ಸುದ್ದಿಗಳು

ಬಿಗ್ ಬಿ – ದೀಪಿಕಾ ದೇಶದ ಪ್ರಭಾವಿ ವ್ಯಕ್ತಿಗಳು

ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಮೊದಲ ಸ್ಥಾನಪಡೆದುಕೊಂಡ ಅಮಿತಾಬ್ ಬಚ್ಚನ್

ಮುಂಬೈ, ನ.21: ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ದೀಪಿಕಾ ಪಡುಕೋಣೆಗೆ ಮತ್ತೊಂದು ಗುಡ್ ನ್ಯೂಸ್. ಇವರು ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಭಾರತದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳ ಬಗ್ಗೆ ನಡೆದ ವರದಿಯಲ್ಲಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ನಟಿ ದೀಪಿಕಾ ಪಡುಕೋಣೆ ಹೆಸರು ಮೊದಲ ಸ್ಥಾನದಲ್ಲಿದೆ.

60 ಮಂದಿ ಸೆಲೆಬ್ರಿಟಿಗಳ  ಬಗ್ಗೆ ಸಮೀಕ್ಷೆ

ಬಾಲಿವುಡ್, ಕ್ರೀಡಾ ಕ್ಷೇತ್ರದಲ್ಲಿರುವ ಸುಮಾರು 60 ಮಂದಿ ಟಾಪ್ ತಾರೆಯರ ಬಗ್ಗೆ ಯುವೌ ಇನ್ಫುಎನ್ಸರ್ ಇಂಡೆಕ್ಸ್ ಪ್ರಸಕ್ತ ಸಾಲಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ಪ್ರಸಿದ್ಧ ವ್ಯಕ್ತಿಗಳು ಹಾಗೂ ಕ್ರೀಡಾ ಕ್ಷೇತ್ರದ ವ್ಯಕ್ತಿಗಳ ಕುರಿತಂತೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಈ ಅಧ್ಯಯನದಲ್ಲಿ ಆರೋಗ್ಯ, ಸೌಂದರ್ಯ, ವೈಯಕ್ತಿಕ ಆರೈಕೆ, ತಂತ್ರಜ್ಢಾನ, ವಾಹನ, ಫ್ಯಾಷನ್, ಉಡುಗೆ-ತೊಡುಗೆ ಆಹಾರ, ಪ್ರಯಾಣ, ಹಣಕಾಸು ಸೇರಿ ಹಲವು ವಿಭಾಗಗಳಲ್ಲಿ ಜನರ ಗ್ರಹಿಕೆಯ ಮಟ್ಟವನ್ನು ಪರಿಗಣಿಸಿ ಈ ಅಧ್ಯಯನವನ್ನು ನಡೆಸಲಾಗಿದೆ. ಈ ಸಮೀಕ್ಷೆಯನ್ವಯ ನಟ ಅಮಿತಾಬ್ ಬಚ್ಚನ್ ಮೊದಲ ಸ್ಥಾನದಲ್ಲಿದ್ದರೆ, ದೀಪಿಕಾ ಪಡುಕೋಣೆ ಎರಡನೇ ಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ವಿರಾಟ್ ಕೊಹ್ಲಿ, ಅಮೀರ್ ಖಾನ್, ಶಾರೂಖ್ ಖಾನ್, ಆಲಿಯಾ ಭಟ್ ಮತ್ತು ಪ್ರಿಯಾಂಕ  ಚೋಪ್ರಾ ಕ್ರಮವಾಗಿ ಮೊದಲ ಹತ್ತು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಲಂಪಿಕ್ ಬೆಳ್ಳಿ ಪತಕ ವಿಜೇತರಾದ, ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಭಾರತದ 15 ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬರಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Tags

Related Articles