ಸುದ್ದಿಗಳು

ಡಿಪ್ಪಿ-ರಣವೀರ್ ಮದುವೆ ಇಂದ್ರಜಿತ್ ಗೆ ಆಹ್ವಾನ

ಮದುವೆಗೆ ಹೋಗದಿರಲು ಇಂದ್ರಜಿತ್ ತೀರ್ಮಾನ

ಬೆಂಗಳೂರು,ನ.12: ದೀಪಿಕಾ ಹಾಗೂ ರಣವೀರ್ ಮದುವೆಗೆ ಕೆಲವೇ ಮಂದಿಗೆ ಆಹ್ವಾನ ನೀಡಲಾಗಿದೆ. ಇದೀಗ ನಿರ್ದೇಶಕ ಇಂದ್ರಜಿತ್ ಲಂಕೇಶ್‌ಗೂ ಕೂಡ ಆಹ್ವಾನ ಬಂದಿತ್ತು ಎನ್ನಲಾಗಿದೆ.

ಡಿಪ್ಪಿಯನ್ನು ಕನ್ನಡಕ್ಕೆ ಕರೆ ತಂದಿದ್ದ ಇಂದ್ರಜಿತ್

ನಟಿ ದೀಪಿಕಾ ಹಾಗೂ ನಟ ರಣ್ವೀರ್ ಸಿಂಗ್ ಅವರ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಮದುವೆ ತಯಾರಿ ಕೂಡ ನಡೆದಿವೆ. ಈ ಅದ್ಧೂರಿ ಮದುವೆಗೆ ಕೆಲವೊಂದು ಮಂದಿಗೆ, ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದೀಗ ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಗೂ ಮದುವೆ ಆಮಂತ್ರಣ ನೀಡಲಾಗಿದೆ. ನಟಿ ದೀಪಿಕಾ ಕನ್ನಡದಲ್ಲಿ ಸಿನಿಮಾ ಮಾಡಿದ್ದರು ಎಂದರೆ ಅದು ‘ಐಶ್ವರ್ಯ’ ಸಿನಿಮಾ. ಕನ್ನಡಕ್ಕೆ ದೀಪಿಕಾರನ್ನು ಕರೆ ತಂದು ಉಪೇಂದ್ರ ಜೊತೆ ನಟಿಸುವಂತೆ ಮಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್.

Image result for deepika padukone

ಇಂದ್ರಜಿತ್ ಲಂಕೇಶ್ಗೆ ಆಹ್ವಾನ

ಹೌದು, ೨೦೦೬ ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸಿದ್ದರು. ಉಪೇಂದ್ರ ಜೊತೆ ಮೊದಲ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ಈ ನಟಿ ಜನ ಮನ ಗೆದ್ದಿದ್ದರು ದೀಪಿಕಾ. ೫ ಲಕ್ಷ ಸಂಭಾವನೆ ಪಡೆದು ದೀಪಿಕಾ ಮೊದಲ ಬಾರಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಈ ಹಿನ್ನೆಲೆಯಲ್ಲಿ ಇಂದ್ರಜಿತ್ ಲಂಕೇಶ್ ಅವರನ್ನು ಮದುವೆಗೆ ಆಹ್ವಾನ ಮಾಡಲಾಗಿದೆಯಂತೆ.

ವಾಟ್ಸಪ್ ಮೂಲಕ ಮದುವೆಗೆ ಆಹ್ವಾನ 

ಇನ್ನು ಈ ಮದುವೆಗೆ ಇಂದ್ರಜಿತ್‌ಗೆ ವಾಟ್ಸಪ್ ಮೂಲಕ ಆಹ್ವಾನ ಮಾಡಲಾಗಿದೆ. ಹಾಗಾಗಿ ಮದುವೆಗೆ ಹೋಗದಿರಲು ಇಂದ್ರಜಿತ್ ತೀರ್ಮಾನ ಮಾಡಿದ್ದಾರಂತೆ. ಯಾಕಂದರೆ ಕುದ್ದಾಗಿ ಕರೆ ಮಾಡಿದ್ದಾಗಲಿ ಅಥವಾ, ಆಮಂತ್ರಣ ಮನೆಗೆ ನೀಡಿದ್ದಾಗಲಿ ಇಲ್ಲ. ಬರೀ ವಾಟ್ಸಪ್‌ ನಲ್ಲಿ ಮಾತ್ರ ಕಳಿಸಲಾಗಿದೆಯಂತೆ.

Image result for indrajith kannada director

 

Tags

Related Articles