ಸುದ್ದಿಗಳು

‘ಕೆ.ಜಿ.ಎಫ್’ ಚಿತ್ರದ ವಿತರಕದಿಂದ ‘ದೇವಕಿ’ ಬಿಡುಗಡೆ

ಇದೊಂದು ಮಹಿಳಾ ಪ್ರಧಾನ ಸಿನಿಮಾ

ಬೆಂಗಳೂರು.ಏ.20: ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದೇವಕಿ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ವಿಶೇಷವೆಂದರೆ, ಈ ಚಿತ್ರವನ್ನು ‘ಕೆ.ಜಿ.ಎಫ್’ ಚಿತ್ರವನ್ನು ವಿತರಿಸಿದ್ದ ಕಾರ್ತಿಕ್ ಗೌಡ ಖರೀದಿ ಮಾಡಿದ್ದಾರೆ.

ಲೋಹಿತ್ ಹೆಚ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ಟ್ರೈಲರ್ ನಿಂದ ಗಮನ ಸೆಳೆದಿದ್ದು, ಬರುವ ಮೇ ತಿಂಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಹಕ್ಕುಗಳನ್ನು ಅನಿವಾಸಿ ಭಾರತೀಯರೊಬ್ಬರಿಗೆ ಸೇರಿದ ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡರವರು ಹಕ್ಕುಗಳನ್ನು ಖರೀದಿಸಿದ್ದಾರೆ. ಹೀಗಾಗಿ ಚಿತ್ರತಂಡ ಖುಷಿಯಾಗಿದೆ.

“ಅನಿವಾಸಿ ಬಾರತೀಯರು ಸ್ಟಾರ್ ನಟರ ಚಿತ್ರಗಳ ವಿತರಣೆ ಹಕ್ಕನ್ನು ಪಡೆಯುವುದು ಸಾಮಾನ್ಯ, ಆದರೆ ನಾಯಕಿ ಕೇಂದ್ರಿತ ಕಥಾವಸ್ತುವುಳ್ಳ ಚಿತ್ರವೊಂದನ್ನು ಕೆ.ಆರ್.ಜಿ. ಸ್ಟುಡಿಯೋಸ್ ಇದೇ ಮೊದಲ ಬಾರಿಗೆ ವಿತರಣೆಗಾಗಿ ಪಡೆಯುತ್ತಿರುವುದು ಒಂದು ಸಕಾರಾತ್ಮಕ ನಡೆಯಾಗಿದೆ” ಎಂದು ನಿರ್ದೇಶಕ ಲೋಹಿತ್ ಹೇಳುತ್ತಾರೆ.

ಅಂದ ಹಾಗೆ ಈ ಹಿಂದೆ ಪ್ರಿಯಾಂಕಾ ಉಪೇಂದ್ರ ನಟಿಸಿದ್ದ ‘ಮಮ್ಮಿ’ ಚಿತ್ರವನ್ನು ಇದೇ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಹೀಗಾಗಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡುತ್ತಿವೆ.

ಇನ್ನು ಚಿತ್ರದ ಹಾಡುಗಳ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದ್ದು, ಸಸದ್ಯದಲ್ಲಿಯೇ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.ಚಿತ್ರದಲ್ಲಿ ಪ್ರಿಯಾಂಕಾ, ಹಾಗೂ ಅವರ ಮಗಳಾದ ಐಶ್ವರ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂದ ಹಾಗೆ ಈ ಚಿತ್ರವು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಎಚ್.ಸಿ. ವೇಣು ಕ್ಯಾಮರಾಮನ್, ನೊಬಿನ್ ಪೌಲ್ ಸಂಗೀತ ಈ ಚಿತ್ರಕ್ಕಿದೆ.

ನನ್ನ ಬೆಂಗಾವಲಾಗಿ ನಿಂತು ನನ್ನನ್ನು ಬೆಂಬಲಿಸಿದವರಿಗೆ ಸುಮಲತಾ ಧನ್ಯವಾದ

#devaki, #realsed, #movie, #balkaninews filmnews, #kannadasuddigalu, #priyankaupendra, #aishwarya

Tags