ಸುದ್ದಿಗಳು

ಆನೆ ಬಂತೊಂದು ಆನೆ..! ಮೈಸೂರ್  ದಸರಾ ಆನೆ..!!

ದಸರಾ ಆನೆಗಳ  60 ದಿನದ  ಒಟ್ಟೂ  ವೆಚ್ಚ  ವರ್ಷಂ ಪ್ರತೀ ಬರೇ  25 ಲಕ್ಷರೂ. !!!

BALKANI DASARA-2018

ಆನೆ..!,  …ಈ ಪ್ರಪಂಚದಲ್ಲಿ ಸೃಷ್ಟಿಕರ್ತ ನಿರ್ಮಿಸಿದ ಅತೀದೊಡ್ಡ ಪ್ರಾಣಿ ತಾನೆ..!  ಆನೆ..!! ..ಆನೆ..!!!, .. ಹೌದೌದು.. ಆನೆಗಳಿಲ್ಲದ , ದಸರಾ  ಊಹಿಸಲೂ ಅಸಾಧ್ಯ  ಅಲ್ವಾ? ದಸರಾ  ಪ್ರಯುಕ್ತ ಈ ಗಜಪಯಣ  ಮೈಸೂರಿನ ಬಳಿಯ ಶ್ರೀರಂಗಪಟ್ಟಣದಲ್ಲಿ  ಆರಂಭವಾಗಿದ್ದೇ 1610ರಲ್ಲಿ!.  ಅಂದಿನಿಂದ ಪ್ರತೀ ವರ್ಷ ಆಗಸ್ಟ್ ತಿಂಗಳ ಮಧ್ಯೆಗೇ ಶುರು  ಈ ಪ್ರಕ್ರಿಯೆ.

ಅಸಲಿಗೆ, ಪ್ರತೀ ವರ್ಷ ನಾಗರಹೊಳೆಯ ಸಮೀಪ ವೀರನಹೊಹಳ್ಳಿಯಲ್ಲಿ ಈ ದಸರಾಗೆಂದೇ ಆನೆಗಳ ತರಬೇತಿ ಶುರುವಾಗುತ್ತೆ!  ಮೈಸೂರಿಗೂ ಅಲ್ಲಿಗೂ 70 ಕಿ.ಮೀ. ದೂರ ಎನ್ನಿ!  ಒಟ್ಟು 14 ಆನೆಗಳು ದಸರಾ ಜಂಬೂ ಸವಾರಿಗೆಂದೇ ಮೀಸಲು.

ರಾಜಮನೆತನದ ಪದ್ಧತಿಯಂತೆ ಮಹಾರಾಜರ ಪಟ್ಟದಾನೆ ಯೋಡನೆ ರಾಜರೂ, ಆ ದೂರದ ಕಾಡಿನಲ್ಲಿ ವರ್ಷದ ಹತ್ತೂ ತಿಂಗಳು ವಾಸಿಸುವ  ಅರಣ್ಯ ಇಲಾಖೆಯ  ಅಧೀನಸ್ಥ ಆನೆಗಳಿಗೆ ಪೂಜೆ ಮಾಡಿ, ಅವುಗಳ ಮಾವುತರೂ, ಕವಾಡಿಗಳೂ  ಆ ಆನೆಗಳನ್ನು ಸಿಂಗರಿಸಿ ಅರಮನೆಗೆ ಲಾರಿಗಳ ಮೇಲೇರಿಸಿ  ಕರೆತರುವ ಸಂಪ್ರದಾಯ. ಹಾಗೆ ಬಂದ ಗಜಗಳಿಗೆ ಭಾರೀ ಸ್ವಾಗತ ಅಂಬಾವಿಲಾಸ ಅರಮನೆಯ ಮಹಾದ್ವಾರದಲ್ಲಿ!

ಮುಂದಿನ ಆರೆಂಟು ವಾರಗಳಲ್ಲಿ ನಿತ್ಯವೂ ಈ ಆನೆಗಳಿಗೆ ಪೊಗದಸ್ತಾದ ಆಹಾರ, ವಾರಕ್ಕೆರಡು ಸಲ ಮಜವಾದ ಸ್ನಾನ, ವಾಹ್! ರಾಜೋಪಚಾರ ಅಂದ್ರೆ ಇದೇನೇ..! ಏನಿಲ್ಲವೆಂದರೂ ಪ್ರತೀ ಆನೆಗೆ ತಗಲುವ ಒಟ್ಟೂ ಖರ್ಚು2 ಲಕ್ಷ ರೂ. ಈ  25 ಲಕ್ಷದ ಜೊತೆಗೆ ಅರಣ್ಯ ಇಲಾಖೆ ಆನೆಗಳ, ಮಾವುತರ ಜೀವವಿಮೆಗಾಗಿ 35 ಲಕ್ಷ ಹಾಗೂ ಆನೆಗಳಿಂದ ಆಸ್ತಿ-ಪಾಸ್ತಿಗಳಿಗೆ ಉಂಟಾಗಬಹುದಾದ ನಷ್ಟಗಳಿಗೆ ರೂ. 30 ಲಕ್ಷ…ಉಫ್! ರೀ, ದುಬಾರೆ ಫಾರೆಸ್ಟ್ ನಿಂದ ದಸರಾಕ್ಕೆಂದು ಆಗಮಿಸುವ ಈ 12 ಆನೆಗಳು ಬಹಳಾನೇ ದುಬಾರೀ.. ಕಣ್ರಿ..!

ಒಂದು ಮಾತು! ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬೆಳೆದ ಈ ಆನೆಗಳೊಡನೆ ಅತಿದೊಡ್ಡ ಸಮಸ್ಯೆ ಎಂದರೆ.., ದಸರಾ ಉತ್ಸವದ ಅಂತಿಮದಿನವಾದ ವಿಜಯದಶಮಿಯ ಸಂಜೆಗೆ ಬನ್ನಿಮಂಟಪದಲ್ಲಿ ನಡೆಯುವ ಟಾರ್ಚ್ ಲೈಟ್ ಪರೇಡ್ ನಲ್ಲಿ ಪೋಲೀಸ್ ಪಡೆಯಿಂದ ನೀಡಲಾಗುವ 21 ಗನ್ ಸಲ್ಯುಟ್. ಇದಂತೂ ಕಿವಿಗಡಚಿಕ್ಕುವ ಶಬ್ದ ಹೊಮ್ಮುವ ಕಾರಣ, ಈ ಆನೆಗಳು ಭಯಬೀತವಾಗುವುದನ್ನು ಒಗ್ಗಿಸಿಕೊಳ್ಳುವ ತರಬೇತಿ ನೀಡುವುದು.

ದಸರಾ ಆನೆಗಳ ಒಂದು ದಿನದ ದಿನಚರಿ ಕುರಿತು ಕೊಂಚ ಮಾಹಿತಿ ಕೊಟ್ಟರೆ ನಿಮಗಿಷ್ಟವಾಗಬಹುದು..:

ಮುಂಜಾನೆ 6.30: ಬೆಳಗಿನ  ಉಪಾಹಾರಕ್ಕೆ ಬೇಯಿಸಿದ ತರಕಾರಿಗಳು, ಬೇಳೆಕಾಳುಗಳು, ಆನೆಯ ಆರೋಗ್ಯಕ್ಕೆ ಬೇಕಾಗುವ ಪೋಷಕಾಂಶಗಳು.

7.30 : ಎಲ್ಲಾ ಆನೆಗಳಿಗೂ  ಬೆನ್ನ ಮೇಲೆ ಸಾಕಷ್ಟು ಹೊರೆ ಹೊರಿಸಿ 5 ಕಿ.ಮೀ. ತಿರುಗಾಟ .

10.30: ಗಂಡಾನೆಗಳಿಗೆ ತಣ್ಣೀರು ಸ್ನಾನ, ಬಳಿಕ ಭತ್ತ-ಹುಲ್ಲು-ಬಾಳೆ ಎಲೆಗಳ ಊಟ, ಹೊಟ್ಟೆತುಂಬಾ..

ಸಂಜೆ 4.0:ಆನೆಗಳಿಗೆ ತಿಂಡಿಯ ವೇಳೆ..: ದೊಡ್ಡ ದೊಡ್ಡ ಬೆಲ್ಲದ ಅಚ್ಚು, ತೆಂಗಿನಕಾಯಿ, ಹುಲ್ಲು ಸೇರಿದಂತೆ

6.0: ದಸರಾ ಮೆರವಣಿಗೆಯ ಅಣಕು ಮೆರವಣಿಗೆ, ತರಬೇತಿ ನಡೆ, ಅದೇ ದಾರಿಗಳಲ್ಲಿ ಅಷ್ಟೇ ದೂರ.

 

ರಾತ್ರಿಯ 7.0: ಭೋಜನ: ಕೆಲವಾರು ಕಿಲೋಗಳಷ್ಟು ವಿಶೇಷವಾಗಿ ತಯಾರಿಸಿದ  ಒಂದಷ್ಟು ಮುದ್ದೆಗಳು  

ಕಾಡಿನಲ್ಲಿ ಈ ಆನೆಗಳು ಅದೆಷ್ಟು ಆಕ್ರಮಣಕಾರಿಯೋ , ನಾಡಿಗೆ ಅತಿಥಿಗಳಾಗಿ ಆಗಮಿಸಿ ಇಲ್ಲಿನ ನಾಗರೀಕರೊಡನೆ ಬೆರೆತು ಕಿಕ್ಕಿರಿದ ಜನಸಂದಣಿಗಳ ನಡುನಡುವೆ ರಸ್ತೆಯ ಇಕ್ಕೆಲಗಳಲ್ಲಿ ತರಬೇತಿಗೆಂದು ನಡೆಸಿಕೊಂಡು ಹೋಗುವಾಗ ಇವುಗಳ  ಬೃಹತ್ ಶರೀರಗಳ ಆಂತರ್ಯದಲ್ಲಿ ಅದೇನೆಲ್ಲಾ ಹೊಯ್ಲು ನಡೆದಿರುತ್ತವೋ ಅವಕ್ಕೇ ಗೊತ್ತು.

ಸದ್ಯ ವಿಜಯದಶಮಿಯ ದಿನ ತಮ್ಮ ಅಷ್ಟೂ ದಿನಗಳ ತರಬೇತಿಯನ್ನು ಸಾಕಾರ ಮಾಡಿಸಲೋ ಏನೋ,  ದ್ರೋಣ, ಅರ್ಜುನ , ಭೀಮ, ಕೃಷ್ಣ, ಗೋಪಿ, ಕಾವೇರಿ, ಗೋಪಾಲಸ್ವಾಮಿ, ವರಲಕ್ಷ್ಮಿ, ಗಜೇಂದ್ರ, ಹರ್ಷ, ಅಭಿಮನ್ಯು, ವಿಜಯ, ಪ್ರಶಾಂತ, ವಿಕ್ರಮ ಶ್ರೀಮದ್ಗಾಂಭೀರ್ಯದಿಂದ ಬ್ಯಾಂಡ್ ಸೆಟ್ ವಾದ್ಯಗೋಷ್ಠಿಯ ತಾಳಕ್ಕೆ ತಕ್ಕಂತೆ ಮುನ್ನಡೆಯುವುದ ನೋಡಿ ಕಣ್ತುಂಬಿಕೊಳ್ಳುತ್ತಾರೆ ಲಕ್ಷೋಪಲಕ್ಷ ದೇಶ-ವಿದೇಶಿಗರು. ಬೆಟ್ಟದ ತಾಯಿಯ ಶ್ರೀರಕ್ಷೆ ಈ ಆನೆಗಳಿಗೂ ಇರಲಿ..ಅಲ್ವಾ?!

-ಡಾ|| ಪಿ.ವಿ.ಸುದರ್ಶನ ಭಾರತೀಯ, editor@balkaninews.com

Tags