ಸುದ್ದಿಗಳು

‘ದೀಪಾವಳಿ’ಗೆ ಶೃತಿಗೆ ಟಾಂಗ್ ಕೊಟ್ಟ ಐಶ್ವರ್ಯ ಸರ್ಜಾ..!!!

ಎಲ್ಲರಿಗೂ ದೀಪಾವಳಿಯ ಶುಭಾಶಯವನ್ನು ಕೋರಿದ ಐಶ್ವರ್ಯ

ಬೆಂಗಳೂರು, ನ.7: ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಸದ್ಯ #ಮಿಟೂ ಆರೋಪವನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಈ ಅಭಿಯಾನದಿಂದಾಗಿ ಅವರು ಮತ್ತು ಅವರ ಕುಟುಂಬದ ಸದಸ್ಯರು ತುಂಬಾ ನೊಂದಿದ್ದಾರೆ.ಬೆಳಕಿನ ಹಬ್ಬ

ಇವತ್ತು ದೀಪಾವಳಿ ಹಬ್ಬವಾಗಿದ್ದರಿಂದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಪರೋಕ್ಷವಾಗಿ ನಟಿ ಶೃತಿ ಹರಿಹರನ್ ಗೂ ಟಾಂಗ್ ಕೊಟ್ಟಿದ್ದಾರೆ. ತಮ್ಮ ಅನಿಸಿಕೆಗಳನ್ನು ಇನ್​ಸ್ಟಾಗ್ರಾಮ್​​ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಕತ್ತಲಿಂದ ಬೆಳಕಿನೆಡೆಗೆ

‘ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಹಬ್ಬ ಅಜ್ಞಾನದಿಂದ ಜ್ಞಾನ, ಕತ್ತಲಿನಿಂದ ಬೆಳಕಿನೆಡೆಗ ಕರೆದೊಯ್ಯಲಿ’ ಎಂದು ಐಶ್ವರ್ಯ ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ತಂದೆ ಅರ್ಜುನ್ ಸರ್ಜಾರ ಮೇಲಿನ #ಮಿಟೂ ಆರೋಪದ ಕುರಿತು ಪರೋಕ್ಷವಾಗಿ ಬರೆದುಕೊಂಡಿದ್ದಾರೆ.

‘ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನ’ ಕಡೆಗೆ ಎಂಬಂತಹ ಪದಗಳು #ಮಿಟೂ ಪ್ರಕರಣದ ಕುರಿತು ಹೇಳಿದಂತೆ ಕಾಣುತ್ತದೆ. ಇನ್ನು ಐಶ್ವರ್ಯ ಪೋಸ್ಟ್​ ಗೆ ಅಭಿಮಾನಿಗಳು ‘ಅರ್ಜುನ್ ಸರ್ಜಾ ಸಾಧ್ಯವಾದಷ್ಟು ಬೇಗ ನಿರಪರಾಧಿಯಾಗಲಿ’ ಅಂತಾ ಕಮೆಂಟ್​ ಮಾಡಿದ್ದಾರೆ.

ಸಿನಿಮಾ ಶುರುವಾಗಬೇಕಿತ್ತು

ಐಶ್ವರ್ಯ ಸರ್ಜಾ ನಾಯಕಿಯಾಗಿ ಅಭಿನಯಿಸಿದ್ದ ‘ಪ್ರೇಮಬರಹ’ ಚಿತ್ರ ಯಶಸ್ವಿ 50 ದಿನಗಳನ್ನು ಪೂರೈಸಿ ಎಲ್ಲರ ಗಮನ ಸೆಳೆದಿತ್ತು. ಇದಾದ ಬಳಿಕ ಅವರು ಮತ್ತೊಂದು ಕನ್ನಡದ ಚಿತ್ರದಲ್ಲಿ ಅಭಿನಯಿಸಬೇಕಾಗಿತ್ತು. ಆದರೆ ಅದೇ ವೇಳೆ ಅವರ ತಂದೆಯ ಮೇಲೆ ನಟಿ ಶೃತಿ ಹರಿಹರನ್ #ಮಿಟೂ ಆರೋಪವನ್ನು ಮಾಡಿದರು. ಹೀಗಾಗಿ ಸದ್ಯಕ್ಕೆ ಸಿನಿಮಾಗಳಲ್ಲಿನ ನಟನೆ ನಿಂತಿದೆ.

Tags