ಸುದ್ದಿಗಳು

ಮಿರಮಿರನೆ ಮಿಂಚಿದ್ರು ಈ ಮುದ್ದಾದ ಜೋಡಿ

ಮುಂಬೈನ ಗ್ರ್ಯಾಂಡ್ ಹ್ಯಾಟ್ನಲ್ಲಿ ನಡೆದ ರಿಸೆಪ್ಷನ್

ಮುಂಬೈ,ನ.29: ಬಾಲಿವುಡ್‌ ನ ಮುದ್ದಾದ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್‌ ಸಿಂಗ್‌  ನವೆಂಬರ್ 14 ಹಾಗೂ 15 ರಂದು ಇಟಲಿಯ ಕೋಮೊ ಸಿಟಿಯಲ್ಲಿ ಮದುವೆ ಮಾಡಿಕೊಂಡಿದ್ದರು.. ಇನ್ನು ಇವರು ಬೆಂಗಳೂರಿನಲ್ಲಿ ಇತ್ತೀಚೆಗೆ ಆರತಕ್ಷತೆ ಮಾಡಿಕೊಂಡಿದ್ದು ಕೇವಲ ಆಪ್ತರಿಗೆ ಮಾತ್ರ ಕರೆಯಲಾಗಿತ್ತು..

Related image

ಗೋಲ್ಡ್ಮತ್ತು ಬಿಳಿ ಬಣ್ಣದ ಸೀರೆ

ಈಗ ಮುಂಬೈನಲ್ಲಿ  ಅದ್ದೂರಿಯಾಗಿ ಎರಡನೇ ರಿಸೆಪ್ಷನ್‌ ಮಾಡಿದ್ದಾರೆ. ಮುಂಬೈನ ಗ್ರ್ಯಾಂಡ್‌ ಹ್ಯಾಟ್‌ನಲ್ಲಿ ನಡೆದ ರಿಸೆಪ್ಷನ್‌ ಕಾರ್ಯಕ್ರಮದಲ್ಲಿ ಕೇವಲ ಫ್ಯಾಮಿಲಿ ಸದಸ್ಯರು ಮಾತ್ರ ಭಾಗಿಯಾಗಿದ್ದರು.

ದೀಪಿಕಾ ಹಾಗೂ ರಣವೀರ್ ಜೋಡಿ ನೋಡಿ ಅದೆಷ್ಟು ಜನ ಹೊಟ್ಟೆಕಿಚ್ಚು ಪಟ್ಟರೋ ತಿಳಿಯದು.. ದೀಪಿಕಾ ಗೋಲ್ಡ್‌ ಮತ್ತು ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರೆ, ರಣವೀರ್‌ ಸಿಂಗ್‌ ಕೂಡಾ ಗೋಲ್ಡ್‌ ಪ್ರಿಂಟೆಡ್‌ ವೈಟ್‌ ಶೇರ್ವಾನಿಯಲ್ಲಿ ಮಿಂಚುತ್ತಿದ್ದರು.  ಇಬ್ಬರೂ ಕೂಡ ಮ್ಯಾಚಿಂಗ್ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದರು..

Image result for mumbai reception deepveer

ಡಿ.1 ರಂದು ಮೂರನೇ ಆರತಕ್ಷತೆ

ಇನ್ನು ಬಾಲಿವುಡ್ ಸ್ಟಾರ್ ಗಳಿಗೆ ಡಿ.1 ರಂದು ಮೂರನೇ ಆರತಕ್ಷತೆ ನಡೆಯಲಿದೆ.. ಹಾಗಾಗಿ ಬಾಲಿವುಡ್ ಸ್ಟಾರ್ ಗಳೆಲ್ಲರೂ ಅಂದು ಡಿಪ್ಪಿ – ವೀರ್ ಆರತಕ್ಷತೆಯಲ್ಲಿ ಪಾಲ್ಗೊಳ್ಳಲಿದ್ದಾರೆ..

Tags