ಸುದ್ದಿಗಳು

ಇನ್ಸ್ಟಾಗ್ರಾಮ್ ಗೆ ಮರಳಿದ ಡೆಮಿ ಲೊವಾಟೋ

ಈಗಾಗಲೇ ಗಮನ ಸೆಳೆದ ಅಮೇರಿಕನ್ ಗಾಯಕಿ

ನ.8: ಸಾಮಾಜಿಕ ಮಾಧ್ಯಮದಲ್ಲಿ ಮತದಾನ ಜಾಗೃತಿ ಸಂದೇಶ ನೀಡುವ ಮೂಲಕ ಗಮನ ಸೆಳೆದ ಅಮೆರಿಕನ್ ಗಾಯಕಿ ಡೆಮಿ ಲೊವಾಟೋ. ಇವರು ಸದ್ಯ ಪುನಃಶ್ಚೇತನ ಕೇಂದ್ರದಿಂದ ವಾಪಸ್ಸಾಗಿದ್ದು, ಪುನಃ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದಾರೆ.

ಖುಷಿ ಹಂಚಿಕೊಂಡ ಗಾಯಕಿ

26 ವರ್ಷದ ವಯಸ್ಸಿನ ಗಾಯಕಿ ಡೆಮಿ ಲೊವಾಟೋ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮತ ಚಲಾಯಿಸುತ್ತಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಮತದಾನದ ಕುರಿತು ಸಂದೇಶವೊಂದನ್ನು ನೀಡಿದ್ದಾರೆ.

“ಮತದಾನದ ವೇಳೆಗೆ ನಾನು ಮನೆಗೆ ವಾಪಸ್ಸಾಗಿರುವುದು ನನಗೆ ಬಹಳ ಸಂತೋಷವಾಗಿದೆ. ಒಂದು ಮತವು ಏನೆಲ್ಲಾ ಬದಲಾವಣೆ ಮಾಡಬಹುದು ಎಂಬುದರ ಅರಿವಿದೆ. ಅಲ್ಲದೇ, ನಿಮ್ಮ ಧ್ವನಿಯನ್ನು ಎತ್ತರಿಸಿ ಕೇಳುವ ಸಾಧ್ಯವಾಗುತ್ತದೆ. ಹಾಗಾಗಿ ನೀವು ಕೂಡ ನಿಮ್ಮ ಮತ ಚಲಾಯಿಸಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ” ಎಂದು ಬರೆದಿದ್ದಾರೆ. ಜುಲೈ ನಂತರದ ಅವಧಿಯ ನಂತರ ಪೋಸ್ಟ್ ಮಾಡಿದ ಮೊದಲ ಫೋಟೊ ಇದಾಗಿದೆ.

ಮಾದಕ ವ್ಯಸನಿಯಾಗಿದ್ದ ಡೆಮಿ ಲೊವಾಟೋ

ಅತಿಯಾದ ಮಾದಕ ದ್ರವ್ಯ ಸೇವನೆಯ ವ್ಯಸನದಿಂದಾಗಿ ಜುಲೈ 24ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೀಗೆ ಆಸ್ಪತ್ರೆಗೆ ದಾಖಲಾದ ಡೆಮಿ, ಮೂರು ತಿಂಗಳ ನಂತರ, ಶನಿವಾರ ಲಾಸ್ ಏಂಜಲೀಸ್ ನ ರೆಸ್ಟೋರೆಂಟ್ ನ ಹೊರಗೆ ಲೊವಾಟೋ ಪತ್ತೆಯಾಗಿದ್ದರು ಎಂದು ಟಿಎಂಜಿ ವರದಿ ಮಾಡಿತ್ತು.

Tags