ಸುದ್ದಿಗಳು

“ಡಿಯರ್ ಕಾಮ್ರೇಡ್” ಗಾಗಿ ಒಂದಾದ ದುಲ್ಕರ್ ಸಲ್ಮಾನ್ ಹಾಗೂ ವಿಜಯ್ ಸೇತುಪತಿ

ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹಾಗೂ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ “ಡಿಯರ್ ಕಾಮ್ರೇಡ್”. ಈಗಾಗಲೇ ಈ ಚಿತ್ರದ ಟೀಸರ್, ಪೋಸ್ಟರ್, ಟ್ರೇಲರ್ ಬಿಡುಗಡೆಯಾಗಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದು, ಇದೀಗ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ.

Related image

ವಿಜಯ್ ದೇವರಕೊಂಡ ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ಹಾಡನ್ನು ಕೂಡ ಹಾಡಿದ್ದಾರೆ. ಹೌದು, ಕಾಮ್ರೇಡ್ ಆಂಥೇಮ್ ಎಂಬ ಹಾಡು ಬಿಡುಗಡೆಯಾಗಿದ್ದು, ತೆಲುಗಿನಲ್ಲಿ ವಿಜಯ್ ದೇವರಕೊಂಡ, ತಮಿಳಿನಲ್ಲಿ ವಿಜಯ್ ಸೇತುಪತಿ, ಮಲಯಾಳಂ ನಲ್ಲಿ ದುಲ್ಕರ್ ಸಲ್ಮಾನ್ ಹಾಗೂ ಕನ್ನಡದಲ್ಲಿ ಗುಬ್ಬಿ ಹಾಗೂ ವಿಕ್ಕಿ ಈ ಹಾಡನ್ನು ಹಾಡಿದ್ದಾರೆ.

ಈ ಮೂಲಕ ವಿಜಯ್ ದೇವರಕೊಂಡ ರವರ  ‘ಡಿಯರ್ ಕಾಮ್ರೇಡ್’ ಚಿತ್ರಕ್ಕೆ ದುಲ್ಕರ್ ಸಲ್ಮಾನ್ ಹಾಗೂ ವಿಜಯ್ ಸೇತುಪತಿ ಸಾಥ್ ನೀಡಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ಅವರ ಸ್ನೇಹಿತರು ಜೊತೆಗೂಡಿ ಸ್ಟ್ರೈಕ್ ಮಾಡುವುದನ್ನು ಈ ಹಾಡಿನಲ್ಲಿ ಕಾಣಬಹುದಾಗಿದೆ. ಭರತ್ ಕಮ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಡಿಯಲ್ಲಿ ನಿರ್ಮಾಣ ಮಾಡಲಾಗಿದೆ.  ಜಸ್ಟಿನ್ ಪ್ರಭಾಕರನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಈ ಚಿತ್ರದ ಎಲ್ಲಾ ಹಾಡುಗಳು ಬಹಳಷ್ಟು ಹಿಟ್ ಆಗಿವೆ.

ಇದೇ ಜುಲೈ 26ರಂದು ನಾಲ್ಕು ಭಾಷೆಯಲ್ಲಿ ‘ಡಿಯರ್ ಕಾಮ್ರೇಡ್’ ಚಿತ್ರ ಬಿಡುಗಡೆಯಾಗಲಿದೆ.

Image may contain: 1 person, closeup

‘ಪ್ರೆಗ್ನೆನ್ಸಿ’ ಫೋಟೋಶೂಟ್ ಮಾಡಿಸಿಕೊಂಡ ಸೆಲೆಬ್ರೆಟಿಗಳು !!

#balkaninews #sandalwood #kollywood #mollywood #tollywood #vijaydevarakonda #comradeanthemsong #dulquersalmaan

#vijaysethupathi #gubbisinger #dearcomrademovie

Tags