ಗಿನಿ ಕಾರು ಚಾಮುಂಡಿ ತಾಯಿಯ ಕೊಡುಗೆಯಾಗಿ ಬಂದಿದೆ.ಕಳೆದ ಸಂಕ್ರಾಂತಿಯಂದು ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು. ಮೈಸೂರಿಗೆ ಹೊಸ ಕಾರಿನಲ್ಲಿ ಆಗಮಿಸಿ ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು.. ಈಗಾಗಲೇ ದರ್ಶನ್ ಬಳಿ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೆಂಜ್ ರೋವರ್, ಫಾರ್ಚ್ಯೂನರ್ ಕಾರುಗಳ ಕಲೆಕ್ಷನ್ ಇದೆ. ಆದರೆ ಇದೊಂದು ಲ್ಯಾಂಬೋರ್ಗಿನಿ ಕಾರು ಮಾತ್ರ ಇರಲಿಲ್ಲ. ಅಷ್ಟಕ್ಕೂ ನ್ಯೂ ಎಡಿಷನ್ ನ ಈ ಲ್ಯಾಂಬೋರ್ಗಿನಿ ಕಾರು ಬೆಲೆ ಬರೋಬ್ಬರಿ 5 ಕೋಟಿ ರೂ..

Related image

Related image

ದಚ್ಚು ಬಾಲ್ಯ ಜೀವನದ ನೆನಪಿಗೆ..!

ತನ್ನ ಬಾಲ್ಯ ದಿನಗಳನ್ನು ಮೈಸೂರಿನಲ್ಲೇ ಅತೀ ಸಂಭ್ರಮದಿಂದ ಜೀವಿಸಿದ ದರ್ಶನ್ ತಾನೊಬ್ಬ ಸಿನಿಮಾ ನಟನಾಗುವ ಬಹಳ ಮುನ್ನವೇ ಜಗತ್ಪ್ರಸಿದ್ಧ ಮೈಸೂರು ದಸರಾ ಉತ್ಸವದ ವಿಜೃಂಭಣೆಗೆ ಮನಸೋತಿದ್ದರು. ಸುಮಾರು 20 ವರ್ಷಗಳ ಹಿಂದೆ ಆಗ ತಾನೇ ಯೌವನ ಅವಸ್ಥೆಗೆ ಕಾಲಿಟ್ಟಿದ್ದ ದರ್ಶನ್ ಬದುಕನ್ನರಸಿ ರಾಜಧಾನಿಗೆ ಬಂದರೂ ಅಂದಿನಿಂದ ಇಂದಿನವರೆಗೂ ನವರಾತ್ರಿ ದಿನಗಳಲ್ಲಿ ಮೈಸೂರಿಗೆ ಭೇಟಿ ನೀಡುವುದನ್ನು ಒಂದು ಸಂಪ್ರದಾಯ ಅಥವಾ ತಮ್ಮ ಮನೆತನದ ಪದ್ಧತಿಯೆಂದು ಪಾಲಿಸಿಕೊಂಡು ಬಂದವರೇ. ಇಂದಿಗೂ ಅವರ ಮನೆಯಲ್ಲಿ ನವರಾತ್ರಿ ಹಬ್ಬದ ಸಂದರ್ಭ 7 ದಿನಗಳ ಕಾಲ ನೂರಾರೂ ಗೊಂಬೆಗಳನ್ನು ಕೂರಿಸಿ ದೇವಿ ಆದಿಶಕ್ತಿಯ ಹಾಗೂ ಆಯಧಗಳ ಪೂಜೆ ನೆರವೇರಿಸುವುದು ರೂಢಿಯಿಂದ ಬಂದ ನಿಯಮ..

ಮೈಸೂರನ್ನು ಸೈಕಲ್ ನಲ್ಲೇ ಸುತ್ತುತ್ತಿದ ದಚ್ಚು

ಒಂದು ಕಾಲ ಶತಮಾನಕ್ಕೂ ಮುಂಚೆ ಆಗ ತಾನೆ ದರ್ಶನ್ ತನ್ನ ಓರಗೆಯ ಸ್ನೇಹಿತರೊಡನೆ ಸೈಕಲ್ ಮೇಲೆ ಮೈಸೂರಿನ ಉದ್ಧಗಲಕ್ಕೂ ಸಮೀಪದ ಚಾಮುಂಡಿ ಬೆಟ್ಟಕ್ಕೂ ಪಕ್ಕದ ನಂಜನಗೂಡು, ದೂರದ ತಲಕಾಡು ಇತ್ತ ಶ್ರೀರಂಗಪಟ್ಟಣದ ರಂಗನತಿಟ್ಟು ಹಾಗೂ ಮೈಸೂರಿನ ಹೊರವಲಯದ ಕೆಆರ್ ಎಸ್ ಬೃಂದಾವನ ಇವೆಲ್ಲೆಡೆಗೂ ಮಿತ್ರರ ಹಿಂಡು ಗಟ್ಟಿ ಸೈಕಲ್ ಮೇಲೆ ತಿರುಗಾಡುತ್ತಾ, ಹುಡುಗುತನದ ಮಜಾ ಮಾಡಿದವರೇ .. ಎಲ್ಲೆಲ್ಲಿ ಓಡಾಡಿ ಬಂದರೂ ಏನೆಲ್ಲಾ ಮಜಾ ಮಾಡಿದರೂ ಬೆಳ್ಳಂ ಬೆಳಗ್ಗೆ ಹಾಗೂ ಮುಸ್ಸಂಜೆಗೆ ತಮ್ಮ ಕುಟುಂಬಕ್ಕೆ ಆಧಾರವಾಗಿ ನಿಂತಿದ್ದ ಹತ್ತಾರು ದನಕರುಗಳ ಪೋಷಣೆ, ನಿತ್ಯದ ಹಾಲು ಕರೆಯುವಿಕೆ ಹಾಗೂ ದಿನಕ್ಕೊಂದು ನೂರಾರೂ ಲೀಟರ್ ಹಾಲು ಮಾರಾಟ ಇವೆಲ್ಲವೂ ಇಂದಿನ ಚಾಲೆಂಜಿಂಗ್ ಸ್ಟಾರ್ ನೆನಪಿನಂಗಳದಲ್ಲಿ ಹಚ್ಚ ಹಸುರಾಗಿ ನಿಂತಿವೆ..

ವಿಜಯದಶಮಿಯ ಕೊನೆಯ ದಿನ

ದಸರಾ ವಿಜಯದಶಮಿಯ ಕೊನೆಯ ದಿನದ ಮೆರವಣಿಗೆಗೆ ಅದೆಷ್ಟೋ ನೂಕುನುಗ್ಗಲಿನಲ್ಲಿ ನುಸುಳಿ ಕಣ್ಣುತಣಿಸಿಕೊಂಡವರು ದಚ್ಚು!   ಸುಮಾರು ಏಳನೇ ತರಗತಿಯಿಂದ ಪ್ರೌಢ ಶಾಲೆ ದಾಟುವವರೆಗೂ ಜಂಬು ಸವಾರಿಯ ದೃಶ್ಯವ ಕಣ್ಣಾರೆ ಕಂಡು, ಪುಳಕಗೊಂಡು, ಅದೇ ರಾತ್ರಿಯ ಬನ್ನೀ ಮಂಟಪದ ಪಂಜಿನ ಕವಾಯಿತು ಅಂದರೆ ಟಾರ್ಚ್ ಲೈಟ್ ಪರೇಡ್ ಗಳಲ್ಲಿ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ಭಾಗವಹಿಸಿದಾಗ  ಅಂದು ಒಂದು ಥ್ರಿಲ್ ಆಗಿತ್ತಂತೆ ದರ್ಶನ್ ಗೆ..

Image result for bannimantap mysore dasara

 

Tags