ಸುದ್ದಿಗಳು

ಅಪ್ಪು ಮನೆಯಲ್ಲಿ ದೀಪಾವಳಿ ಸಂಭ್ರಮ

ಅದ್ದೂರಿಯಾಗಿ ಬೆಳಕಿನ ಹಬ್ಬವನ್ನು ಆಚರಿಸಿದ ಸಹೋದರರು

ಬೆಂಗಳೂರು, ನ.7: ದೇಶದೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿಯನ್ನು ಅದ್ದೂರಿಯಾಗಿ ಆಚರಣೆಯಾಗುತ್ತಿದೆ.ದೀಪಗಳ ಆಲಂಕಾರದೊಂದಿಗೆ ಪಟಾಕಿಯ ಸದ್ದೂ ಜೋರಾಗಿದೆ. ಇನ್ನು ನಟ ಪುನೀತ್ ರಾಜ್ ಕುಮಾರ್ ತಮ್ಮ ಮನೆಯಲ್ಲಿ ಸಹೋದರ ಮತ್ತು ಸ್ನೇಹಿತರೊಂದಿಗೆ ಪಠಾಕಿ ಹೊಡೆದು, ಸಂಭ್ರಮಿಸಿದ್ದಾರೆ.

ಅಪ್ಪು ಮನೆಯಲ್ಲಿ ಸಂಭ್ರಮ

ನಿನ್ನೆಯಷ್ಟೇ ಪುನೀತ್ , ನಾಯಿಯನ್ನು ಹಿಡಿದುಕೊಂಡು “ಪಠಾಕಿಯನ್ನು ಹೊಡೆಯಬೇಕಾದರೆ ಹುಷಾರಾಗಿರಿ, ಹಾಗೆಯೇ ಪ್ರಾಣಿಗಳಿಗೆ ತೊಂದರೆ ಆಗದಂತೆ ಈ ಬಾರಿಯ ದೀಪಾವಳಿಯನ್ನು ಆಚರಿಸಿ… ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು” ಎಂದು ತಿಳಿಸಿದ್ದರು. ಅದರಂತೆ ಅದ್ದೂರಿಯಾಗಿ ಈ ಹಬ್ಬವನ್ನು ಆಚರಿಸಿದ್ದಾರೆ.

ಸಂಭ್ರಮದಲ್ಲಿ ಅತಿಥಿಗಳು, ಸ್ನೇಹಿತರು ಭಾಗಿ

ನಿನ್ನೆ ಸಂಜೆ ಅಪ್ಪು ಮನೆಯಲ್ಲಿ ಸಹೋದರ ರಾಘವೇಂದ್ರ ರಾಜ್ಕುಮಾರ್, ನಟ ಡ್ಯಾನೀಶ್ ಶೇಠ್ ಸೇರಿದಂತೆ ಅವರ ಸಂಬಂಧಿಗಳು , ಸ್ನೇಹಿತರು ಸೇರಿದ್ದರು. ಎಲ್ಲರೂ ದೀಪಾವಳಿಯನ್ನು ಆಚರಿಸಿ, ಸೆಲ್ಫೀಗಳನ್ನು ತೆಗೆದುಕೊಂಡು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸದ್ಯದಲ್ಲಿಯೇ ಬರಲಿದೆ ‘ನಟ ಸಾರ್ವಭೌಮ’

ಇನ್ನು ಪುನೀತ್ ಅವರ ‘ನಟ ಸಾರ್ವಭೌಮ’ ಬಿಡುಗಡೆಗೆ ತಯಾರಾಗಿದೆ. ಸಂತೋಷ್ ಆನಂದ್ ರಾಮ್ ರೊಂದಿಗೆ ‘ಯುವರತ್ನ’ ಶುರುವಾಗಬೇಕಿದೆ. ಅದರಂತೆ ರಾಘಣ್ಣ ಸುಮಾರು 12 ವರ್ಷಗಳ ನಂತರ ‘ಅಮ್ಮನ ಮನೆ’ಯ ಮೂಲಕ ಮರಳಿ ಚಂದನವನಕ್ಕೆ ಕಾಲಿಟ್ಟಾರೆ. ಇದರೊಂದಿಗೆ ‘ತ್ರಯಂಬಕಂ’ ಚಿತ್ರವೂ ಸೆಟ್ಟೇರುತ್ತಿದೆ. ಹೀಗಾಗಿ ಅವರ ಪಾಲಿಗೂ ಇದು ವಿಶೇಷ ಹಬ್ಬ.

ಇನ್ನು ನಟ ಪುನೀತ್ ಅದೆಷ್ಟೇ ಬ್ಯೂಸಿಯಾಗಿದ್ದರೂ ಸಹ ಸ್ವಲ್ಪ ಸಮಯವನ್ನು ತಮ್ಮ ಕುಟುಂಬಕ್ಕೆಂದು ಮೀಸಲಿಡುತ್ತಾರೆ. ಇನ್ನು ಹಬ್ಬ ಬಂದಾಗ ಆ ಖುಷಿಯನ್ನು ಕುಟುಂಬದ ಜೊತೆ ಆಚರಿಸಲು ಮರೆಯೋದಿಲ್ಲ.

Tags