ಸುದ್ದಿಗಳು

‘ದೇವಕಿ’ ಟೀಸರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೂರಿ ಜಗನ್ನಾಥ್

ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿದ್ದವಾದ ಸಿನಿಮಾ

ಬೆಂಗಳೂರು.ಮಾ.16: ಮೊನ್ನೆಯಷ್ಟೇ ರಿಲೀಸ್ ಆಗಿದ್ದ ‘ದೇವಕಿ’ ಚಿತ್ರದ ಟೀಸರ್ ಗೆ ನೋಡುಗರಿಂದ ಮೆಚ್ಚುಗೆಯ ಮಾತುಗಳು ಸಿಗುತ್ತಿದೆ. ಈಗ ತೆಲುಗಿನ ಪ್ರಸಿದ್ದ ನಿರ್ದೇಶಕರಲ್ಲಿ ಒಬ್ಬರಾದ ಪೂರಿ ಜಗನ್ನಾಥ್ ಈ ಟೀಸರ್ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ‘ಮಮ್ಮಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಲೋಹಿತ್ ‘ದೇವಕಿ’ ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಮಗಳು ಐಶ್ವರ್ಯ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ಟೀಸರ್ ನಿಂದಲೇ ಸಾಕಷ್ಟು ಕುತೂಹಲವನ್ನು ಕೆರಳಿಸುತ್ತಿದೆ. ಈಗಾಗಲೇ ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ನ ಅನೇಕ ಸಿನಿಮಾ ಮಂದಿಯರು ಸಹ ಟೀಸರ್ ಬಗ್ಗೆ ಮಾತನಾಡಿದ್ದಾರೆ.

ಇನ್ನು ಪೂರೀ ಜಗನ್ನಾಥ್ ಕನ್ನಡ ಸಿನಿಮಾಗಳ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು ತೀರ ಕಡಿಮೆಯೇ. ಈಗಾಗಲೇ ಕನ್ನಡದಲ್ಲಿ ‘ಅಪ್ಪು’, ‘ಯುವರಾಜ’ ಹಾಗೂ ‘ರೋಗ್’ ಚಿತ್ರಗಳನ್ನು ಮಾಡಿರುವ ಅವರೀಗ ಕನ್ನಡದ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

‘ದೇವಕಿ’ ಕಂಸನ ತಂಗಿ ಹಾಗೂ ಶ್ರೀಕೃಷ್ಣನ ತಾಯಿಯ ಹೆಸರು. ಇಂತಹ ಪವರ್ ಫುಲ್ ಹೆಸರು ಈ ಸಿನಿಮಾಗೆ ನಿಗದಿಯಾಗಿದೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪಾತ್ರದ ಹೆಸರು ಕೂಡ ‘ದೇವಕಿ’ ಆಗಿದೆ. ಚಿತ್ರಕ್ಕೆ ಸರಿ ಎನ್ನಿಸುವ ಹೆಸರು ಇರಲಿ ಎಂದು ನಿರ್ದೇಶಕ ಲೋಹಿತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಂದ ಹಾಗೆ ಇದೊಂದು ಹಾರರ್ ಹಾಗೂ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಇದಾದ ಬಳಿಕ ಇದೇ ಜೋಡಿಯಲ್ಲಿ ‘ಮಮ್ಮಿ-2’ ಸಿನಿಮಾ ಸಹ ಶುರುವಾಗಲಿದೆ. ಸದ್ಯದಲ್ಲಿಯೇ ಫಸ್ಟ್ ಲುಕ್ ಹಾಗೂ ಚಿತ್ರದ ಟೀಸರ್ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನು ಈ ಸಿನಿಮಾ ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

ಆಧುನಿಕ ಜಗತ್ತಿನ ನೈಜ ಘಟನಾವಳಿಗಳ ಆವರಣ

#devakiteaser, #liked, #poorijagannath, #balkaninews #kannadasuddigalu, #priyankaupendra, #aishwaryaupendra

Tags