ಸುದ್ದಿಗಳು

ರಿಯಲ್ ಸ್ಟಾರ್ ಉಪೇಂದ್ರರ ಪತ್ನಿ ಪ್ರಿಯಾಂಕಾ ಹಾಗೂ ಮಗಳು ಐಶ್ವರ್ಯ ನಟಿಸಿರುವ ‘ದೇವಕಿ’ ಚಿತ್ರದ ಟೀಸರ್ ರಿಲೀಸ್

‘ಮಮ್ಮಿ’ ಚಿತ್ರದ ನಿರ್ದೇಶಕರ ಮತ್ತೊಂದು ಪ್ರಯತ್ನ

ಬೆಂಗಳೂರು.ಮಾ.14: ಈ ಹಿಂದೆ ‘ಹೌರಾಬ್ರಿಜ್’ ಎಂಬ ಹೆಸರಿನಲ್ಲಿ ನಿರ್ಮಾಣವಾಗಿದ್ದ ಚಿತ್ರಕ್ಕೆ ‘ದೇವಕಿ’ ಎಂಬ ಹೊಸ ಹೆಸರನ್ನು ಇಡಲಾಗಿದೆ. ಸದ್ಯ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.

ವಿಶೇಷವೆಂದರೆ, ಈ ಚಿತ್ರದ ಮೂಲಕ ರಿಯಲ್ ಸ್ಟಾರ್ ಉಪೇಂದ್ರರ ಮಗಳು ಐಶ್ವರ್ಯ ಚಿತ್ರರಂಗಕ್ಕೆ ಪರಿಚಿತವಾಗುತ್ತಿದ್ದಾರೆ.
ನಿನ್ನೆ ಸಂಜೆಯಷ್ಟೇ ಈ ಚಿತ್ರದ ಪತ್ರಿಕಾಗೋಷ್ಟಿ ನಡೆದಿದ್ದು, ಚಿತ್ರದಲ್ಲಿ ಪ್ರಿಯಾಂಕ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ನೋಡಿದ ಮೇಲೆ ಚಿತ್ರದ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಚಿತ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತೋರಿಸಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ.

ಈಗಾಗಲೇ ‘ಮಮ್ಮಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಲೋಹಿತ್ ಮತ್ತೆ ಪ್ರಿಯಾಂಕಾರ ಸಿನಿಮಾ ಮಾಡಿದ್ದಾರೆ. ಇದೊಂದು ಸಿಕ್ಕಾಪಟ್ಟೆ ರಾ ಆಗಿರುವ ಅನೇಕ ನೈಜತೆಯ ದೃಶ್ಯಗಳು ಇಲ್ಲಿವೆ. ಇಡೀ ವಿಶ್ವದಲ್ಲಿಯೇ ‘ಚೈಲ್ಡ್ ಟ್ರಾಕಿಂಗ್’ ದೊಡ್ಡ ಮಾಫಿಯಾ ಆಗಿದ್ದು, ಆ ವಿಷಯದ ಮೇಲೆ ಸಿನಿಮಾದ ಕಥೆ ಹೆಣೆಯಲಾಗಿದೆ.

‘ದೇವಕಿ’ ಕಂಸನ ತಂಗಿ ಹಾಗೂ ಶ್ರೀಕೃಷ್ಣನ ತಾಯಿಯ ಹೆಸರು. ಇಂತಹ ಪವರ್ ಫುಲ್ ಹೆಸರು ಈ ಸಿನಿಮಾಗೆ ನಿಗದಿಯಾಗಿದೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪಾತ್ರದ ಹೆಸರು ಕೂಡ ‘ದೇವಕಿ’ ಆಗಿದೆ. ಚಿತ್ರಕ್ಕೆ ಸರಿ ಎನ್ನಿಸುವ ಹೆಸರು ಇರಲಿ ಎಂದು ನಿರ್ದೇಶಕ ಲೋಹಿತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು ಮೊದಲ ಪ್ರಯತ್ನದಲ್ಲಿಯೇ ಹಾರರ್ ಸಿನಿಮಾ ಮಾಡಿದ್ದ ನಿರ್ದೇಶಕ ಲೋಹಿತ್ ಈ ಬಾರಿ ಯಾವ ರೀತಿಯ ಸಿನಿಮಾ ಮಾಡಿದ್ದಾರೆ ಎಂಬ ಕುತೂಹಲ ಮೂಡುತ್ತಿದೆ. ಇನ್ನು ಚಿತ್ರಕ್ಕೆ ಎಚ್. ಸಿ ವೇಣು ಛಾಯಾಗ್ರಹಣ, ನೋಬಿನ್ ಪೌಲ್ ಸಂಗೀತವಿದೆ. ವಿಶೇಷ ಪಾತ್ರವೊಂದರಲ್ಲಿ ‘ಹುಲಿ’ ಕಿಶೋರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

ನವೀನ್ ಕೃಷ್ಣ ಧ್ವನಿ ನೀಡಿರುವ ‘ಡೆಣ್ಣಾ ಡೆಣ್ಣಾ’.. ಸಾಂಗ್ ರಿಲೀಸ್

#lohith #mummy #devaki #teaserrealsed #kannadasuddigalu, #filmnews, #priyankaupendra, #Aishwryaupendra

Tags