ಸುದ್ದಿಗಳು

ಡಿಪ್ಪಿ ಮುಡಿಗೆ ಏಷ್ಯಾದ ಸೆಕ್ಸಿ ಮಹಿಳೆ ಗರಿ ..!

ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ

ಮುಂಬೈ, ಡಿ.7:  ಇಟಲಿಯಲ್ಲಿ ಇತ್ತಿಚೆಗಷ್ಟೆ ಅದ್ದೂರಿಯಾಗಿ ಹಸಮಣೆ ಏರಿದ ಕನ್ನಡದ ಚೆಲುವೆ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಹೌದು, ಕಳೆದ ವರ್ಷ ಮೊದಲ ಸ್ಥಾನ ಗಳಿಸಿದ್ದ ಪ್ರಿಯಾಂಕಾ ಚೋಪ್ರಾ ಈ ಬಾರಿ ಎರಡನೇ ಸ್ಥಾನದಲ್ಲಿದ್ದಾರೆ.

 ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ …!

ಲಂಡನ್ ನ ಈಸ್ಟರ್ನ್  ಐ ಸಾಪ್ತಾಹಿಕ  ನಡೆಸುವ ಏಷ್ಯಾದ 50 ಸೆಕ್ಸಿ ಮಹಿಳೆಯರು ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ಪಾಲ್ಗೊಂಡು ತಮ್ಮಿಷ್ಟದ ಸೆಲೆಬ್ರಿಟಿಗಳನ್ನು ಮತ ಚಲಾಯಿಸುತ್ತಾರೆ. ಬಾಲಿವುಡ್ ಕ್ವೀನ್ ಆಗಿರುವ ದೀಪಿಕಾ ಪಡುಕೋಣೆ ಮಾನಸಿಕ ಅಸ್ವಸ್ಛರ ಬಗೆಗಿನ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಈ ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ಈಸ್ಟರ್ನ್ ಐ ಸಾಪ್ತಾಹಿಕ ಮನರಂಜನಾ ವಿಭಾಗದ ಸಂಪಾದಕ ಅಸ್ಜದ್ ನಜೀರ್ ಹೇಳಿದ್ದಾರೆ. ಕತ್ರಿನಾ ಕೈಫ್ 10ನೇ ಸ್ಥಾನ …!

ಕಿರುತೆರೆ ನಟಿ ನಿಯಾ ಶರ್ಮಾ, ಮೂರನೇ ಸ್ಥಾನ, ಪಾಕಿಸ್ತಾನದ ನಟಿ ಮಹಿರಾ ಖಾನ್ ನಾಲ್ಕನೇ ಸ್ಥಾನಗಳಿಸಿದ್ದಾರೆ. ಉಳಿದಂತೆ ಶಿವಾಂಗಿ ಜೋಷಿ, ಆಲಿಯಾ ಭಟ್, ಸೋನಂ ಕಪೂರ್, ಹೀನಾ ಖಾನ್  ,ಕತ್ರಿನಾ ಕೈಫ್ ಕ್ರಮವಾಗಿ 5 ರಿಂದ 10 ನೇ ಸ್ಥಾನದಲ್ಲಿದ್ದಾರೆ.

Tags

Related Articles