ಸುದ್ದಿಗಳು

ಕುಸ್ತಿ ಪಂದ್ಯಾವಳಿ ವೇಳೆ ಗದ್ದಲ…

ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕುಸ್ತಿ

ಮೈಸೂರು,ಅ.13: ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ವೇಳೆ ದಾಂದಲೆ-ಗದ್ದಲ ಉಂಟಾಯಿತು. ಧಾರವಾಡ ಹಾಗೂ ಬೆಳಗಾವಿ ಕುಸ್ತಿಪಟುಗಳ ಮಧ್ಯೆ ನಡೆಯುತ್ತಿದ್ದ ಪಂದ್ಯ ಸಂದರ್ಭದಲ್ಲಿ ಗಲಾಟೆ ನಡೆಯಿತು. ಅಂಕಗಳ ವಿಷಯದಲ್ಲಿ ಉಭಯ ತಂಡದಗಳ ಬೆಂಬಲಿಗರು ಗಲಾಟೆ ನಡೆಸಿದರು.

ರೆಫರಿಗಳು ಹಾಗೂ ಕುಸ್ತಿಪಟುಗಳ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸ್ಥಳಕ್ಕಾಗಮಿಸಿದ  ಪೋಲಿಸರು ಗಲಾಟೆಯನ್ನು ತಡೆದು ಸಮಾಧಾನಗೊಳಿಸಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಶಾಂತಯುತ ವಾತಾವರಣ ನಿರ್ಮಾಣವಾಯಿತು.

ಡೂಪ್ಲಿಕೇಟ್ ಸಿದ್ದರಾಮಯ್ಯ ಪ್ರತ್ಯಕ್ಷ..!

ರೈತ ದಸರಾ ಅಚ್ಚರಿಯೊಂದಕ್ಕೆ ಕಾರಣವಾಯಿತು. ರೈತ ದಸರಾ ದಿಢಿರ್ ಆಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಣಿಸಿದ್ದಾರೆ. ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಆದರೆ, ಅಸಲೀಯತ್ತೇಂದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ದಸರಾದಲ್ಲಿ ಪಾಲ್ಗೊಂಡಿರಲಿಲ್ಲ. ಇವರನ್ನೇ ಹೋಲುವ ತದ್ರೂಪಿ ಟಿ.ನರಸೀಪುರದ ರೈತರೊಬ್ಬರು ರೈತ ದಸರಾದಲ್ಲಿ ಕಾಣಿಸಿಕೊಂಡಿದ್ದು ಈ ತಬ್ಬಿಬ್ಬಿಗೆ ಕಾರಣವಾಯಿತು.

Image result for kusti image

ಹಲವರು ಸ್ವತಃ ಸಿದ್ದರಾಮಯ್ಯ ಅವರೇ ಬಂದರೇ ಎಂದು ಅಚ್ಚರಿಯಿಂದ ಅವರನ್ನು ಮಾತನಾಡಿಸಲು ಮುಂದಾದ ಪ್ರಸಂಗವೂ ನಡೆಯಿತು. ನಂತರ ಅವರು ಮಾಜಿ ಮುಖ್ಯಮಂತ್ರಿಯಲ್ಲ ಎಂಬುದು ತಿಳಿಯಿತು. ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ರೈತ ದಸರಾ ಮೆರವಣ ಗೆಗೆ ನಡೆಯಿತು. ರೈತ ದಸರಾ ಕಾರ್ಯಕ್ರಮಗಳು ನಡೆಯಲಿರುವ ಜೆ.ಕೆ.ಮೈದಾನದವರೆಗೂ ಈ ಮೆರವಣಿಗೆ ಆಯೋಜಿಸಲಾಗಿತ್ತು. ಅದಕ್ಕೂ ಮುನ್ನ ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ರೈತ ಮಹಿಳೆಯರು ಕಳಸದೊಂದಿಗೆ ಒಂದೆಡೆ ಸಾಗಿದರೆ ಮತ್ತೊಂದೆಡೆ ಬಂಡೂರು ಕುರಿಗಳು ಗಮನ ಸೆಳೆದವು. ಇದರೊಂದಿಗೆ ರೈತ ಸ್ತಬ್ಧ ಚಿತ್ರಗಳು ಸಹ ಮೆರವಣಿಗೆಯ ಕೇಂದ್ರ ಬಿಂದುವಾಗಿತ್ತು.

 

Tags