ಸುದ್ದಿಗಳು

ಮಲ್ಲಿಗೆ ನಗರಿ ಪಾರಂಪರಿಕ ಕಟ್ಟಡಗಳ ದೀಪಾಲಂಕಾರ ಅದ್ಭುತ..!

ಮೈಸೂರು ದಸರಾ ವಿಶೇಷ

ಬೆಂಗಳೂರು, ಅ.17: ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಸ್ಥಳೀಯರ, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಹಬ್ಬದ ಅಂಗವಾಗಿ ಕಟ್ಟಡಗಳ ದೀಪಾಲಂಕಾರವು ದಸರಾ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.

ಪಾರಂಪರಿಕಾ ಕಟ್ಟಡಗಳಾದ ಲೆಪ್ಟಿನೆಂಟ್ ಡೆಪ್ಯುಟಿ ಕಮಿಷನರ್ ಕಚೇರಿ, ನೀರಾವರಿ ಕಚೇರಿ, ಕ್ರಾಫರ್ಡ್ ಹಾಲ್ ಮೈಸೂರು ನಗರಪಾಲಿಕೆ ಕಚೇರಿ, ರೈಲ್ವೇ ಆಫೀಸ್, ಕೆ.ಆರ್ ಆಸ್ಪತ್ರೆ, ಕಾವಾ ಕಟ್ಟಡ, ಜಲದರ್ಶಿನಿ ಮತ್ತು ಚಾಮುಂಡಿ ಅತಿಥಿ ಗೃಹ ಸೇರಿದಂತೆ ನಗರದಲ್ಲಿರುವ 200 ಕಟ್ಟಡಗಳು ನವ ವಧುವಿನಂತೆ ಕಂಗೊಳಿಸುತ್ತಿವೆ.ದಸರಾ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುವುದೇ ಒಂದು ಅಂದ

ನವರಾತ್ರಿ ದೀಪಾಲಂಕಾರ ಮೈಸೂರಿನ ದಸರಾ ಸೌಂದರ್ಯ ವೃದ್ಧಿಸಿದೆ. ಅರಮನೆಗಳ ನಗರ ಎಂಬ ಖ್ಯಾತಿಯ ಮೈಸೂರು ಸಂಪೂರ್ಣವಾಗಿ ಸಂಭ್ರಮದಲ್ಲಿ ಮಿಂದೆದ್ದಿದೆ. ಟಾಂಗಾ ಮತ್ತು ಟ್ರಿನ್ ಟ್ರಿನ್ ಬೈಸಿಕಲ್ ಅಥವಾ ಬಸ್‍ ನ ತೆರೆದ ಟಾಪ್ ಮೇಲೆ ಕುಳಿತು ಮೈಸೂರಿನ ಕಟ್ಟಡಗಳ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೆಚ್ಚಿನ ಬೇಡಿಕೆಯಿಂದಾಗಿ ಬಸ್ ಟಿಕೆಟ್ ಬುಕ್ಕಿಂಗ್ ಬಂದ್ ಮಾಡಲಾಗಿದೆ.ನಗರದ 52 ಕಿಮೀ ರಸ್ತೆಗಳಲ್ಲಿ ವರ್ಣರಂಜಿತ ದೀಪಾಲಂಕಾರ ಮಾಡಲಾಗಿದೆ. ಕುದುರೆ ಗಾಡಿಗಳಲ್ಲಿ ಮೈಸೂರು ಪ್ರವಾಸಕ್ಕೆ 400 ರೂ ವರೆಗೆ ದರ ಫಿಕ್ಸ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಬೆಳಗ್ಗಿನ ಹೊತ್ತು ಮೈಸೂರು ರೌಂಡ್ಸ್ ಖುಷಿ ನೀಡಿದರೆ, ರಾತ್ರಿ ಹೊತ್ತು ಐತಿಹಾಸಿಕ ಪರಂಪರೆ ಕಟ್ಟಡಗಳ ವಿದ್ಯುತ್ ದೀಪಾಲಂಕಾರ ನೋಡುಗರ ಆನಂದವನ್ನು ವೃದ್ಧಿಸುತ್ತದೆ.

Tags