ಸುದ್ದಿಗಳು

ಸಿದ್ದಗಂಗಾ ಮಠದಲ್ಲಿ ಡಾಲಿ

ಡಾಲಿ ಎನ್ನುವ ನಾಮದ ಮೂಲಕವೇ ನಾಮಾಂಕಿತ ಪಡೆದ ಈ ನಟ

ಬೆಂಗಳೂರು,ನ.12: ನಟ ಧನಂಜಯ್ ಸದ್ಯ ಬ್ಯುಸಿ ನಟರಲ್ಲಿ ಒಬ್ಬರು. ಇದೀಗ ಈ ನಟ ಸಿದ್ದಗಂಗಾದಲ್ಲಿ ಶ್ರೀಗಳನ್ನು ಭೇಟಿಯಾಗಿದ್ದಾರೆ.

ಸಿದ್ದಗಂಗಾ ದಲ್ಲಿ ಡಾಲಿ

ಹೌದು, ನಟ ಧನಂಜಯ್ ಸದ್ಯ ಬ್ಯುಸಿ ನಟರಲ್ಲಿ ಒಬ್ಬರು.‌ ‘ಟಗರು’ ಸಿನಿಮಾ ಮೂಲಕ ಅದೆಷ್ಟೋ ಕೋಟಿಯ ಮನಗಳನ್ನು ಗೆದ್ದ ನಟ ಧನಂಜಯ್. ಡಾಲಿ ಎನ್ನುವ ನಾಮದ ಮೂಲಕವೇ ನಾಮಾಂಕಿತ ಪಡೆದ ಈ ನಟ ಸದ್ಯ ಬಹುದೊಡ್ಡ ಸಿನಿಮಾದಲ್ಲಿ ಅಂದರೆ ‘ಭೈರವ ಗೀತಾ’ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತರುವ ವಿಚಾರವೇ. ಈಗಾಗಲೇ ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅಷ್ಟೆ ಅಲ್ಲ ಬಾರೀ ನಿರೀಕ್ಷೆಯನ್ನು ನೀಡಿದೆ‌.

ಶ್ರಿಗಳ ಆಶಿರ್ವಾದ ಪಡೆದ ನಟ

ಇದೀಗ ಹೊಸ ವಿಚಾರ ಏನಪ್ಪಾ ಅಂದರೆ ಧನಂಜಯ್ ಇದೀಗ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಶ್ರೀಗಳ ಆಶಿರ್ವಾದ ಪಡೆದಿದ್ದಾರೆ ನಟ ಡಾಲಿ. ತುಮಕೂರಲ್ಲಿ ನಡೆದ ಒಂದು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದ ಡಾಲಿ ಶ್ರೀಗಳ ಬಳಿ ತೆರಳಿ ದರ್ಶನ ಪಡೆದಿದ್ದಾರೆ. ಅಷ್ಟೆ ಅಲ್ಲ ಶ್ರೀಗಳ ಬಳಿ ಹೂವಿನ ಹಾರವನ್ನು ಹಾಕಿಸಿಕೊಂಡಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಾಲಿಯನ್ನು ನೋಡಿದ ಅಭಿಮಾನಿಗಳ ಫುಲ್ ಖುಷಿಯಾಗಿದ್ದಾರೆ. ಅಷ್ಟೆ ಅಲ್ಲ, ಡಾಲಿ ಜೊತರ ಸೆಲ್ಫಿ ಕೂಡ ತೆಗೆಸಿಕೊಂಡಿದ್ದಾರೆ.

 

View this post on Instagram

 

ತುಮಕೂರಲ್ಲಿ:) #bhairavageetha Releasing this Nov 22nd:)

A post shared by Dhananjaya (@dhananjaya_ka) on

ಡಾಲಿಯನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್

ಇನ್ನು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಡಾಲಿಯನ್ನು ಕಂಡ ಅಭಿಮಾನಿಗಳ ಖುಷಿ ಮುಗಿಲು ಮುಟ್ಟಿದೆ. ಇನ್ನು ಡಾಲಿ ನಟಿಸುತ್ತಿರುವ ಭೈರವ ಗೀತಾ ಸಿನಿಮಾ ಇದೇ ತಿಂಗಳು ಬಿಡುಗಡೆ ಹಂತ ತಲುಪಿದೆ. ಈಗಾಗಲೇ ಟೀಸರ್ ಹಾಗೂ ಟ್ರೇಲರ್ ನಿಂದಾಗಿ ಬಾರೀ ಸದ್ದು ಮಾಡುತ್ತಿರುವ ಈ ಸಿನಿಮಾಗೆ ಅಭಿಮಾನಿಗಳು ಕೂಡ ಕಾದಿದ್ದಾರೆ‌.

 

Tags

Related Articles