ಸುದ್ದಿಗಳು

ಮತ್ತೆ ಸಿನಿಮಾದ ಮೂಲಕ ಒಂದಾಗಲಿದ್ದಾರೆ ಮಾಜಿ ಪ್ರೇಮಿಗಳು

ಮುಂಬೈ, ಫೆ.08:

ನಟಿ ದೀಪಿಕಾ ಹಾಗೂ ರಣ್ಬೀರ್ ಕಪೂರ್ ನಡುವೆ ಕುಚು ಕುಚು ಇತ್ತು ಅಂತಾ ಗಾಳಿಮಾತುಗಳು ಕೇಳಿ ಬಂದಿದ್ದರೂ ಕೂಡ ಅದು ಸತ್ಯ ಅನ್ನೋದಕ್ಕೆ ಹಲವಾರು ಉದಾರಣೆಗಳಿವೆ. ಈ ಜೋಡಿ ಮದುವೆಯಾಗುತ್ತೆ ಅಂತಾ ಕೂಡ ಹಲವಾರು ಮಂದಿ ಮಾತನಾಡುತ್ತಿದ್ದರು. ಆದರೆ ಆಗಿದ್ದೇ ಬೇರೆ. ಇದೀಗ ದೀಪಿಕಾ ಹಾಗೂ ರಣಬೀರ್ ಕಪೂರ್ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಬಹು ವರ್ಷಗಳ ನಂತರ ಒಟ್ಟಿಗೆ ಸಿನಿಮಾ

ಹೌದು, 2009ರಲ್ಲಿ ‘ಬಚನಾ ಹೇ ಹಸೀನೋ’ ಸಿನಿಮಾದ ಮೂಲಕ ಪ್ರೇಮಾಂಕುರವಾಗಿ ಈ ಜೋಡಿಯ ಡೇಟಿಂಗ್ ಮಾಡಿಕೊಂಡಿತ್ತು. ಅದಾದ ನಂತರ ಬ್ರೇಕ್​ ಅಪ್ ಆಯ್ತು ಬ್ರೇಕಪ್ ಆದ ನಂತರದಲ್ಲಿಯೂ ಈ ಜೋಡಿ 2013ರಲ್ಲಿ ‘ಯೇ ಜವಾನಿ ಹೈ ದಿವಾನಿ’ ಸಿನಿಮಾದಲ್ಲಿ ನಟಿಸಿತ್ತು. ನಂತರ ನಡೆದಿದ್ದು ಗೊತ್ತೇ ಇದೆ. ಈ ಸಿನಿಮಾವೇ ಕೊನೆ. ನಂತರ ಯಾವ ಸಿನಿಮಾವನ್ನು ಈ ಜೋಡಿ ಜೊತೆಯಲ್ಲಿ ಮಾಡಿಲ್ಲ. ಇದೀಗ ಹಳೆಯ ಜೊಡಿ ಮತ್ತೆ ಕಮಾಲ್ ಮಾಡಲು ಮುಂದಾಗುತ್ತಿದೆ.

ಸಿನಿಮಾಗೆ ಸಹಿ ಹಾಕಿದ್ರಾ ಈ ಜೋಡಿ…?

ಸದ್ಯ ಬಾಲಿವುಡ್ ನಲ್ಲಿ ಈ ಜೋಡಿಯ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಸಿನಿಮಾವೊಂದಕ್ಕೆ ಈ ಜೋಡಿ ಸಹಿ ಮಾಡಿದೆಯಂತೆ. ಆದರೆ ಯಾವ ಸಿನಿಮಾ ಅನ್ನೋದು ಬಹಿರಂಗವಾಗಿಲ್ಲ‌. ಈ ಬಗ್ಗೆ ಈ ಜೋಡಿಯೂ ಎಲ್ಲೂ ಬಾಯಿ ಬಿಟ್ಟಿಲ್ಲ. ಆದರೆ ಮತ್ತೆ ಈ ಜೋಡಿ ನೋಡಲು ಅಭಿಮಾನಿಗಳಂತೂ ಕಾತುರರಾಗಿದ್ದಾರೆ. ವಿಶೇಷ ಅಂದರೆ ದೀಪಿಕಾ ಮದುವೆಯ ನಂತರ ರಣಬೀರ್ ಕಪೂರ್ ಜೊತೆ ನಟಿಸುತ್ತಿರುವ ಸಿನಿಮಾ ಇದಾಗಿದೆ.

ಸಿಂಧೂರದ ಮಹತ್ವ ನಿಮಗೆಷ್ಟು ಗೊತ್ತು??

#deepikapadukone #ranbirkapoor #balkaninews  #deepikapadukoneandranbirkapoormovies

Tags