ಸುದ್ದಿಗಳು

ಡಿಪ್ಪಿ-ವೀರ್ ತಮ್ಮ ಆಪ್ತರಿಗೆ ನೀಡಿದ ಉಡುಗೊರೆ ಏನು?

ಆತ್ಮೀಯರಿಗೆ ಭರ್ಜರಿ ಗಿಫ್ಟ್

ಮುಂಬೈ,ನ.24: ಮೊನ್ನೆಯಷ್ಟೇ ಡಿಪ್ಪಿ-ವೀರ್ ಇಟಲಿಯಲ್ಲಿ ಮದುವೆಯಾಗಿದ್ದು ಬಾಲಿವುಡ್ ನ ಈ ಮುದ್ದಾದ ಜೋಡಿಗೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿತ್ತು.. ಇನ್ನು ಆರತಕ್ಷತೆಯನ್ನು ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ಭರ್ಜರಿಯಾಗಿ ನಡೆಸಿತ್ತು..ಇನ್ನು  ಜೋಡಿ ದೀಪಿಕಾ, ರಣವೀರ್ ತಮ್ಮ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ ಆತ್ಮೀಯರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ….

ಸಿಲ್ವರ್ ಫ್ರೇಮ್ ಇರುವ ಫೋಟೋಫ್ರೇಮ್

ಇನ್ನು ಇವರ ಮದುವೆಗೆ ಚಿತ್ರರಂಗ ಸೇರಿದಂತೆ ಕುಟುಂಬದ ಆಪ್ತರಿಗೆ ಮಾತ್ರ ಆಹ್ವಾನ ನೀಡಿದ್ದರು.. ಇನ್ನು ಸಂಬಂಧಿಕರಿಗೆ ಸಿಲ್ವರ್ ಫ್ರೇಮ್ ಇರುವ ಫೋಟೋಫ್ರೇಮ್ ಉಡುಗೊರೆಯಾಗಿ ನೀಡಿದ್ದಾರೆ.

ಡಿಪ್ಪಿ-ವೀರ್ ಗಾಗಿ ಫೋಟೋಫ್ರೇಮ್ ಮಾಡುವುದು ಖುಷಿ ವಿಷ್ಯವಾಗಿತ್ತು ಎಂದು ಫೋಟೋಫ್ರೇಮ್ ಜೊತೆ ಬರೆಯಲಾಗಿದೆ. ಫೋಟೋಫ್ರೇಮ್ ಒಳಗಿರುವ ಫೋಟೋ ಮೇಲೆ ದೀಪ್-ವೀರ್ ಸಹಿಯಿದೆ ಎನ್ನಲಾಗಿದೆ.

ಉಡುಗೊರೆ ಪಡೆದ ಆಪ್ತರು

ಉಡುಗೊರೆ ಪಡೆದ ಆಪ್ತರು ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆನಂದ್ ಕಾರಜ್ ಸಂಭ್ರಮವೂ ಸಿಖ್ ಸಮುದಾಯದ ಮದುವೆ ಸಮಾರಂಭದಲ್ಲಿ ನಡೆಯುವ ಪ್ರಮುಖ ಸಂಭ್ರಮಾಚರಣೆ ಆಗಿದ್ದು, ಈ ಆಚರಣೆಯನ್ನು ಗುರು ಅಮರ್ ದಾಸ್ ಅವರು ಪರಿಚಯಿಸಿದ್ದರು.

 

Tags