ಸುದ್ದಿಗಳು

ಐದುಬ್ಲಾಕ್ ಬಸ್ಟರ್ ಸಿನಿಮಾಗಳನ್ನು ತಿರಸ್ಕರಿಸಿದ್ದರಂತೆ ದೀಪಿಕಾ ಪಡುಕೋಣೆ!!!

ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ನ ನಂಬರ್ ಒನ್ ತಾರೆ ಎಂಬುದರಲ್ಲಿ ಯಾವುದೇ ಡೌಟ್ ಇಲ್ಲ. ಮಾಡೆಲಿಂಗ್ ಗೂ ಸೈ, ಸಿನಿಮಾಗೂ ಜೈ ಅನ್ನುವಂತೆ ಅವರು ಎಲ್ಲಾ ಮನೋರಂಜನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ. ನಟಿ ದೀಪಿಕಾ ಪಡುಕೋಣೆಗೆ ದೊಡ್ಡ ಬ್ರೇಕ್ ನೀಡಿದ್ದು ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರ. ಈ ನಡುವೆ ಅವರು ಹಾಲಿವುಡ್ ಗೂ ಹಾರಿ ಅಲ್ಲೂ ಕೂಡ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಆಕೆ ನಟಿಸಿದ ಪದ್ಮಾವತ್ ಚಿತ್ರ 300 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ರಣ್ ವೀರ್ ಸಿಂಗ್ ಮತ್ತು ಶಾಹೀದ್ ಕಾಪೂರ್ ನಟಿಸಿದ್ದರು. ಬ್ಲಾಕ್  ಬಸ್ಟರ್ ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ನೀಡುತ್ತಿರುವ ಈ ಬ್ಯೂಟಿ ಹಲವು ಬ್ಲಾಗ್ ಬಸ್ಟರ್ ಸಿನಿಮಾಗಳ ಆಫರ್ ಅನ್ನು ಕೂಡ ತಿರಸ್ಕರಿಸಿದ್ದಾರಂತೆ. ಅವುಗಳಲ್ಲಿ ಮೂರು ನಟ ಸಲ್ಮಾನ್ ಖಾನ್ ಜೊತೆಗಿನ ಸಿನಿಮಾಗಳು ಎಂದರೆ ನೀವು ಅಚ್ಚರಿ ಪಡುತ್ತೀರಾ.

ಜಬ್ ತಕ್ ಹೈ ಜವಾನ್ (2012)

ಮಾಧ್ಯಮವೊಂದಕ್ಕೆ ಬಂದಿರುವ ವರದಿಯಂತೆ, ಯಶ್ ಚೋಪ್ರಾ ಅವರ ಮೊದಲ ಆಯ್ಕೆ ಕತ್ರೀನಾ ಕೈಫ್ ಆಗಿರಲಿಲ್ಲ ಬದಲಿಗೆ ಶಾರೂಖ್ ಗೆ ಜೋಡಿಯಾಗಿ “ಜಬ್ ತಕ್ ಹೈ ಜವಾನ್ ಗೆ ದೀಪಿಕಾ ರನ್ನು ಆಯ್ಕೆ ಮಾಡಲು ಅವರು ಯೋಚಿಸಿದ್ದರಂತೆ. ಆದರೆ ದೀಪಿಕಾ ಪಡುಕೋಣೆ ಸ್ಕ್ರೀಪ್ಟ್ ತಿರಸ್ಕರಿಸಿದ ನಂತರ ಕತ್ರೀನಾಗೆ ಅವಕಾಶ ನೀಡಲಾಯಿತಂತೆ. ಅಂದ ಹಾಗೆ ಓಂ ಶಾಂತಿ ಓಂ, ಚೆನ್ನೈ ಎಕ್ಸ್ ಪ್ರೇಸ್ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ನಟಿ ದೀಪಿಕಾ ಹಾಗೂ ಶಾರೂಖ್ ಜೋಡಿಯಾಗಿ ನಟಿಸಿದ್ದಾರೆ. ಈ ಮೂರು ಚಿತ್ರಗಳು ಸೂಪರ್ ಹಿಟ್ ಆಗಿದ್ದವು.

Image result for jab tak hai jaan

ಧೂಮ್ 3 (2013)

ಅಮೀರ್ ಖಾನ್ ಅಭಿನಯದ ದೂಮ್ ಚಿತ್ರ ಬಾಲಿವುಡ್ ನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲೂಕೂಡ ಕತ್ರೀನಾ ಕೈಫ್ ಬದಲಿಗೆ ದೀಪಿಕಾ ಪಡುಕೋಣೆಯೇ ನಟಿಸಬೇಕಿತ್ತು. ಮೊದಲು ದೀಪಿಕಾಗೆ ಅವಕಾಶ ನೀಡಲಾಯಿತು. ಆದರೆ ಕಾಲ್ ಶೀಟ್ ಕೊರತೆಯಿಂದಾಗಿ ಆಕೆ ಚಿತ್ರವನ್ನು ತಿರಸ್ಕರಿಸಿದರು. ಹೀಗಾಗಿ ಕೊನೆಯಾದಾಗಿ ಕತ್ರೀನಾಕೈಫ್ ಗೆ ಅವಕಾಶ ನೀಡಲಾಯಿತಂತೆ.

Image result for dhoom 3

ಕಿಕ್ (2014)

ಕಿಕ್ ಚಿತ್ರದಲ್ಲೂ ದೀಪಿಕಾಗೆ ಅವಕಾಶ ನೀಡಲಾಯಿತು. ಆದರೆ ಹ್ಯಾಪಿ ನ್ಯೂ ಇಯರ್ ಚಿತ್ರದ ಶೂಟಿಂಗ್ ನಲ್ಲಿ ಆಕೆ ಬ್ಯುಸಿಯಾಗಿದ್ದರಂತೆ  ಚಿತ್ರಕ್ಕೆ ದೀಪಿಕಾ ನೋ ಅಂದರೆ. ಕೊನೆಪಕ್ಷ ಯಾವುದಾದರೂ ಐಟಂ ಸಾಂಗ್ ಗಾದರೂ ಹೆಜ್ಜೆ ಹಾಕು ಎಂದರೂ ದೀಪಿಕಾಗೆ ಸಮಯದ ಅಭಾವದಿಂದಾಗಿ ಈ ಚಿತ್ರದಲ್ಲೂ ಅವರು ನಟಿಸಲಿಲ್ಲ ಎನ್ನಲಾಗಿದೆ.

ಪ್ರೇಮ್ ರತನ್ ಧನ್ ಪಾಯೋ (2015)

ಸೋನಂಕಪೂರ್ ಹಾಗೂ ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಚಿತ್ರ ಪ್ರೇಮ್ ರತನ್  ಧನ್ ಪಾಯೋ ಚಿತ್ರದಲ್ಲೂ ಮತ್ತೆ ದೀಪಿಕಾಗೆ ನಿರ್ಮಾಪಕರು ಅವಕಾಶ ನೀಡಿದ್ದರು. ಬ್ಯುಸಿ ಶೆಡ್ಯೂಲ್ ನಿಂದಾಗಿ ಈ ಚಿತ್ರಕ್ಕೆ  ಸಮಯ ಹೊಂದಿಸಲು ಸಾಧ್ಯವಾಗದ ಕಾರಣ ಮತ್ತೆ ಸೋನಂಕಪೂರ್ ಅವರನ್ನು ಚಿತ್ರದಲ್ಲಿ ಆಯ್ಕೆ ಮಾಡಿಕೊಳ್ಳಲಾಯಿತು.

ಸುಲ್ತಾನ್ (2016)

2016ರಲ್ಲಿ ಮೂಡಿಬಂದ ಸೂಪರ್ ಹಿಟ್ ಚಿತ್ರ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಚಿತ್ರದಲ್ಲಿ ಅನುಷ್ಕಾ ಬದಲಿಗೆ ದೀಪಿಕಾ ಪಡುಕೋಣೆ ಅಭಿನಯಿಸಬೇಕಿತ್ತು. ಆದರೆ ದೀಪಿಕಾ ಈ ಅವಕಾಶವನ್ನು ತಿರಸ್ಕರಿಸಿದ್ದರಿಂದ ಅನುಷ್ಕಾಗೆ ಅದೃಷ್ಟ ಒಲಿದುಬಂತು. ಈ ಚಿತ್ರ ಸಲ್ಮಾನ್ ಖಾನ್ , ಅನುಷ್ಕಾಗೆ ಉತ್ತಮ ಹೆಸರು ತಂದುಕೊಟ್ಟಿತು.

Image result for sultan movie

 

ಟೆಲಿ ಇಂಡಸ್ಟ್ರೀಯ ಈ ಕ್ಯೂಟೆಸ್ಟ್ ಬಾಯ್ ಯ ಶಕ್ತಿ ಅಮ್ಮನಂತೆ…!!!

 

Tags