ಸುದ್ದಿಗಳು

ಮತ್ತೆ ಸುದ್ದಿ ಮಾಡುತ್ತಿದೆ ಡಿಪ್ಪಿ ಟ್ಯಾಟೂ!

ಟ್ಯಾಟೂವಿನಲ್ಲಿ ಕೊಂಚ ಬದಲಾವಣೆ ಮಾಡಿದ್ದಾಳೆಯೇ ಡಿಪ್ಪಿ?

ಮದುವೆಗೂ ಮುನ್ನ ಮಾಜಿ ಪ್ರಿಯಕರ ರಣಬೀರ್ ಕಪೂರ್ ಹೆಸರಿನಲ್ಲಿ ಹಾಕಿಸಿಕೊಂಡಿದ್ದ ಟ್ಯಾಟೂ ತೆಗೆಸುತ್ತಾಳೆಂಬ ಸುದ್ದಿಯಿತ್ತು..

ಮುಂಬೈ,ಆ,31: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಇದೇ ನವೆಂಬರ್ ನಲ್ಲಿ ನೆರವೇರಲಿದೆ ಎಂದು ಮೂಲಗಳು ಹೇಳುತ್ತಿವೆ.ಈಗಾಗಲೇ ಮದುವೆಗೆ ಬಹಳಷ್ಟು ತಯಾರಿ ಮಾಡಿಕೊಂಡಿದ್ದಾರೆ ಎಂದು ಆಪ್ತ ವಲಯಗಳಿಂದ ಕೇಳಿ ಬರುತ್ತಿವೆ. ಆದರೆ ಈಗ ಡಿಪ್ಪಿ ಹಾಕಿಸಿರುವ ಟ್ಯಾಟೂ ಮತ್ತೆ ಸುದ್ದಿ ಮಾಡಿದೆ. ಹೌದು! ಮದುವೆಗೂ ಮುನ್ನ ಮಾಜಿ ಪ್ರಿಯಕರ ರಣಬೀರ್ ಕಪೂರ್ ಹೆಸರಿನಲ್ಲಿ ಹಾಕಿಸಿಕೊಂಡಿದ್ದ ಟ್ಯಾಟೂ ತೆಗೆಸುತ್ತಾಳೆಂಬ ಸುದ್ದಿಯಿತ್ತು. ಕೆಲವರು ಟ್ಯಾಟೂ ತೆಗೆಸಿದ್ದಾಳೆಂದು ಸುದ್ದಿ ಮಾಡಿದರೆ ಇನ್ನೂ ಕೆಲವರು ಟ್ಯಾಟೂವಿನಲ್ಲಿ ಕೊಂಚ ಬದಲಾವಣೆ ಮಾಡಿದ್ದಾಳೆ ಎಂದು ಸುದ್ದಿ ಹಬ್ಬಿಸಿದ್ದರು..ಆದರೆ ಈಗ ಸತ್ಯ ಬಹಿರಂಗಗೊಂಡಿದೆ. ಹೇಗೆ ಅಂತೀರಾ? ಮುಂದೆ ಓದಿ….

ಟ್ಯಾಟೂ ಅಳಿಸಿಲ್ಲ!!

ದೀಪಿಕಾ ಪಡುಕೋಣೆ ಗುರುವಾರ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ಕೂದಲನ್ನು ಮೇಲಕ್ಕೆ ಕಟ್ಟಿದ್ದರಿಂದ ಡಿಪ್ಪಿ ಟ್ಯಾಟೂ ಸ್ಪಷ್ಟವಾಗಿ ಕಾಣಿಸಿದೆ. ದೀಪಿಕಾ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಹಾಗಾಗಿ ಟ್ಯಾಟೂ ವಿಚಾರ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.ಹಾಗಾದರೆ ಡಿಪ್ಪಿ ಗೆ ಇನ್ನೂ ಹಳೆಯ ಪ್ರಿಯಕರನ ನೆನಪು ಮಾಸಿಲ್ಲ ಅಂತಾಯ್ತು..

 

Tags

Related Articles