ಸುದ್ದಿಗಳು

ದಸರಾ ಆನೆಗಳ ತಾಲೀಮು ಹೇಗಿರುತ್ತದೆ ಗೊತ್ತೆ…?

ಮೈಸೂರು ದಸರಾ ವಿಶೇಷ

ಮೈಸೂರು, ಅ.17: ವಿಶ್ವವಿಖ್ಯಾತಿಯ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಮೈಸೂರಿನ ಬೀದಿಗಳಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದ ಆನೆಗಳು ಮೆರವಣಿಗೆ ನಿಜಕ್ಕೂ ಕಣ್ಮನ ಸೆಳೆಯುತ್ತದೆ. ಜಂಬೂ ಸವಾರಿ ಮೆರವಣಗೆಗೂ ಮುನ್ನ ಇದಕ್ಕೆ ಆನೆಗಳ ತಾಲೀಮು ಕುರಿತು ಬಹುತೇಕರಿಗೆ ತಿಳಿಯದೇ ಇರುವ ವಿಷಯವಾಗಿದೆ.

ಎಂದಿನಂತೆ ಈ ಬಾರಿಯ ದಸರಾದಲ್ಲಿ ಅಂಬಾರಿ ಹೊರುವ ಹೊಣೆ ಅರ್ಜುನನದ್ದು. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುತ್ತಾನೆ ಈ ಅರ್ಜುನ. ಅರ್ಜುನನೊಂದಿಗೆ ಲಯಬದ್ಧವಾಗಿ ಉಳಿದ ಆನೆಗಳು ಸಾಥ್ ನೀಡುತ್ತವೆ. ಐತಿಹಾಸಿಕ ವಿಜಯದಶಮಿಯ ಜಂಬೂ ಸವಾರಿಯ ಸಂಭ್ರಮಕ್ಕಾಗಿ  ಹಲವು ತಿಂಗಳುಗಳ ಪರಿಶ್ರಮ, ತಾಲೀಮು ಇದೆ.ಆನೆಗಳಿಗೆ ನೀಡುವ ವಿವಿಧ ಬಗೆಯ ಖಾದ್ಯಗಳು

ಶಿಬಿರದಲ್ಲಿದ್ದಾಗ ರಾಗಿ ಮುದ್ದೆಗಳನ್ನು ಸವಿಯುವ ಈ ಆನೆಗಳಿಗೆ ದಸರಾ ಪ್ರಯುಕ್ತ ಮೈಸೂರಿನಲ್ಲಿ ವಿಜಯದಶಮಿ ಹಬ್ಬದ ಕೊನೆಯವರೆಗೆ ರಾಜವೈಭವದ ಭೋಜನ ನೀಡಲಾಗುತ್ತದೆ. ಬೆಲ್ಲ, ಕಡಲೆ ಬೀಜ, ಕಬ್ಬು, ಮೇವು, ಬಾಳೆ ಎಲೆಗಳು, ಹಸಿರು ಕಾಳುಗಳು, ಬೇಯಿಸಿದ ಅನ್ನ ರುಚಿಗೆ ತಕ್ಕ ಉಪ್ಪು.. ಹೀಗೆ ಹಲವಾರು ಖಾದ್ಯಗಳನ್ನು ನೀಡಲಾಗುತ್ತದೆ. ಇನ್ನು ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಅರ್ಜುನನಿಗೆ ಸ್ಪೆಷಲ್ ಟ್ರೀಟ್‍ಮೆಂಟ್ ನೀಡಲಾಗುತ್ತದೆ. ಉದ್ದು. ಗೋಧಿ, ಕುಸುಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಮೊದಲಾದ ಆಹಾರಗಳು ಅರ್ಜುನ ಸವಿಯುತ್ತಾನೆ.ಜಂಬೂ ಸವಾರಿ

ಕ್ಯಾಪ್ಟನ್ ಅರ್ಜುನನೇ ಹೆಚ್ಚು ಶಕ್ತಿವಂತನಾಗಿದ್ದು, ಕಳೆದ ಬಾರಿ 5.250 ಕೆಜಿ ಇದ್ದ ಅರ್ಜುನ ಈ ಬಾರಿ 400 ಕೆಜಿಯಷ್ಟು ತನ್ನ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. 3,120 ಕೆಜಿ ತೂಕ ಹೊಂದಿರುವ ವರಲಕ್ಷ್ಮಿ ಕಳೆದ ವರ್ಷಕ್ಕಿಂತ ಈ ಬಾರಿ 210 ಕೆಜಿಯಷ್ಟು ಹೆಚ್ಚಾಗಿದ್ದು, ಕಳೆದ ಬಾರಿ 2,830 ಕೆಜಿ ತೂಕವಿದ್ದಳು. ವಿಕ್ರಮ ಆನೆ 3985 ಕೆಜಿ , ಧನಂಜಯ 4045, ಗೋಪಿ 4435 ಹಾಗೂ ಚೈತ್ರ 2,920 ಕೆಜಿ ತೂಕ ಹೊಂದಿವೆ. ಒಟ್ಟಿನಲ್ಲಿ ನಾಡಹಬ್ಬ ದಸರಾ ಜಂಬೂ ಸವಾರಿ ಕುರಿತು ಎಷ್ಟು ವರ್ಣಿಸಿದರೂ ಸಾಲದು.

Tags