ಸುದ್ದಿಗಳು

ದೀಪಿಕಾ ಮದುವೆಗೆ ಹೊಸ ಕಂಟಕ!!

ಬೆಂಗಳೂರು,ಆ.25: ಬಾಲಿವುಡ್​​ ನ ಪ್ರೇಮ ಪಕ್ಷಿಗಳಾದ ನಟ ರಣವೀರ್ ಸಿಂಗ್ ಹಾಗೂ ಡಿಂಪಲ್ ಸುಂದರಿ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಎಲ್ಲೆಡೆ ಜೋರಾಗಿ ಹರಿದಾಡುತ್ತಿದೆ. ಆದರೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.ಇದರ ಮಧ್ಯೆ ಮತ್ತೊಂದು ಮಾಹಿತಿ ತಿಳಿದು ಬಂದಿದೆ.

 ವಿಶೇಷ ಪೂಜೆ!!

ಇವರಿಬ್ಬರ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುವುದಕ್ಕೂ ಮೊದಲು ದೀಪಿಕಾ ತಾಯಿ ಬೆಂಗಳೂರಿನಲ್ಲಿ ವಿಶೇಷ ಪೂಜೆ ನಡೆಸಲಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ.. ಬೆಂಗಳೂರಿನ ದೇವಾಲಯವೊಂದರಲ್ಲಿ ನಂದಿ ಪೂಜೆ ನಡೆಯಲಿದ್ದು, ಅದಕ್ಕೆ ಎಲ್ಲ ರೀತಿಯ ತಯಾರಿಯನ್ನು ದೀಪಿಕಾ ತಾಯಿ ಮಾಡಿಕೊಂಡಿದ್ದಾರೆ ಎನ್ನುತ್ತಿದೆ ಬಿ-ಟೌನ್. ವಿವಾಹದ ನಂತರ ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ಸಹ ಆಯೋಜಿಸಲಾಗುವುದು ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ತಮ್ಮ ಸಂಬಂಧಿಕರ ಜೊತೆ ಶಾಪಿಂಗ್ ಕೂಡ ಮಾಡಿದ್ದಾರೆ. ತಮ್ಮ ತಾಯಿ ಮತ್ತು ತಂಗಿ ಅನಿಶಾ ಪಡುಕೋಣೆ ಜೊತೆ ವಿವಾಹಕ್ಕಾಗಿ, ನಗರದ ಹಲವು ಆಭರಣ ಅಂಗಡಿಗಳಲ್ಲಿ ಶಾಪಿಂಗ್ ನಡೆಸಿದ್ದಾರೆ. ಸದ್ಯ ರಣವೀರ್ ಸಿಂಗ್ ‘ಸಿಂಬಾ’ ಚಿತ್ರದಲ್ಲಿ ಸಕ್ರಿಯರಾಗಿದ್ದಾರೆ.

Tags