ಸುದ್ದಿಗಳು

ಈ ಬಾರಿ ದಸರಾಗೆ ರವೆ ಹೋಳಿಗೆ

ಹಬ್ಬಕ್ಕೆಂದೇ ಹೆಚ್ಚಾಗಿ ರವಾ ಹೋಳಿಗೆ

ದಸರಾಗೆ ಸಿಹಿ ಖಾದ್ಯಗಳಲ್ಲಿ ರವೆ ಹೋಳಿಗೆಯೂ ಒಂದು.. ಹೋಳಿಗೆ ಎಂದರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತದೆ… ಹಬ್ಬಕ್ಕೆಂದೇ ಹೆಚ್ಚಾಗಿ ರವಾ ಹೋಲೀಗೆ ಮಾಡುತ್ತಾರೆ..ರವಾಹೋಳಿಗೆ ಹೇಗೆ ಮಾಡುತ್ತಾರೆ ಎಂಬ ವಿಧಾನ ಇಲ್ಲಿದೆ ನೋಡಿ..

 

ಬೇಕಾಗುವ ಸಾಮಗ್ರಿಗಳು

ಚಿರೋಟಿ ರವೆ-1 ಬಟ್ಟಲು

ಸಕ್ಕರೆ-2 ಬಟ್ಟಲು

ಏಲಕ್ಕಿ ಪುಡಿ-ಸ್ವಲ್ಪ

ತುಪ್ಪ-ಅರ್ಧ ಬಟ್ಟಲು

ಮೈದಾ-ಒಂದೂವರೆ ಬಟ್ಟಲು

ಎಣ್ಣೆ-ಕಾಲು ಬಟ್ಟಲು

ಮಾಡುವ ವಿಧಾನ:

Image result for rave holige

  • ರವೆಯನ್ನು ಚೆನ್ನಾಗಿ ಪರಿಮಳ ಬರುವವರೆಗೂ ಹುರಿಯಿರಿ.
  • ಅದಕ್ಕೆ ತುಪ್ಪ ಸೇರಿಸಿ ಚೆನ್ನಾಗಿ ಹುರಿಯಿರಿ.
  • ನಂತರ ಎರಡರಷ್ಟು ನೀರು ಹಾಕಿ ಬೇಯಿಸಿ ನೀರು ಹಾಕಿ ಕಡಿಮೆ ಉರಿಯಲ್ಲಿ ಗಟ್ಟಿಯಾಗುವವರೆಗೆ ಬೇಯಿಸಿ. ನಂತರ ತುಪ್ಪ ಹಾಗೂ ಏಲಕ್ಕಿ ಪುಡಿ ಹಾಕಿ.
  • Related image
  • ಇದಾದ ನಂತರ ಬಟ್ಟಲಿನಲ್ಲಿ ಮೈದಾ, ಚಿರೋಟಿ ರವೆ, ಎಣ್ಣೆ, ಒಂದು ಚಿಟಿಕೆ ಉಪ್ಪು ಹಾಕಿ ಅಗತ್ಯಕ್ಕೆ ತಕ್ಕನೀರು ಹಾಕಿ ಮೃದುವಾಗಿ ಹಿಟ್ಟನ್ನು ಕಲಸಿ.
  • 1 ಗಂಟೆಗಳ ಕಾಲ ನೆನೆಸಿಡಿ.  ರವೆಯ ಮಿಶ್ರಣ ಊರ್ಣಕ್ಕೆ ಕೊಬ್ಬರಿ ತುರಿ ಸೇರಿಸಿ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ..
  • ಇದರ ಮಧ್ಯಕ್ಕೆ ಚಿರೋಟಿ ರವೆಯ ಹೂರಣ ಸೇರಿಸಿ ಮತ್ತೆ ಉಂಡೆ ಮಾಡಿ ಲಟ್ಟಿಸಿ. ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆ ಬೇಯಿಸಿದ್ರೆ ರವೆ ಹೋಳಿಗೆ ಸವಿಯಲು ಸಿದ್ಧ.

Tags