ಸುದ್ದಿಗಳು

’86’ ಮೂಲಕ ಮತ್ತೆ ತೆರೆ ಮೇಲೆ ಒಂದಾಗಲಿದ್ದಾರೆ ರಿಯಲ್ ಲೈಫ್ ಪತಿ-ಪತ್ನಿ..!

ಮುಂಬೈ, ಜ.12: ರಣ್ ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್ ನ ಲವ್ವೆಬಲ್ ಕಪಲ್ ಎನ್ನುವುದರಲ್ಲಿ ಎರಡು ಮಾತಿಲ್ಲ. 6 ವರ್ಷಗಳ ಕಾಲ ತೆರೆ ಮೇಲೆ ಮೋಡಿ ಮಾಡಿದ ಈ ಜೋಡಿ ಇದೀಗ ನಿಜ ಜೀವನದಲ್ಲೂ ಒಂದಾಗಿದ್ದಾರೆ. ಸದ್ಯ ಹನಿಮೂನ್ ಮೂಡ್ ನಲ್ಲಿರುವ ಈ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಮತ್ತೊಮ್ಮೆ ತೆರೆ ಮೇಲೆ ಜೋಡಿಯಾಗಿ ನಟಿಸಲು ಸಿದ್ದತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಸದ್ಯಕ್ಕೆ ಬಂದ ಸುದ್ದಿ ನಿಜವೇ ಆಗಿದ್ದರೆ, 83 ಸಿನಿಮಾದಲ್ಲಿ ದೀಪ್ ಹಾಗೂ ವೀರ್ ಜೊತೆಯಾಗಲಿದ್ದಾರಂತೆ.

ಈ ಕುರಿತಂತೆ ದೀಪಿಕಾ ಜೊತೆಗೆ ಸಿನಿಮಾ ನಿರ್ಮಾಪಕರು ಮಾತುಕತೆ ನಡೆಸುತ್ತಿದ್ದು, ಒಂದು ವೇಳೆ ದೀಪಿಕಾ ಕಂಡೀಷನ್ ಗೆ ಚಿತ್ರ ನಿರ್ಮಾಪಕರು ಓಕೆ ಅಂದರೆ, ಪತಿ ಪತ್ನಿ ಮತ್ತೆ ತೆರೆ ಮೇಲೆ ಜೊತೆಯಾಗಲಿದ್ದಾರೆ.

83 ಚಿತ್ರದಲ್ಲಿ ರಣ್ ವೀರ್ ಪತ್ನಿಯಾಗಿ ದೀಪಿಕಾ

83 ಚಿತ್ರದಲ್ಲಿ ದೀಪಿಕಾ ಅವರು ರಣ್ ವೀರ್ ಅವರ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕೇವಲ 7 ದಿನಗಳ ಶೂಟಿಂಗ್ ನಲ್ಲಿ ದೀಪಿಕಾ ಪಾಲ್ಗೊಳ್ಳಬೇಕಿದ್ದು. 1983ರ ವಲ್ಡ್ ಕಪ್ ನ ಕೊನೆಯ ಪಂದ್ಯದ ವೇಳೆ ರೊಮಿ ಭಾಟಿಯಾ , ವೆಸ್ಟ್ ಇಂಡಿಸ್ ಪಂದ್ಯ ಗೆಲ್ಲುತ್ತದೆ ಎಂದು ಭ್ರಮಿಸಿ ಪಂದ್ಯದ ಮಧ್ಯೆದಲ್ಲೇ ಸ್ಟೇಡಿಯಂ ನಿಂದ ಹೊರನಡೆಯುತ್ತಾರೆ. ಭಾರತ ಗೆಲುವಿನ ಹೊಸ್ತಿಲಲ್ಲಿ ಇದೆ ಎಂದಾಗ ಮತ್ತೆ ವಾಪಾಸ್ ಆಗುತ್ತಾರೆ.

ಈ ಪಾತ್ರವನ್ನು ದೀಪಿಕಾ ಪಡುಕೋಣೆ ನಿರ್ವಹಿಸಬೇಕಿದ್ದು, ಇದು ಅತ್ಯಂತ ಎಕ್ಸೈಟ್ ಆಗಿದೆ ಎನ್ನಲಾಗುತ್ತಿದೆ. ಅಂದಹಾಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಈ ಲವ್ವೆಬಲ್ ಕಪಲ್ ಮತ್ತೆ ತೆರೆ ಮೇಲೆ ಒಂದಾಗುತ್ತಿರುವುದನ್ನು ನೋಡಲು ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ. ಕಬೀರ್ ಖಾನ್ ನಿರ್ದೇಶನದ 83 ಚಿತ್ರದಲ್ಲಿ ರಣ್ ವೀರ್ ನಟಿಸುವುದು ಖಚಿತವಾಗಿದ್ದು, ಹಿರೋಯಿನ್ ಪಾತ್ರದ ಬಗ್ಗೆ ಇನ್ನೂ ಖಚಿತವಾಗಿಲ್ಲ. ಮತ್ತೊಂದೆಡೆ ರಣ್ ವೀರ್ ಝೋಯಾ ಅಖ್ತರ್ ಅವರ  ಗುಲ್ಲಿ ಬಾಯ್ ಚಿತ್ರದಲ್ಲೂ ನಟಿಸುತ್ತಿದ್ದು, ಫೆಬ್ರವರಿ 14ರಂದು ಚಿತ್ರ ತೆರೆಕಾಣಲಿದೆ.

#bollywood #bollywoodmovies #ranveersingh #deepikapadukone #83movie #deepikapadukoneandranveersingh #balkaninews

Tags