ಸುದ್ದಿಗಳು

ಡಿಯರ್ ಕಾಮ್ರೇಡ್ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ!!?!!

ವಿಜಯ್ ದೇವೇರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಈ ವರ್ಷದ ಬಹುನಿರೀಕ್ಷಿತ ಚಿತ್ರ. ಈ ಚಿತ್ರ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಬೇಕಿತ್ತು ಆದರೆ ನಿರ್ಮಾಪಕರು ಡಿಯರ್ ಕಾಮ್ರೇಡ್  ಚಿತ್ರ ಬಿಡುಗಡೆಯನ್ನು ಮುಂದೂಡಿದರು. ನಂತರ ಮೇ 31 ರಂದು ಚಲನಚಿತ್ರವು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಹೇಳಿದ್ದರು.. ಆದರೆ ಮತ್ತೊಮ್ಮೆ ತಯಾರಕರು ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ಮಾಡಿದರು ಮತ್ತು ಜುಲೈ 26 ರಂದು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಹೊರಬರಲಿದೆಎಂದು ಬಹಿರಂಗಪಡಿಸಿದರು. ಆದರೆ ಈಗ ಜುಲೈನಲ್ಲೂ ಬಿಡುಗಡೆಯಾಗುವುದಿಲ್ಲ ಎಂದು ಕಾಣುತ್ತದೆ..

Image result for dear comrade

ಮೂಲಗಳ ಪ್ರಕಾರ, ಚಿತ್ರದ ಕೆಲವು ಭಾಗಗಳ ಚಿತ್ರೀಕರಣವು ಚಿತ್ರತಂಡಕ್ಕೆ ತಂಡಕ್ಕೆ ಸಂತೋಷವಾಗಿಲ್ಲ ಮತ್ತು ಆ ದೃಶ್ಯಗಳನ್ನು ಮತ್ತೊಮ್ಮೆ ಚಿತ್ರೀಕರಿಸಲು ಪ್ಲಾನ್ ಹಾಕಿದ್ದಾರೆ. ಚಿತ್ರೀಕರಣ ರೀಶೂಟ್ ಮಾಡಿದರೆ,ಡಿಯರ್ ಕಾಮ್ರೇಡ್ ಬಿಡುಗಡೆ ಮುಂದಕ್ಕೆ ಹೋಗುತ್ತದೆ.

ಮೈತ್ರಿ ಮೂವಿ ಮೇಕರ್ಸ್ ಮತ್ತು ಯಶ್ ರಂಗಿನೇನಿ ನಿರ್ಮಿಸಿರುವ ರತ್ ಕಮ್ಮ ನಿರ್ದೇಶನದ ಮೂಲಕ ಡಿಯರ್ ಕಾಮ್ರೇಡ್ ಚಿತ್ರ ಮೂಡಿ ಬರಲಿದೆ. ಕನ್ನಡ ಸೌಂದರ್ಯ ರಶ್ಮೀಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಜಯ್ ದೇವರಾಕೊಂಡ್ ವಿದ್ಯಾರ್ಥಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ರಶ್ಮಿಕಾ ಮಂದಣ್ಣ ಕ್ರಿಕೆಟಿಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಗೀತಾ ಗೋವಿಂದಂ’ ನಂತರ ಇದು ಎರಡನೇ ಬಾರಿ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಸದ್ಯ ವಿಜಯ್ ದೇವೇರಕೊಂಡ ಫ್ರಾನ್ಸ್‌ನಲ್ಲಿದ್ದು, ಕ್ರಾಂತಿ ಮಾಧವ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.

ಶತದಿನ ಪೂರೈಸಿದ ‘ಯಜಮಾನ’: ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ನೆನಪಿನ ಕಾಣಿಕೆ

#dearcommerade #geethagovindam #rashmikamandanna #tollywoodmovies2019

Tags