ಸುದ್ದಿಗಳು

ರಣ್ ವೀರ್ ಬದಲಾಗಲಿಲ್ಲ, ಆದರೆ ದೀಪಿಕಾಳನ್ನು ಬದಲಾಯಿಸಿದರು ಎಂದ ಟ್ರೋಲಿಗರು

ನಟಿ ದೀಪಿಕಾ ಪಡುಕೋಣೆಯ ಏರ್ ಪೋರ್ಟ್ ಲುಕ್ ಇತ್ತೀಚೆಗೆ ಭಾರೀ ಸುದ್ದಿ ಮಾಡಿತ್ತು. ಯಾವ ಕಾರಣಕ್ಕಾಗಿ ಅಂತೀರಾ? ಆಕೆ ಇತ್ತೀಚೆಗೆ ವೈಟ್ ಮತ್ತು ನಿಯಾನ್ ಗ್ರೀನ್ ಬಣ್ಣದ ಕ್ಯಾಶುಯಲ್ ವೇರ್ ಧರಿಸಿದ್ದಳು. ಈ ಫೋಟೋ ನೋಡಿದ ನೆಟ್ಟಿಗರು ಇದು ಆಕೆಯ ಗಂಡ ರಣ್ ವೀರ್ ಕಾಪಿ ಎಂದಿದ್ದರು.

ಅಷ್ಟೇ ಅಲ್ಲ, ಆಕೆ ಗಂಡನ ಪ್ರತಿಯೊಂದು ಹೆಜ್ಜೆಯನ್ನು ಹೇಗೆ ಅನುಸರಿಸುತ್ತಿದ್ದಾಳೆ ನೋಡಿ ಎಂದು ಅಣಕವಾಡಿದ್ದರು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಇನ್ನೊಬ್ಬರು ಆಕೆಯ ಫ್ಯಾಷನ್ ಸೆನ್ಸ್ ಚೆನ್ನಾಗಿದೆಯಲ್ಲ, ತಪ್ಪೇನಿದೆ. ಗಂಡನನ್ನು ಅನುಸರಿಸುವುದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ.

Image result for deepika airport look neon green

ಮತ್ತೊಬ್ಬರು ಇನ್ನು ಸ್ವಲ್ಪ ಮುಂದೆ ಹೋಗಿ ರಣ್ ವೀರ್ ದೀಪಿಕಾಳನ್ನು ಮದುವೆಯಾದ ನಂತರ, ದೀಪಿಕಾಳನ್ನು ಬದಲಾಯಿಸಿದರು, ಆದರೆ ಆತ ಬದಲಾಗಲಿಲ್ಲ ಎಂದಿದ್ದಾರೆ. ರಣ್ ವೀರ್ ಕೆಲವು ದಿನಗಳ ಹಿಂದೆಯಷ್ಟೇ ‘ಗಲ್ಲಿ ಬಾಯ್ಸ್’ ಚಿತ್ರದ ಪ್ರಮೋಶನ್ ವೇಳೆ ದೀಪಿಕಾ ತರಹದ ದಿರಿಸನ್ನೇ ಧರಿಸಿದ್ದರು. ಇದನ್ನು ಗಮನಿಸಿದ್ದ ಟ್ರೋಲಿಗರು, ಈಗ ದೀಪಿಕಾ ಕಾಲೆಳೆಯತೊಡಗಿದ್ದಾರೆ.

ಮೂಲಗಳ ಪ್ರಕಾರ ದೀಪಿಕಾ ’83’ ಚಿತ್ರದ ಶೂಟಿಂಗ್ ಗಾಗಿ ಲಂಡನ್ ಗೆ ಹಾರಿದ್ದಾರೆ. ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ನಿಭಾಯಿಸುತ್ತಿದ್ದಾರೆ.

2000 ಪೌಂಡ್ ನೀಡಿ ಲೆಜೆಂಡ್ ಗಳ ಆಟೋಗ್ರಾಫ್ ವುಳ್ಳ ಬ್ಯಾಟ್ ಖರೀದಿಸಿದ ರಣ್ವೀರ್

#balkaninews #deepikapadukone #ranveersingh #83movie #bollywood

Tags