ಸುದ್ದಿಗಳು

‘ಡಿಯರ್ ಮ್ಯೂಸಿಕ್ ಕಾಮ್ರೇಡ್ ಫೆಸ್ಟಿವಲ್’: ರಾಕಿ ಭಾಯ್ ಸ್ಪೀಕಿಂಗ್!!!

ರಶ್ಮಿಕಾ ಮಂದಣ್ಣ  ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನ ಎರಡನೇ ಚಿತ್ರ ‘ಡಿಯರ್ ಕಾಮ್ರೇಡ್ ಟ್ರೈಲರ್ ಇತ್ತೀಚೆಗೆ ತೆಲುಗಿನಲ್ಲಿ ರಿಲೀಸ್ ಆಯಿತು. ಈಗ ಕನ್ನಡದಲ್ಲೂ ಟ್ರೈಲರ್ ಬಿಡುಗಡೆಯಾಗಿದೆ.

ಜುಲೈ 12ರಂದು ಬೆಂಗಳೂರಿನ ಕೋರಮಂಗಲದ ‘ಸೈಂಟ್ ಜಾನ್ಸ್ ಅಡಿಟೋರಿಯಂ’ ನಲ್ಲಿ ಡಿಯರ್ ಕಾಮ್ರೆಡ್ ಮ್ಯೂಸಿಕ್ ಫೆಸ್ಟಿವಲ್ ವೇಳೆ ಟ್ರೈಲರ್ ರಿಲೀಸ್ ಆಗಿದ್ದು, ರಾಕಿಂಗ್ ಸ್ಟಾರ್ ಯಶ್ ಬಂದಿದ್ದು ಟ್ರೈಲರ್ ರಿಲೀಸ್ ಮಾಡಿದರು.

ಆಂಕರ್ ಅನುಶ್ರೀ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾನ್ಸ್, ಮ್ಯೂಸಿಕ್ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು.. ರಾಹುಲ್ ಡಿಟ್ಟೋ ‘ರಾಕಿ ಭಾಯ್’ ರಾಪ್ ಸಾಂಗ್ ಹಾಡಿದರೆ, ಯಶ್ ಸ್ಟೇಜ್ ಮೇಲೆ ಬಂದು ತಮ್ಮ ಕೆಲ ಸಿನಿಮಾ ಡೈಲಾಗ್ ಗಳಿಂದ ಅಭಿಮಾನಿಗಳಿಗೆ ಕಚಗುಳಿಯಿಟ್ಟರು.

ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ವಿಜಯ್ ದೇವರಕೊಂಡಗೆ ಕನ್ನಡ ಕಲಿಸಿಕೊಟ್ಟಿದ್ದಾರೆ ನಮ್ಮ ರಾಕಿ ಭಾಯ್. ಇದೇ ವೇಳೆ ರಶ್ಮಿಕಾ ಹಾಗೂ ವಿಜಯ್ ಒಂದು ಹಾಡಿಗೆ ಡಾನ್ಸ್ ಮಾಡಿದರು.. ತಮ್ಮ ನೆಚ್ಚಿನ ನಟರನ್ನು ನೋಡಲು ಆ ಸಭಾಂಗಣವೇ ಕಿಕ್ಕಿರಿದು ತುಂಬಿತ್ತು.

‘ಹಲೋ’ ಆಪ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ‘ಡಿಯರ್ ಕಾಮ್ರೇಡ್’ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ, ರೌಡೀಸ್ ಯುವಕರ ಯೂತ್ ಐಕಾನ್ ವಿಜಯ್ . ‘ಡಿಯರ್ ಕಾಮ್ರೇಡ್’ ಟ್ರೈಲರ್ ಕುತೂಹಲ ಮತ್ತು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಚಿತ್ರ ಹಲವಾರು ಕಥೆಗಳನ್ನು ಹೊಂದಿದೆ ಎಂದು ಟ್ರೈಲರ್ ಹೇಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ವಿದ್ಯಾರ್ಥಿ ರಾಜಕೀಯ ಮತ್ತು ಸುಂದರವಾದ ಕಾಲೇಜು ಪ್ರೇಮಕಥೆಯನ್ನು ಹೊಂದಿದೆ. ಕಾಮ್ರೇಡ್ ಬಾಬಿ ಕೃಷ್ಣನ್ (ವಿಜಯ್) ಕಾಲೇಜಿನಲ್ಲಿ ಪೊಲಿಟಿಕ್ಸ್ ವಿರುದ್ಧ ವಿದ್ಯಾರ್ಥಿಗಳನ್ನು ಮುನ್ನಡೆಸುತ್ತಾನೆ.  ಇನ್ನು ರಾಜ್ಯಮಟ್ಟದ ಕ್ರಿಕೆಟ್ ಆಟಗಾರ್ತಿ ಲಿಲ್ಲಿಯನ್ನು (ರಶ್ಮಿಕಾ ಮಂದಣ್ಣ)  ಪ್ರೀತಿಸುತ್ತಾನೆ

ಸುಹಾನಿ. ಬಡೆಕ್ಕಿಲ

ರಕ್ಷಿತ್ ಶೆಟ್ಟಿ ಜೊತೆಗಿನ ಲವ್ ಬ್ರೇಕ್ ಅಪ್ ಬಗ್ಗೆ ರಶ್ಮಿಕಾ ಕೊಟ್ಟ ರಿಯಾಕ್ಷನ್ ಹೀಗಿದೆ ನೋಡಿ..!!!

#dearcomrade #yash #rashmikamandanna #dearcomrademusicfestival

Tags