ಸುದ್ದಿಗಳು

ತನ್ನಂತೆ ಕಾಣುವ ಮತ್ತೊಬ್ಬರನ್ನು ಕಂಡು ಬೆರಗಾದ ದೀಪಿಕಾ

ಮುಂಬೈ, ಮಾ.16:

ಸ್ಟಾರ್ ನಟ ನಟಿಯರು, ಮಹಾನ್ ನಾಯಕರುಗಳ ಮೇಣದ ಪ್ರತಿಮೆಗಳು ಲಂಡನ್‌ನಲ್ಲಿ ರಾರಾಜಿಸುತ್ತಿವೆ. ಇದೀಗ ಈ ಮೇಣದ ಪ್ರತಿಮೆಗೆ ದೀಪಿಕಾ ಕೂಡ ಸೇರಿಕೊಂಡಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಮೇಣದ ಪ್ರತಿಮೆ ಅನಾವರಣಗೊಂಡಿದೆ. ಸ್ವತಃ ದೀಪಿಕಾನೇ ಈ ಮೇಣದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಲಂಡನ್‌ ನಲ್ಲಿ ದೀಪಿಕಾ ಮೇಣದ ಪ್ರತಿಮೆ

ಹೌದು, ಲಂಡನ್‌ ನ ಮೇಡಂ ಟುಸ್ಸಾಡ್‌ ನಲ್ಲಿ ಸ್ಟಾರ್ ನಟ ನಟಿಯರು ಹಾಗೂ ಮಹಾನ್ ನಾಯಕರುಗಳ ಪ್ರತಿಮೆಗಳನ್ನು ಮೇಣದಲ್ಲಿ ಮಾಡಿ ಪ್ರದರ್ಶನಕ್ಕೆ ಇಡಲಾಗಿದೆ. ಲಂಡನ್‌ ಗೆ ಭೇಟಿ ನೀಡಿದವರೆಲ್ಲಾ ಇಲ್ಲಿಗೆ ಹೋಗದೇ ಇರರು. ಇದೀಗ ಈ ಮ್ಯೂಸಿಯಂಗೆ ದೀಪಿಕಾ ಪ್ರತಿಮೆಯೊಂದು ಸೇರಿಕೊಂಡಿದೆ.

ಪತಿ ಕಾಲೆಳೆದ ದೀಪಿಕಾ

ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರ ಮೇಣದ ಪ್ರತಿಮೆ ಅನಾವರಣಗೊಂಡಿತ್ತು. ನಿಜಕ್ಕೂ ಒಮ್ಮೆ ದೀಪಿಕಾ ತನ್ನಂತೆ ಇರುವ ಮೇಣದ ಪ್ರತಿಮೆ ನೋಡಿ ಶಾಕ್ ಆಗಿದ್ರು. ಇನ್ನು ಇದೇ ವೇಳೆ ರಣ್ವೀರ್ ಕೂಡ ಹಾಜರಿದ್ದರು. ಅಷ್ಟೇ ಅಲ್ಲ ಪತಿಗೆ ದೀಪಿಕಾ ಕಾಲೆಳೆದ ಪ್ರಸಂಗ ಕೂಡ ನಡೆಯಿತು. ಇನ್ನೂ ಈ ಎಲ್ಲಾ ಫೋಟೋಗಳನ್ನು ದೀಪಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

❤️ @madametussauds

A post shared by Deepika Padukone (@deepikapadukone) on

 

View this post on Instagram

 

😝 @madametussauds

A post shared by Deepika Padukone (@deepikapadukone) on

‘ಆರ್ ಆರ್ ಆರ್’ ಚಿತ್ರ ಮ್ಯೂಸಿಕ್ ಗಾಗಿ ಸುಮಾರು 4 ಕೋಟಿ ಬಜೆಟ್!!

#balkaninews #deepikapadukone #deepikapadukonemovies #deepikapadukonecandlestatue

Tags