ಸುದ್ದಿಗಳು

ಇಶಾ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಡಿಪ್ಪಿ-ಡ್ಯಾನ್ಸ್ ವೈರಲ್!!

ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗಳು

ಉದಯ್ಪುರ್‌,ಡಿ.11: ಉದಯ್ಪುರ್‌ ನಲ್ಲಿ ಇಶಾ ಅಂಬಾನಿ ಹಾಗೂ ಆನಂದ್ ಪೀರಾಮಲ್‌ರವರ  ಸಂಗೀತ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಹಲವಾರು ತಾರೆಯರು ಪಾಲ್ಗೊಂಡಿದ್ದಾರೆ. ಶಾರುಖ್ ಖಾನ್, ಸಲ್ಮಾನ್, ಐಶ್ವರ್ಯಾ ರೈ, ದೀಪಿಕಾ, ರಣವೀರ್ ಸಿಂಗ್ ಹೀಗೆ ಅನೇಕರು ನೆರೆದಿದ್ದರು.. ಇನ್ನು ಬಾಲಿವುಡ್ ನ ಮುದ್ದಾದ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮುಕೇಶ್ ಅಂಬಾನಿಯ ಮಗಳ ಮದುವೆ ಪೂರ್ವ ಸಮಾರಂಭದಲ್ಲಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ..

ಡಿಪ್ಪಿ- ರಣವೀರ್ ಡ್ಯಾನ್ಸ್!

ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಅಂಬಾನಿ ಮದುವೆ ನಾಳೆ ನಡೆಯಲಿದೆ… ಬಿಟೌನ್ ತಾರೆಯರೆಲ್ಲಾ ಇಶಾ ಅಂಬಾನಿಯವರ ಮದುವೆ ಪೂರ್ವ ಪಾರ್ಟಿಗೆ ಆಗಮಿಸಿದ್ದರು.. ಎಲ್ಲರೂ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.. ಅದರಲ್ಲೂ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಅವರ ಕಪಲ್ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.. ಇಷ್ಟೇ ಅಲ್ಲದೆ ಅಭಿಷೇಕ್ ಹಾಗೂ ಐಶೂ ಡ್ಯಾನ್ಸ್ ಕೂಡ ಸಖತ್ ಆಗಿದೆ…

Tags