ಸುದ್ದಿಗಳು

ದರ್ಶನ್ ಹುಟ್ಟುಹಬ್ಬಕ್ಕೆ ಬಂತು ಮಕ್ಕಳಿಂದ ವಿಶೇಷವಾದ ಗಿಫ್ಟ್

ಬೆಂಗಳೂರು, ಫೆ.19:

ನಟ ದರ್ಶನ್ ಹುಟ್ಟು ಹಬ್ಬ ಇತ್ತೀಚೆಗೆ ನಡೆದಿದೆ. ಇದೀಗ ಈ ನಟನಿಗೆ ಮಕ್ಕಳು ಹಾಡಿನ ಮೂಲಕ ಹುಟ್ಟುಹಬ್ಬದ ಶುಭಾಷಯ ಹೇಳಿದ್ದಾರೆ.

ನಟ ದರ್ಶನ್ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಇಷ್ಟಪಡುವ ನಟ. ಈ ನಟನ ಹುಟ್ಟುಹಬ್ಬ ಬಂದರೆ ಸಾಕು ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಸಂಭ್ರಮವೋ ಸಂಭ್ರಮ.  ಈ ನಟನಿಗೆ ವಿಭಿನ್ನ ರೀತಿಯಲ್ಲಿ ವಿಶ್ ಮಾಡಬೇಕು. ಗಿಫ್ಟ್ ನೀಡಬೇಕು ಅಂತಾ ಅದೆಷ್ಟೋ ಮಂದಿ ಮುಂಚೆಯೇ ಭಿನ್ನ ವಿಭಿನ್ನ ಗಿಫ್ಟ್ ಗಳನ್ನು ಈ ಬಾರೀಯ ಹುಟ್ಟುಹಬ್ಬಕ್ಕೆ ನೀಡಿದ್ದಾರೆ. ಇದೀಗ ಈ ನಟನ ಹುಟ್ಟುಹಬ್ಬಕ್ಕೆಂದು ಮಕ್ಕಳು ಹಾಡಿನ ಮೂಲಕ ವಿಶ್ ಮಾಡಿದ್ದಾರೆ.

ಯೋಗರಾಜ್ ಭಟ್ ಕೈ ಗೆ ಸಿಕ್ಕ ದರ್ಶನ್ ಫ್ಯಾನ್ಸ್

ಹೌದು, ಈ ಮಕ್ಕಳು ದರ್ಶನ್ ಮನೆ ಹತ್ತಿರ ಬಂದು ಈ ಹಾಡಿನ ಗಿಫ್ಟ್ ನೀಡಿಲ್ಲ. ಬದಲಾಗಿ ಯೋಗರಾಜ್ ಭಟ್ ಮುಂದೆ ಈ ಹಾಡನ್ನು ಹಾಡಿದ್ದಾರೆ. ಮಂಗಳೂರಿನ ಕಡೆ ಯೋಗರಾಜ್ ಭಟ್ ಹಾಗೂ ಪಂಚತಂತ್ರ ಟೀಮ್ ಹೋದಾಗ ಈ ಹುಡುಗರು ಸಿಕ್ಕಿದ್ದಾರೆ. ಈ ವೇಳೆ ದರ್ಶನ್ ಗಾಗಿ ಹಾಡು ಬರೆದಿದ್ದೇವೆ ಎಂದ್ರಂತೆ. ಆಗ ಯೋಗರಾಜ್ ಭಟ್ ಹಾಡ್ರಪ್ಪ ನೋಡೋಣ ಅಂದಿದ್ದಾರೆ.

ಮಕ್ಕಳ ಹಾಡಿಗೆ ಯೋಗರಾಜ್ ಭಟ್ ಫಿದಾ

ಕರುನಾಡಿನ ಕರಿಯಾ ಇವನು

ಅಭಿಮಾನಿಗೆ ಸಾರಥಿ ಇವನು

ಜಗಮೆಚ್ಚಿದ ದಾಸ ಇವನು

ತೂಗುದೀಪದ ಪುತ್ರ ಇವನು

ಈ ನಮ್ಮ ಪ್ರೀತಿಯ ರಾಮು

ಕೋಟಿ ಕೋಟಿ ಕನ್ನಡಿಗ ಯೋಧ

ಹ್ಯಾಪಿ ಹ್ಯಾಪಿ ದರ್ಶನ್ ಅಣ್ಣ

ರಾಯಣ್ಣನ ಕನಸು ಇವನು

ಸಿರಿ ಗಂಧದ ಸುಂಟರ ಗಾಳಿ ಇವನು

ಛಲ ಬಿಡದ ಚಕ್ರವರ್ತಿ

ಹೀಗೆ ತಮ್ಮದೇ ಆದ ಶೈಲಿಯಲ್ಲಿ ಈ ಮಕ್ಕಳು ಹಾಡನ್ನು ಬರೆದಿದ್ದಾರೆ.

ರಾಕಿ ಬಾಯ್ ಗೆ ತಾಯಿಯಾಗಿದ್ದ ಅರ್ಚನಾ ಈಗ ನಾಯಕಿ..!!!

#darshan #sandalwood #kannadamovies #balkaninews #darshanandyograjbhatt #darshanbirthday

 

Tags

Related Articles