ಸುದ್ದಿಗಳು

ಬಾಲಿವುಡ್ ನ ನವದಂಪತಿಗಳ ಮೇಲೆ ಸಿಖ್ ಸಮುದಾಯದ ಮಂದಿ ಮುನಿಸಿಕೊಂಡಿದ್ಯಾಕೆ.?

ಪವಿತ್ರ ಗ್ರಂಥಕ್ಕೆ ಅಪಮಾನ ಮಾಡಲಾಗಿದೆ

ಮುಂಬೈ,ನ.21: ಬಾಲಿವುಡ್ ಲವ್ ಬರ್ಡ್ಸ್, ದೀಪಿಕಾ ಪಡುಕೋಣೆ ಹಾಗೂ ರಣ್ ವೀರ್ ಸಿಂಗ್, ತಮ್ಮ 6 ವರ್ಷದ ಪ್ರೀತಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ನಿಜವಾದ ಅರ್ಥಕಲ್ಪಿಸಿದ್ದು, ಇಟಲಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ದಂಪತಿ, ಇದೀಗ ಸಿಖ್ ಸಮುದಾಯದ ಕೋಪಕ್ಕೆ ಗುರಿಯಾಗಿದೆ. ನವೆಂಬರ್ 14ರಂದು ದೀಪಿಕಾ ಪಡುಕೋಣೆ ಹಾಗೂ ರಣ್ ವೀರ್ ಕೊಂಕಣಿ ಸಂಪ್ರದಾಯದಂತೆ ಇಟಲಿಯಲ್ಲಿ ವೈವಾಹಿಕ ಜೀನನಕ್ಕೆ ಕಾಲಿಟ್ಟರೆ, ನವೆಂಬರ್ 15ರಂದು ಸಿಂಧಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.  ಆದರೆ ಸಿಂಧಿ ಸಂಪ್ರದಾಯದಂತೆ ವಿವಾಹವಾಗುವ ಭರದಲ್ಲಿ ಈ ನವದಂಪತಿ ಯಡವಟ್ಟು ಮಾಡಿಕೊಂಡಿದ್ದಾರೆ.

 

View this post on Instagram

 

A post shared by Deepika Padukone (@deepikapadukone) on

 ತರಬಾರದ್ದನ್ನು ತಮ್ಮ ಕೊಠಡಿಗೆ ಕೊಂಡೊಯ್ಯುದ ನವದಂಪತಿ!

ರಣ್ ವೀರ್ ಹಾಗೂ ದೀಪಿಕಾ ಪಡುಕೋಣೆ ಸಿಖ್ ಸಂಪ್ರದಾಯದಂತೆ ವಿವಾಹವವಾಗುವ ಆನಂದ್ ಕಾರಜ್ ಸಲುವಾಗಿ  ಸಿಖ್ಖರ ಪವಿತ್ರ ಗ್ರಂಥ, ಗುರು ಗ್ರಂಥ ಸಾಹೇಬ್ ಅನ್ನು ಹೊಟೇಲ್ ಕೊಠಡಿಗೆ ಕೊಂಡೊಯ್ಯಿದ್ದಾರೆ. ಇದು ಸಿಖ್ ಸಮುದಾಯವನ್ನು ಕೆರಳಿಸಿದೆ. ಸಿಖ್ ಸಮುದಾಯದ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಡಲು ಈ ಜೋಡಿ ಗುರುದ್ವಾರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಈ ಜೋಡಿ  ಗುರುದ್ವಾರಕ್ಕ ಹೋಗದೆ, ಹೊಟೇಲ್ ಕೊಠಡಿಗೆ ಪವಿತ್ರ ಗ್ರಂಥವನ್ನು ತರಿಸಿಕೊಂಡಿದ್ದು, ಪವಿತ್ರ ಗ್ರಂಥಕ್ಕೆ ಅಪಮಾನ ಮಾಡಲಾಗಿದೆ ಬುದು ಸಿಖ್ ಸಮುದಾಯದ ಆರೋಪ. ಹೀಗಾಗಿ ತಾವು ಅಕಾಲ್ ತಖ್ತ್ ನಲ್ಲಿ ದೂರು ದಾಖಲಿಸುವುದಾಗಿ ಸಿಖ್ ಮುಖಂಡರು ಹೇಳಿದ್ದಾರೆ. ಇದು ನವದಂಪತಿಗಳಲ್ಲಿ ಚಿಂತೆಗೆ ಕಾರಣವಾಗಿದೆ.

 

Tags