ಸುದ್ದಿಗಳು

ಬೆಂಗಳೂರಿಗೆ ರಣ್ವೀರ್-ದೀಪಿಕಾ!!

ಲೀಲಾ ಪ್ಯಾಲೇಸ್ನಲ್ಲಿ ಇವರಿಬ್ಬರ ಆರತಾಕ್ಷತೆ

ಬೆಂಗಳೂರು,ನ.20: ಸದ್ಯ ಸತಿ ಪತಿಗಳಾಗಿರುವ ರಣ್ವೀರ್ ಹಾಗೂ ದೀಪಿಕಾ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಇಬ್ಬರು ಅದ್ಧೂರಿಯಾಗಿ ಇತ್ತೀಚೆಗೆ ಇಟಲಿಯಲ್ಲಿ ಮದುವೆಯಾಗಿದ್ದಾರೆ.

ಬೆಂಗಳೂರಿಗೆ ಬಂದ ತಾರಾ ಜೋಡಿ

ಹೌದು, ಸದ್ಯ ತವರಿಗೆ ದೀಪಿಕಾ ಇದೀಗ ಬಂದಿಳಿದಿದ್ದಾರೆ. ಈಗಾಗಲೇ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿ ಸತಿ ಪತಿಗಳಾಗಿರುವ ಈ ಜೋಡಿ ಇದೀಗ ಬೆಂಗಳೂರಿನಲ್ಲಿಯೂ ಆರತಾಕ್ಷತೆ ಮಾಡಿಕೊಳ್ಳಲಿದೆ. ಹಾಗಾಗಿ ಈ ತಾರಾ ಜೋಡಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಲೀಲಾ ಪ್ಯಾಲೇಸ್‌ನಲ್ಲಿ ಇವರಿಬ್ಬರ ಆರತಾಕ್ಷತೆ ನಾಳೆ ನಡೆಯಲಿದೆ. ಇನ್ನು ಈ ಆರತಾಕ್ಷತೆಗೆ ಕೆಲವೇ ಮಂದಿಗೆ ಮಾತ್ರ ಆಮಂತ್ರಣವಿದೆ ಎನ್ನಲಾಗಿದೆ.

Related image

ಬಿಳಿ ಉಡುಗೆಯಲ್ಲಿ ಕಂಗೊಳಿಸಿದ ಜೋಡಿ

ಸದ್ಯ ಈ ಜೋಡಿ ಮುಂಬೈ ಏರ್‌ಪೋರ್ಟ್ ಹಾಗೂ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಫೋಟೋಗೆ ಫೊಸ್ ಕೊಟ್ಟಿದ್ದಾರೆ. ಬಿಳಿಯ ಅನಾರ್ಕಲಿ ಡ್ರೆಸ್‌ನಲ್ಲಿ ದೀಪಿಕಾ ಕಂಗೊಳಿಸಿದ್ರೆ, ಇನ್ನು ಬಿಳಿ ಹಾಗೂ ಹೂವಿನ ಪೈಜಾಮ್ ಧರಿಸಿದ್ದರು. ಇನ್ನು ಈ ಜೋಡಿಗೆ ಇಂದು ಕೂಡ ಸಭ್ಯಸಾಚಿ ಇವರ ಉಡುಪನ್ನು ರೆಡಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಇದೇ ವೇಳೆ ಈ ನಟಿ ಹಾಕಿದ್ದ ಮಂಗಳ ಸೂತ್ರ ಕೂಡ ಎಲ್ಲರಿಗೆ ಆಕರ್ಷಿತರಾದರು. ೨೦ ಲಕ್ಷ ಬೆಲೆ ಬಾಳುವ ತಾಳಿ ಇದಾಗಿದೆಯಂತೆ. ಸದ್ಯ ಮದುವೆಗೆ ಅಂತಾನೆ ಈ ನಟಿ ೧ ಕೋಟಿಗೂ ಅಧಿಕ ಹಣ ವ್ಯಯ ಮಾಡಿದ್ದಾರೆ ಎನ್ನಲಾಗಿದೆ.

 

View this post on Instagram

 

A post shared by Deepika Padukone (@deepikapadukone) on

Tags

Related Articles