ಸುದ್ದಿಗಳು

ಹಾರರ್ ಕಥೆಯ ‘ದೇವಯಾನಿ’

ಬಿಡುಗಡೆಗೆ ರೆಡಿಯಾದ ಸಿನಿಮಾ

ಬೆಂಗಳೂರು.ಮಾ.17: ಇತೀಚಿನ ದಿನಗಳಲ್ಲಿ ಹಾರರ್, ಸಸ್ಪೆನ್ಸ್ ಸಿನಿಮಾಗಳು ಬರುತ್ತಲೇ ಇವೆ. ಈಗಾಗಲೇ ಅನೇಕ ಸಿನಿಮಾಗಳು ತೆರೆ ಕಂಡು ಸಕ್ಸಸ್ ಕೂಡ ಆಗಿವೆ. ಇಂದಿನ ಪೀಳಿಗೆಗೆ ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ತೆರೆ ಕಾಣುತ್ತಿವೆ. ಇದೀಗ ಈ ಬೆನ್ನಲ್ಲೇ ಇದೀಗ ‘ದೇವಯಾನಿ’ ಸಿನಿಮಾ ಕೂಡ ಒಂದು.

ಇಬ್ಬರು ನಾಯಕಿಯರು

ಹೌದು, ಸದ್ಯ ಹಾರರ್ ಸಿನಿಮಾಗಳ ಸಾಲಿಗೆ ಇದೀಗ ‘ದೇವಯಾನಿ’ ಸಿನಿಮಾ ಕೂಡ ಒಂದು. ಆತ್ಮಗಳ ಪರಕಾಯ ಪ್ರವೇಶದ ಕುರಿತ ಕತೆಯನ್ನು ಈ ಚಿತ್ರ ಒಳಗೊಂಡಿದೆ. ಕಾಲೇಜಿನಲ್ಲಿ ಸೈನ್ಸ್ ಓದುತ್ತಿರುವ ಚಿತ್ರದ ನಾಯಕ ಕೆಲವು ವಿಷಯಗಳ ಕುರಿತು ರಿಸರ್ಚ್ ಮಾಡುತ್ತಿರುತ್ತಾನೆ, ಈ ಮದ್ಯೆ ಕೆಲವು ಘಟನೆಗಳು ಎದುರಾಗುತ್ತವೆ, ಅವೆಲ್ಲ ಸಮಸ್ಯೆಗಳನ್ನ ಎದುರಿಸಿ ನಾಯಕ ಗೋಪಿಕೃಷ್ಣ ಹೇಗೆ ಪಾರಾಗುತ್ತಾನೆ ಎನ್ನುವುದು ಚಿತ್ರದ ಕಥೆ.

Image may contain: 16 people, people smiling, people standing

ಇನ್ನು ಈ ಚಿತ್ರಕ್ಕೆ ಕಸ್ತೂರಿ ಜಗನ್ನಾಥ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ನಾಯಕರಾಗಿ ಗೋಪಿ ಕೃಷ್ಣ ಕಾಣಿಸಿಕೊಂಡರೆ, ಗೋಪಿಕೃಷ್ಣನಿಗೆ ಜೋಡಿಯಾಗಿ ರಾಗಾ ಮತ್ತು ಅರ್ಚನಾ ಇಬ್ಬರು ನಾಯಕಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ.

ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ

ಇನ್ನು ಈ ಸಿನಿಮಾ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ. ಈಗಾಗಲೇ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಸದ್ಯ ಹಾರರ್ ಕಥೆಯ ಮೂಲಕವೇ ಬಾರೀ ಸದ್ದು ಮಾಡುತ್ತಿರುವ ಈ ಸಿನಿಮಾ ಇನ್ನೇನು ತೆರೆ ಕಾಣಲಿದೆ.

ಬಲ್ಲಿರಾ ಬ್ರಾಹ್ಮಿ ಉಪಯೋಗ….?

#devayaani, #readytorealsed, #balkaninews #newcommers, #kannadasuddigalu

Tags