ಸುದ್ದಿಗಳು

ಗರ್ಭಿಣಿ ಎಂದ ಸುದ್ದಿಗೆ ದೀಪಿಕಾ ಉತ್ತರ ಕೊಟ್ಟಿದ್ದು ಹೇಗೆ? .

ಸದ್ಯ 'ಛಾಪಕ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬಿಝಿ

ಮುಂಬೈ.ಏ.14: ಬಾಲಿವುಡ್ ನ ಡಿಂಪಲ್ ಕ್ವೀನ್ ದೀಪಿಕಾ “ಮದುವೆಯಾದ ಕೂಡಲೆ ಮಕ್ಕಳ ಬಗ್ಗೆ ಯಾಕೆ ಕೇಳುತ್ತೀರ?” ಎಂದು ಮಾಧ್ಯಮಗಳನ್ನು ನೇರವಾಗಿ ಪ್ರಶ್ನಿಸಿದ್ದಾರೆ.  ಕಳೆದ ವರುಷ ನವೆಂವರ್ ತಿಂಗಳಿನಲ್ಲಿ ಪ್ರೇಮ ವಿವಾಹ ಮಾಡಿಕೊಂಡಿರವ ಬಾಲಿವುಡ್ ನ ಮುದ್ದು ಜೋಡಿ ದೀಪಿಕಾ – ರಣವೀರ್.

Image result for deepika padukone ranveer singh

ಇದೀಗ ದೀಪಿಕಾ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂವ ಸುದ್ದಿ ಕೇಳಿ ಬರುತ್ತಿದೆ. ಇದೇ ವಿಚಾರವಾಗಿ ದೀಪಿಕಾ ಮಾತನಾಡಿದ್ದಾರೆ. “ನಾನಿನ್ನೂ ಗರ್ಭಿಣಿಯಾಗಿಲ್ಲ. ಅದು ಯಾವಾಗ ಆಗಬೇಕೋ ಆಗ ಆಗುತ್ತದೆ. ಇನ್ನು ಯಾವಾಗಲೂ ಮದುವೆಯಾದವರನ್ನು ಮಕ್ಕಳ ಬಗ್ಗೆ ಕೇಳಿ ಅವರಿಗೆ ಕಿರಿಕಿರಿ ಯಾಕೆ ಮಾಡುತ್ತೀರಾ? ಇದು ದೊಡ್ಡ ತಪ್ಪು. ಅದು ಅವರವರ ಇಷ್ಟ. ಯಾರಿಗೂ ಕೂಡಾ ಇದರ ಬಗ್ಗೆ ಆ ರೀತಿ ಒತ್ತಡ ತರುವುದು ತರವಲ್ಲ” ಎಂದಿದ್ದಾರೆ.

Image result for deepika padukone ranveer singh

“ಮಕ್ಕಳಾದ ಮೇಲೆ ವೈವಾಹಿಕ ಜೀವನವನ್ನು ಸರಿಯಾಗಿ ಎಂಜಾಯ್ ಮಾಡಲು ಆಗಲ್ಲ ಎಂದು ಬಹಳಷ್ಟು ಮಂದಿ ನನಗೆ ಹೇಳಿದ್ದಾರೆ. ಮಾಧ್ಯಮದವರು ಅದು ಯಾವಾಗ ಇಂತಹ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುತ್ತಾರೋ ಆಗಷ್ಟೇ ಸಮಾಜದಲ್ಲಿ ಬದಲಾವಣೆ ಬರಲು ಸಾಧ್ಯ” ಎಂದಿದ್ದಾರೆ ದೀಪಿಕಾ. ಸದ್ಯಕ್ಕೆ ಅವರು ‘ಛಾಪಕ್’ ಚಿತ್ರದಲ್ಲಿ ಬಿಝಿಯಾಗಿದ್ದಾರೆ.

150 ರೂಪಾಯಿಯಿಂದ ಜೀವನ ಕಟ್ಟಿಕೊಂಡು ಬಂದಿದ್ದೇವೆ: ಡಿ-ಬಾಸ್ ದರ್ಶನ್

#deepika, #pregenent , #balkaninews #filmnews, #kannadasuddigalu, #bollywoodfilms

Tags