ಸುದ್ದಿಗಳು

ಡಿಪ್ಪಿ-ವೀರ್ ಮದುವೆಯಲ್ಲಿ ದಕ್ಷಿಣ ಖಾದ್ಯಗಳ ಘಮ …!

ಈ ಜೋಡಿ ಇಟಲಿಯಲ್ಲಿ ವಿವಾಹ

ಬೆಂಗಳೂರು,,12: ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈ ಜೋಡಿ ಇಟಲಿಯಲ್ಲಿ ವಿವಾಹವಾಗಲಿದ್ದು, ಅದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಳೆದವಾರ ದೀಪಿಕಾ ಮನೆಯಲ್ಲಿ ನಾಂದಿ ಪೂಜೆ ನೆರವೇರಿತ್ತು. ಇದೇ ತಿಂಗಳು 14-15ರಂದು ಇಟಲಿಯಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿವೆ. 14ರಂದು ಕರ್ನಾಟಕ ಸಂಪ್ರದಾಯಂದಂತೆ ವಿವಾಹ ನೆರವೇರಿದರೆ, 15ರಂದು ಪಂಜಾಬಿ ಶೈಲಿಯಲ್ಲಿ ಈ ಜೋಡಿ ಹಸೆಮಣೆ ಏರಲಿದೆ. ಅದಕ್ಕೂ ಮುನ್ನ ನಡೆಯಬೇಕಿರುವ ಕೆಲ ಶಾಸ್ತ್ರಗಳನ್ನು ಈಗ ಪೂರ್ಣವಾಗಿದೆ.

ದೀಪಿಕಾ ಮದುವೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು …!

ದೀಪಿಕಾ ಮೂಲತಃ ಬೆಂಗಳೂರಿನವರು. ಹಾಗಾಗಿ ಇಲ್ಲಿ ಅವರಿಗೆ ಅನೇಕರು ಆಪ್ತರಿದ್ದಾರೆ. ಹಾಗಾಗಿ, ವಿವಾಹದ ನಂತರ ಮುಂಬೈ ಹಾಗೂ ಬೆಂಗಳೂರಿನಲ್ಲಿ ರಿಸೆಪ್ಶನ್ ಹಮ್ಮಿಕೊಳ್ಳಲು ಈ ಜೋಡಿ ಯೋಜನೆ ರೂಪಿಸಿದೆಯಂತೆ. ಸದ್ಯ ರಣವೀರ್ ಹಾಗೂ ದೀಪಿಕಾ ಮದುವೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಈ ಮದುವೆ ಗಂಡು ಹಾಗೂ ಹೆಣ್ಣನ್ನು ಹೊರತುಪಡಿಸಿ ಇತರರಿಗೂ ವಿಶೇಷವಾಗಿದೆ. ಇದಕ್ಕೆ ಕಾರಣ ಮದುವೆಗೆ ತಯಾರಾಗುವ ಖಾದ್ಯಗಳು. ಬಹುಶಃ ಮದುವೆಯ ಮೆನುವಿನಲ್ಲಿರುವ ಖಾದ್ಯಗಳು ಮತ್ತೊಮ್ಮೆ ತಿನ್ನಲು ಸಿಗುತ್ತದೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಮೆನುವಿನಲ್ಲಿ ಸ್ವಾದಿಷ್ಟ ತಿಂಡಿ ತಿನಿಸುಗಳಿವೆ.

Image result for deepika  marriage foods

ಪಂಜಾಬಿ ಹಾಗೂ ದಕ್ಷಿಣ ಭಾರತೀಯ ಅತಿಥಿಗಳಿಗೆ ವಿಶೇಷ ಊಟ ..!

ಮದುವೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಮೆನು ಕಾರ್ಡ್‌ನಲ್ಲಿರುವ ಖಾದ್ಯಗಳ ವಿವರಗಳೂ ಬಹಿರಂಗವಾಗತೊಡಗಿವೆ. ಮದುವೆ ಇಟಲಿಯಲ್ಲಿರುವುದರಿಂದ ಮೆನುವಿನಲ್ಲಿ ಕಾಂಟಿನೆಂಟಲ್ ಹಾಗೂ ಇಟಾಲಿಯನ್ ಎರಡೂ ಬಗೆಯ ಖಾದ್ಯಗಳಿರಲಿವೆ. ಇದರೊಂದಿಗೆ ಪಂಜಾಬಿ ಹಾಗೂ ದಕ್ಷಿಣ ಭಾರತೀಯ ಅತಿಥಿಗಳಿಗೂ ವಿಶೇಷ ಊಟವಿರಲಿದೆ. ಹೀಗಿರುವಾಗ ಪಂಜಾಬಿ ಮೆನುವಿನಲ್ಲಿ ದಾಲ್ ಮಖ್ನೀ, ಶಾಹೀ ಪನೀರ್, ದಹೀ ಭಲ್ಲೆ ಕೂಡಾ ಇರುತ್ತದೆ ಎನ್ನಲಾಗಿದೆ. ಮೇನ್ ಕೋರ್ಸ್ ಹೊರತುಪಡಿಸಿ ಸಿಹಿ ತಿಂಡಿಗಳಿಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆಯಂತೆ.

Tags

Related Articles