ಸುದ್ದಿಗಳು

ಕೋಲ್ಕತ್ತಾದಲ್ಲಿ ಚಿತ್ರೀಕರಣಗೊಂಡ ‘ದೇವಕಿ’ಯಲ್ಲಿವೆ ಹಲವಾರು ವಿಶೇಷಗಳು..!!!

ಬಾಲಿವುಡ್ ನಲ್ಲಿ ಬಾಲಿವುಡ್ ನ ಸಂಜೀವ್ ಜೈಸ್ವಾಲ್ ಪ್ರಮುಖ ನಟನೆ

ಬೆಂಗಳೂರು.ಮೇ.26: ರಿಯಲ್ ಸ್ಟಾರ್ ಉಪೇಂದ್ರರ ಪತ್ನಿ ಪ್ರಿಯಾಂಕಾ ಹಾಗೂ ಮಗಳು ಐಶ್ವರ್ಯ ನಟಿಸಿರುವ ‘ದೇವಕಿ’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಚಿತ್ರವು ಸಾಕಷ್ಟು ಕುತೂಹಲ ಮೂಡಿಸಿದ್ದು, ಚಿತ್ರದಲ್ಲಿ ಹಲವಾರು ವಿಶೇಷಗಳಿವೆ.

ಹೌದು, ಈ ಚಿತ್ರದಲ್ಲಿ ಬಾಲಿವುಡ್ ನ ‘ದಿ ಅಟ್ಯಾಕ್ಸ್ 26/11′ ಚಿತ್ರದಲ್ಲಿ ಕಸಬ್ ಪಾತ್ರ ಮಾಡಿದ್ದ ಸಂಜೀವ್ ಜೈಸ್ವಾಲ್ ನಟಿಸಿದ್ದಾರೆ. ಈಗಾಗಲೇ ಇವರು ಕಿರುತೆರೆಯಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಾ ಸಿನಿಪಯಣ ಆರಂಭಿಸಿ, ಇದೀಗ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Image result for kannada devaki movie

‘ಹೌದು, ನಮ್ಮ ಚಿತ್ರದಲ್ಲಿ ಅಜ್ಮಲ್ ನಲ್ಲಿದ್ದ ಕ್ರೌರ್ಯತೆ, ನಿರ್ದಾಕ್ಷಿಣ್ಯತೆ, ಹೇಡಿತನವನ್ನು ಸಂಜೀವ್ ಜೈಸ್ವಾಲ್ ಅತ್ಯಂತ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ. ಇನ್ನು ಇಡೀ ಕಥೆ ಉತ್ತರ ಭಾರತದಲ್ಲಿ ನಡೆಯಲಿದ್ದು ಅದೇ ಫೀಲ್ ಕೊಡುವ ನಟರು ಬೇಕಾಗಿತ್ತು. ಹೀಗಾಗಿ ಸಂಜೀವ್ ಜೈಸ್ವಾಲ್ ರನ್ನು ಹಾಕಿಕೊಂಡಿದ್ದೇವೆ’ ಎಂದು ಚಿತ್ರತಂಡದವರು ಹೇಳುತ್ತಾರೆ.

Image result for kannada devaki movie

ಅಂದ ಹಾಗೆ ಈ ಚಿತ್ರವು ಬಹುತೇಕ ಚಿತ್ರೀಕರಣ ಕೋಲ್ಕತ್ತಾದಲ್ಲಿಯೇ ನಡೆದಿದೆ. ಹಾಗಾಗಿ, ಅಲ್ಲಿನ ಸ್ಥಳೀಯ ಬೆಂಗಾಲಿ ಭಾಷೆಗೂ ಪ್ರಮುಖ ಆದ್ಯತೆ ನೀಡಿದ್ದು, ಚಿತ್ರದಲ್ಲಿ ಬೆಂಗಾಲಿ, ಇಂಗ್ಲೀಷ್, ಹಿಂದಿ ಭಾಷೆಯನ್ನೂ ಸಹ ಕೇಳಬಹುದು.

ಸಿನಿಮಾ ನೋಡುವ ಪ್ರೇಕ್ಷಕರಿಗೆ ನೈಜ ಅನುಭವ ಕಟ್ಟಿಕೊಡುವ ಉದ್ದೇಶದಿಂದಲೇ, ಬೆಂಗಾಲಿ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಂಡಿದ್ದು, ಚಿತ್ರದಲ್ಲಿ ಸುಮಾರು 300 ಕ್ಕೂ ಹೆಚ್ಚು ಜೂನಿಯರ್ ಕೆಲಸ ಮಾಡಿದ್ದಾರೆ. ಅದರಲ್ಲೂ ಶೇ.40 ರಷ್ಟು ಮಂದಿ ಬೆಂಗಾಲಿ ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿರುವುದು ಹೈಲೈಟ್. ಇತ್ತೀಚೆಗೆ ಚಿತ್ರದಲ್ಲಿ ಕಾಣಸಿಗುವ ಬೆಂಗಾಲಿ ಪಾತ್ರಗಳಿಗೆ ಬೆಂಗಾಲಿ ಭಾಷೆಯಲ್ಲೇ ಡಬ್ಬಿಂಗ್ ಮಾಡಿಸಿರುವುದು ವಿಶೇಷ.

ಈ ಹಿಂದೆ ‘ಮಮ್ಮಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಲೋಹಿತ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ವೇಣು ಛಾಯಾಗ್ರಹಣ,. ನೊಬಿನ್ ಪಾಲ್ ಸಂಗೀತ, ರವಿಚಂದ್ರ ಅವರ ಸಂಕಲನವಿದ್ದು, ರವಿವರ್ಮ ಸಾಹಸ ಮಾಡಿದ್ದಾರೆ.

ಉಪ್ಪಿ ಅಣ್ಣನ ಮಗ ನಿರಂಜನ್ ಸುಧೀಂದ್ರರ ಸಿಕ್ಸ್ ಫ್ಯಾಕ್ ತಯಾರಿ…!!!

#devaki, #movie, #interesting, #balkaninews  #filmnews, #kannadasuddigalu

Tags