ಸುದ್ದಿಗಳು

ಡಿಪ್ಪಿ-ವೀರ್ ಆರಕ್ಷತೆಗೆ ಯಾರೆಲ್ಲಾ ಬಂದಿದ್ದರು ಗೊತ್ತೇ?

ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಲೀಲಾ ಪ್ಯಾಲೇಸ್

ಬೆಂಗಳೂರು,ನ.22: ಬಾಲಿವುಡ್ ನ ಹಾಟ್ ಆ್ಯಂಡ್ ಫೇವರೀಟ್ ಕಪಲ್ ​​​ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್  ವಿವಾಹವಾಗಿದ್ದು, ನಿನ್ನೆಯಷ್ಟೇ ಅವರ ಆರತಕ್ಷತೆ ಬೆಂಗಳೂರಿನ ಲೀಲಾ ಪ್ಯಾಲೇಸ್​ ನಲ್ಲಿ ಭರ್ಜರಿಯಾಗಿ ನಡೆದಿದೆ.  ರಣವೀರ್ ಹಾಗೂ ದೀಪಿಕಾ ಭರ್ಜರಿಯಾಗಿ ಕಂಗೊಳಿಸುತ್ತಿದ್ದರು.. ದೀಪಿಕಾ ಅವರು ತಮ್ಮ ತಾಯಿ ನೀಡಿರುವ ಚಿನ್ನದ ಬಣ್ಣದ ಕಾಂಜೀವರಂ ಸೀರೆಯುಟ್ಟು ಮಿರಮಿರನೆ ಮಿಂಚುತ್ತಿದ್ದರು.. ರಣವೀರ್ ಸಿಂಗ್, ರೋಹಿತ್​ ಬೆಹ್ಲ್​​ ಸಿದ್ಧಪಡಿಸಿರುವ ಕಪ್ಪು ಬಣ್ಣದ ಶೇರವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ..

Image result for deepika in bangalore

ಗಣ್ಯಾತಿಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ

ಇನ್ನು ಆರತಕ್ಷತೆ ಕಾರ್ಯಕ್ರಮಕ್ಕೆ ಈ ಜೋಡಿ ತಮ್ಮ ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸಿದ್ದಾರೆ. ನವ ಜೋಡಿಗಳಿಗೆ ಆಶೀರ್ವದಿಸಲು ಗಣ್ಯಾತಿಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿ.ವಿ. ಸಿಂಧು, ಪುಲ್ಲೇಲ ಗೋಪಿಚಂದ್​, ಅನಿಲ್ ಕುಂಬ್ಳೆ ದಂಪತಿ ಹಾಗೂ ಇನ್ನಿತರರು ಆಗಮಿಸಿದ್ದಾರೆ.

Image result for deepika in bangalore

Tags