ಸುದ್ದಿಗಳು

ಕೊನೆಗೂ ತಾಯ್ತನದ ಬಗ್ಗೆ ಮನಬಿಚ್ಚಿ ಮಾತನಾಡಿದ ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಮದುವೆಯಾದಾಗಿನಿಂದಲೂ ಅವರ ಅಭಿಮಾನಿಗಳು “ದೀಪಿಕಾ ಗರ್ಭಿಣಿಯಾಗಿದ್ದಾರೆ, ದೀಪಿಕಾಳನ್ನು ಚೆನ್ನಾಗಿ ನೋಡಿಕೊಳ್ಳಿ” ಎಂಬ ಅಂತೆ ಕಂತೆಗಳ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು. ಈ ಎಲ್ಲಾ ಸುದ್ದಿಗಳನ್ನು ಕೇಳುತ್ತಲೇ ಬಂದಿರುವ ದೀಪಿಕಾ, ಇದೀಗ ತಾಯ್ತನದ ಕುರಿತು ತಮ್ಮಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

“ಬೇರೆ ಹೆಣ್ಣುಮಕ್ಕಳಂತೆ ನಾನು ಒಂದು ದಿನ ತಾಯ್ತನವನ್ನು ಅನುಭವಿಸುವುದು ಖಚಿತ. ಆದರೆ ತಾಯ್ತನ ನೆಪವಾಗಿಟ್ಟುಕೊಂಡು ಹೆಣ್ಣಿಗೆ ಇಂಥ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ.ಅದರಲ್ಲೂ ದಂಪತಿಗಳ ಮೇಲೆ ಈ ವಿಷಯದ ಕುರಿತು ಒತ್ತಡ ಹೇರುವುದು ಸರಿಯಲ್ಲ. ಜನರು ಮಹಿಳೆಗೆ ಗರ್ಭಿಣಿಯಾಗುವುದು ಮತ್ತು ತಾಯ್ತನಕ್ಕೆ ಸಂಬಂಧಿಸಿದಂತೆ ಕುರಿತು ಪ್ರಶ್ನಿಸುವುದನ್ನು ಬಿಡುತ್ತಾರೋ ಅಂದು ಸಮಾಜದಲ್ಲಿ ಬದಲಾವಣೆಯಾಗುತ್ತದೆ” ಎಂದು ತಿಳಿಸಿದ್ದಾರೆ.

ದೀಪಿಕಾ ಸದ್ಯ ಮೇಘನಾ ಗುಲ್ಜಾರ್ ನಿರ್ದೇಶನದ ‘ಚಪಾಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ವೈರಲ್ ಆಯ್ತು ಬೇಬಿ ದೀಪಿಕಾ ಪಡುಕೋಣೆ ಫೋಟೊ

#balkaninews #actressdeepikapadukone #motherhood #deepikapadukonetwitter, deepikapadukoneinstagram

Tags