ಸುದ್ದಿಗಳು

ದಸರಾ ಹಬ್ಬದಂದು ಚಲನಚಿತ್ರೋತ್ಸವ

ಮೈಸೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2018

 

 

ಮೈಸೂರು ದಸರಾ ಮಹೋತ್ಸವದಲ್ಲಿ ದಸರಾ ಚಲನಚಿತ್ರೋತ್ಸವ ಸಹ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿ ವರ್ಷವು ಸಹ ಕನ್ನಡದ ಜನಪ್ರಿಯ ಚಲನಚಿತ್ರಗಳು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಜೊತೆಗೆ ದೇಶ-ವಿದೇಶಗಳ ಅತ್ಯುತ್ತಮ ಹಾಗೂ ಜಾಗತಿಕ ಮನ್ನಣೆ ಪಡೆದ ಸಿನಿಮಾಗಳನ್ನು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ.

 ಜಾಗತಿಕ ಮಾರುಕಟ್ಟೆ

ದಸರಾ ಹಬ್ಬದಂದು ಸಿನಿಮಾಗಳ ಪ್ರದರ್ಶನವಿರುವುದರಿಂದ ನಮ್ಮ ಸಿನಿಮಾಗಳಿಗೆ ‘ಜಾಗತಿಕ ಮಾರುಕಟ್ಟೆ’ ಸಿಗುತ್ತಿದೆ. ಏಕೆಂದರೆ ಈ ಸಮಯದಲ್ಲಿ ಹಲವಾರು ದೇಶ-ವಿದೇಶಗಳಿಂದ ಜನರು ಬಂದಿರುತ್ತಾರೆ. ನಮ್ಮ ಸಿನಿಮಾಗಳನ್ನೂ ನೋಡುತ್ತಾರೆ.

ಮೈಸೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಪ್ರತಿವರ್ಷ ದಸರಾ ಹಬ್ಬದಂದು ಮೈಸೂರಿನಲ್ಲಿ ಆಯ್ದ ಕೆಲವು ಚಿತ್ರಗಳ ಪ್ರದರ್ಶನ ಮಾಡುವುದರಿಂದ ‘ಮೈಸೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ ಎಂಬ ನಾಮಕರಣ ಆಗಬೇಕಿದೆ.

ಸಿನಿಮಾ ಪ್ರದರ್ಶನ

ದಸರಾ ಹಬ್ಬದಂದು, ಮೈಸೂರಿನ ಆಯ್ದ ಚಿತ್ರ ಚಿತ್ರಮಂದಿರಗಳು ಸೇರಿದಂತೆ ಮಲ್ಟಿಪ್ಲೇಕ್ಸ್ ಗಳಲ್ಲಿಯೂ ದಿನ ಪೂರ್ತಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಇದರಿಂದ ಸಿನಿಮಾಸಕ್ತರಿಗೂ  ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.

ಹೀಗಾಗಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ‘ಮೈಸೂರು ದಸರಾ ಚಲನಚಿತ್ರೋತ್ಸವ’ ಸಮಾರಂಭ ಹೆಚ್ಚು ಆಕರ್ಷಣೆಯಾಗಿ ಕಂಡು ಬರುತ್ತದೆ.

Tags