ಸುದ್ದಿಗಳು

ದೀಪಿಕಾ ಅಷ್ಟೇ ಅಲ್ಲ, ಇವರು ಕೂಡಾ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದವರು..!

ಮುಂಬೈ, ಮಾ.29:

ಸಿನಿಮಾ ಅಂದರೆ ನಟನೆ. ಯಾವುದೇ ಪಾತ್ರ ಆಗಲಿ, ಅಲ್ಲಿ ನಾಚಿಕೆ, ಹಿಂಜರಿಕೆ, ಅಸಮಾಧಾನ ಇರಬಾರದು. ತಮ್ಮನ್ನು ಮೀರಿಸುವ ಪಾತ್ರಗಳಲ್ಲಿ ನಟ, ನಟಿ ನಟಿಸಬೇಕಾಗುತ್ತದೆ. ಈ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಕಲಾವಿದರು ಮಾಡಬೇಕಾಗುತ್ತದೆ. ಅದಕ್ಕೆ ಅವರು ‘ತಾರೆಯರು’ ಎಂದು ಜನರ ಮೂಲಕ ಕರೆಸಿಕೊಳ್ಳುತ್ತಾರೆ.

ಇದೀಗ ಅಂತಹ ಹೊಸ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಆ ಸಿನಿಮಾದ ಹೆಸರೇ ‘ಛಪಕ್’. ಈ ಹೊಸ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ  ಆಸಿಡ್ ದಾಳಿಯಲ್ಲಿ ಬದುಕುಳಿದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿರುವ ತನ್ನ ಪಾತ್ರದ ಫೋಟೋವೊಂದನ್ನು ದೀಪಿಕಾ ಪಡುಕೋಣೆ ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ  ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆಯ ಪಾತ್ರದ ಫೋಟೋ ನೋಡಿ  ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇಂತಹ ನೋಟವನ್ನು ತರಲು ಪ್ರಾಸ್ಥೆಟಿಕ್ ಮೇಕ್ಅಪ್ ಅನ್ನು ಬಳಸಲಾಗಿದೆ.

ಸಣ್ಣ ಅಥವಾ ದೊಡ್ಡ ವಯಸ್ಸಿನಲ್ಲಿರುವ ಯಾವುದೇ ವಿಭಿನ್ನ ಪಾತ್ರವನ್ನು ತೋರಿಸಲು ಈ ರೀತಿಯ ಮೇಕ್ ಅಪನನ್ನು ಮಾಡಲಾಗುತ್ತದೆ. ಈ ರೀತಿಯ ಮೇಕ್ ಅಪ್ ಮಾಡಲು ಸುಮಾರು 6-10 ಗಂಟೆಗಳ ಕಾಲ ಬೇಕು. ಇನ್ನು ನಟಿ ದೀಪಿಕಾ ಪಡುಕೋಣೆ ಮಾತ್ರ ಈ ರೀತಿಯ ವಿಭಿನ್ನ ಪಾತ್ರ ಮಾಡಿದ್ದಲ್ಲ. ಈ ಮುಂಚೆ ಬಾಲಿವುಡ್ ನಲ್ಲಿ ಅನೇಕ ನಟ, ನಟಿಯರು ಪ್ರಾಸ್ಥೆಟಿಕ್ ಮೇಕ್ಅಪ್ ಗಳನ್ನು ಬಳಸಿ ನಟಿಸಿದ್ದಾರೆ. ಈ ವೇಳೆ ನಟರನ್ನು ಗುರುತಿಸಲು ಸಾಧ್ಯವಾಗದ ಮೇಕಪ್ ಇದಾಗಿದೆ. ಯಾಕೆಂದರೆ ಪ್ರಾಸ್ಥೆಟಿಕ್ ಮೇಕ್ಅಪ್ ಮಾಡಿದ ನಂತರ ಅವರ ನೋಟ ಸಂಪೂರ್ಣವಾಗಿ ಬದಲಾಗುತ್ತದೆ. ಮತ್ತು ಜನರು ಅವರನ್ನು ನೋಡುತ್ತಾ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇನ್ನು ದೀಪಿಕಾ ಪಡುಕೋಣೆ ತರಹ ಪ್ರಾಸ್ಥೆಟಿಕ್ ಮೇಕ್ಅಪ್ ಬಳಸಿ ವಿಭಿನ್ನ ಪಾತ್ರ ಮಾಡಿದ ಕೆಲವು ಬಾಲಿವುಡ್ ನಟರ ಬಗ್ಗೆ ತಿಳಿಯೋಣ..

 

 

ಅಮಿತಾಭ್ ಬಚ್ಚನ್:

‘ಪಾ’ ಹಿಂದಿ ಚಿತ್ರದಲ್ಲಿ ನಟ ಅಮಿತಾಭ್ ಬಚ್ಚನ್ ರ ನೋಟವನ್ನು ನೋಡಿ ಜನರು ಸಂಪೂರ್ಣವಾಗಿ ಆಶ್ಚರ್ಯಚಕಿತರಾಗಿದ್ದರು. ಅಮಿತಾಭ್ ಬಚ್ಚನ್ ರನ್ನು ಈ ರೀತಿಯ ಪಾತ್ರಕ್ಕೆ ಒಪ್ಪಿಸಲು ಮೇಕಪ್ ಕಲಾವಿದ ಸ್ಟೀಫನ್ ಡುಪಿಯಸ್ ಬಹಳ ಕಷ್ಟಪಟ್ಟಿದ್ದರು.

ಹೃತಿಕ್ ರೋಷನ್:

ನಟ ಹೃತಿಕ್ ರೋಷನ್ ರವರು ‘ಧೂಮ್ -2’ ಚಿತ್ರದಲ್ಲಿ ಹಲವು ವಿಭಿನ್ನ ನೋಟಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ನೀವು ಹೃತಿಕ್ ರೋಷನ್ ರ ವಿಭಿನ್ನ ನೋಟವನ್ನು ನೋಡಿದ ಮೇಲೆ ಇದು ಹೃತಿಕ್ ರೋಷನ್ ಅಂತಾ ಗುರುತಿಸಲು ಕಷ್ಟವಾಗಿತ್ತು.

ಕಮಲ್ ಹಾಸನ್

ನಟ ಕಮಲ್ ಹಾಸನ್ ‘ಚಾಚಿ 420’  ಚಿತ್ರದಲ್ಲಿ ಹಿರಿಯ ಮಹಿಳೆಯ ಪಾತ್ರದಲ್ಲಿ ಅಭಿನಯಿಸಿದ್ದರು. ಕಮಲ್ ಹಾಸನ್ ಗೆ ಮಹಿಳೆಯ ನೋಟವನ್ನು ನೀಡಲು ಪ್ರೊಸ್ಟೆಟಿಕ್ ಮೇಕ್ಅಪ್ ಅನ್ನ ಬಳಸಲಾಗಿತ್ತು.

ಶಾರುಖ್ ಖಾನ್

‘ಫ್ಯಾನ್ ‘ ಸಿನಿಮಾದಲ್ಲಿ ಶಾರೂಖ್ ಖಾನ್ ರ ನೋಟವನ್ನು ನೋಡಿ ಅಭಿಮಾನಿಗಳು  ಆಶ್ಚರ್ಯಚಕಿತರಾಗಿದ್ದರು.

ರಣಬೀರ್ ಕಪೂರ್

ನಟ ರಣಬೀರ್ ಕಪೂರ್ ‘ಬರ್ಫಿ’ ಚಿತ್ರದಲ್ಲಿ ಹಿರಿಯ ವಯಸ್ಸಿನ ಪಾತ್ರವನ್ನು ನಿರ್ವಹಿಸಿದ್ದರು. ವೃದ್ದರಂತೆ ಕಾಣಲು ಪ್ರಾಸ್ಥೆಟಿಕ್ ಮೇಕ್ಅಪ್ ಮಾಡಲಾಗಿತ್ತು.

ಧೋನಿಗೆ ಪ್ರೇಯಸಿಯಾಗಿ ಕೋಟಿ ಬಾಚಿದ ನಟಿ..!

#balkaninews #deepikapadukone #bollywood #kamalhassan #amitabhbahchan

Tags