ಸುದ್ದಿಗಳು

ಮೂರನೇ ಆರತಕ್ಷತೆಯಲ್ಲಿ ಮಿಂಚಿದ ಡಿಪ್ಪಿ-ವೀರ್!!

ರೆಡ್ ಜುಹೇರ್ ಮುರಾದ್ ಗೌನ್ನಲ್ಲಿ ಕಂಗೊಳಿಸಿದ ಡಿಪ್ಪಿ

ಮುಂಬೈ,ಡಿ.2: ಬಾಲಿವುಡ್​​​ ನ ಮುದ್ದಾದ ಜೋಡಿ ದೀಪಿಕಾ- ರಣವೀರ್ ಇತ್ತೀಚೆಗೆಯಷ್ಟೇ ಇಟಲಿಯ ಲೇಕ್ ಕೊಮೊ​​ ದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.. ಇಷ್ಟೇ ಅಲ್ಲದೆ ಮೊನ್ನೆ ಬೆಂಗಳೂರಿನಲ್ಲಿ ತಮ್ಮ ಆಪ್ತ ಬಂಧುಗಳಿಗೆ ಮಾತ್ರ ಆರತಕ್ಷತೆಯನ್ನು ನೆರವೇರಿಸಿದರು.. ಇನ್ನು ಎರಡನೇ ಆರತಕ್ಷತೆ ಕೂಡ ನೆರವೇರಿದ್ದು ಮುಂಬೈನಲ್ಲಿ ನೆಲೆಸಿದ ಬಂಧು ಬಳಗದವರಿಗೆ ಮಾತ್ರ ಆಹ್ವಾನ ಕೊಡಲಾಗಿತ್ತು..

ಮೂರನೇ ಆರತಕ್ಷತೆ

ಇನ್ನು ಡಿ.1 ರಂದು ಮೂರನೇ ಆರತಕ್ಷತೆ ನಿನ್ನೆ ಮುಂಬೈನ ಗ್ರಾಂಡ್​ ಹ್ಯಾಟ್​​​ನಲ್ಲಿ ನಡೆದಿದೆ. ಈ ಆರತಕ್ಷತೆ ಮುಂಬೈನಲ್ಲಿ ನಡೆಯುತ್ತಿರೋ ಎರಡನೇ ಆರತಕ್ಷತೆ ಆಗಿದ್ದು ಸ್ನೇಹಿತರು ಹಾಗೂ ಬಾಲಿವುಡ್​​​ ಮಂದಿಗಾಗಿ ನಡೆಸಲಾಗಿತ್ತು.. ದೀಪಿಕಾ ರೆಡ್​​ ಜುಹೇರ್​​​​ ಮುರಾದ್​​​​ ಗೌನ್​ನಲ್ಲಿ ಕಂಗೊಳಿಸಿದ್ದು ರಣವೀರ್​​ ಕಪ್ಪು ಬಣ್ಣದ ಸೂಟ್​​​ನಲ್ಲಿ ಸಖತ್ ಆಗಿ ಮಿಂಚಿದ್ದಾರೆ.

ತಾರೆಯರ ಮೆರಗು!!

ಡಿಪ್ಪಿ-ವೀರ್ ಆರತಕ್ಷತೆಗೆ ಹಲವಾರು ಸ್ಟಾರ್ ನಟರು ಹಾಗೂ ಕ್ರಕಿಟ್ ತಾರೆಯರು ಆಗಮಿಸಿದ್ದಾರೆ. ಅಮಿತಾಬ್​​​​ ಬಚ್ಚನ್​​, ಶಾರುಖಾನ್​, ಸೈಫ್​ ಅಲಿ ಖಾನ್​​, ಕರೀನಾ ಕಪೂರ್​​​,  ಐಶ್ವರ್ಯ ರೈ, ಮಾಧುರಿ ದೀಕ್ಷಿತ್​​​, ಟೈಗರ್​ ಶ್ರಾಫ್​​, ದಿಶಾ ಪಠಾಣಿ, ಅರ್ಜುನ್​ ಕಪೂರ್​​​, ಮಲೈಕಾ ಆರೋರಾ,  ಜಾಹ್ನವಿ ಕಪೂರ್​​​​​, ರೇಖಾ, ಇಶಾನ್​​, ಕಲ್ಕಿ, ಮುಖೇಶ್​​ ಭಟ್​​, ಕಪೀಲ್​ ದೇವ್​​​, ಸಚಿನ್​ ತೆಂಡುಲ್ಕರ್​​​​, ಹಾಗೂ ಟೆನ್ನಿಸ್​​ ಪ್ಲೇಯರ್ ಮಹೇಶ್​​​ ಭೂಪತಿ ​​​ಆಗಮಿಸಿದ್ದು ಎಲ್ಲರೂ ಈ ನವ ಜೋಡಿಗೆ ಶುಭ ಹಾರೈಸಿದರು

 

View this post on Instagram

 

A post shared by Deepika Padukone (@deepikapadukone) on

Tags