ಸುದ್ದಿಗಳು

ಡಾಲಿ ಧನಂಜಯ್ ಆವಾಜ್ ಹೇಗಿದೆ ಗೋತ್ತಾ …..!

ಧನು ಡಿಫರೆಂಟ್ ಲುಕ್ ನೋಡಿದ ಫ್ಯಾನ್ಸ್

ಬೆಂಗಳೂರು,ನ. 12: ‘ಭೈವರ ಗೀತಾ’.. ಡಾಲಿ ಧನಂಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಇತ್ತೀಚೆಗಷ್ಟೇ ಲಿಪ್‌ಲಾಕ್ ಪೋಸ್ಟರ್ ಮೂಲಕವೇ ಅಭಿಮಾನಿಗಳ ಹುಬ್ಬೇರಿಸಿ ಸದ್ದು ಮಾಡಲು ರೆಡಿಯಾಗಿರುವ ಸಿನಿಮಾದ ಇಂಟ್ರೆಸ್ಟಿಂಗ್ ಟ್ರೇಲರ್ ರಿಲೀಸ್ ಆಗಿ ಭರವಸೆ ಮೂಡಿಸಿದೆ. ಡಾಲಿ ಪಾತ್ರದಲ್ಲಿ ಧನಂಜಯ್ ಟಗರಿನಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ್ರು.ಇನ್ನು ‘ಭೈರವ ಗೀತಾ’ ಚಿತ್ರದಲ್ಲಿ ಧನಂಜಯ್ ಯಾವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ರಗಡ್ ಲುಕ್ ನಲ್ಲಿ ಧನಂಜಯ್ …!

‘ಭೈರವ ಗೀತಾ’ ನೈಜಘಟನೆಯಾಧರಿಸಿ ಚಿತ್ರ. ಭೈರವನ ಅವತಾರದಲ್ಲಿ ಧನಂಜಯ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು. ಕೂಲಿ ಹುಡುಗನ ಪಾತ್ರದಲ್ಲಿ ಧನು ನಟಿಸಿದ್ದಾರೆ. ಧನು ಡಿಫರೆಂಟ್ ಲುಕ್ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ. ಕೈಯಲ್ಲಿ ಲಾಂಗ್ ಬದಲು ಮಚ್ಚು ಹಿಡಿದು ಮೈ ಝುಮ್ಮೆನ್ನಿಸುವಂತೆ ಧನಂಜಯ್ ನಟಿಸಿದ್ದಾರೆ. ಇನ್ನು ಧನಂಜಯ್‌ಗೆ ಜೋಡಿಯಾಗಿ ಇರಾ ನಟಿಸಿದ್ದಾರೆ. ಶ್ರೀಮಂತ ಮನೆ ಹುಡುಗಿಯ ಪಾತ್ರದಲ್ಲಿ ಇರಾ ಕಾಣಿಸಿದ್ದಾರೆ. ಅಲ್ಲದೆ ರಗಡ್ ಲುಕ್ ಜೊತೆಗೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಧನು ಎಲ್ಲರ ಚಿತ್ತ ಕದ್ದಿಯುತ್ತಿದ್ದಾರೆ.

Related image

‘ವಂದೇ ಮಾತರಂ’ ಅನ್ನೋ ಸ್ಪೆಷಲ್ ಹಾಡಿನ ಪ್ರೋಮೊ …!

ಪೋಸ್ಟರ್‌ನಲ್ಲಿ ತುಟಿಗೆ ತುಟಿ ಓತ್ತಿದ್ದ ಇರಾ ಮತ್ತು ಧನಂಜಯ್ ಲಿಪ್ ಲಾಕ್ ಸೀನ್ ಕೂಡ್ ಟ್ರೇಲರ್‌ನಲ್ಲಿ ಮೂಡಿಬಂದಿದ್ದು, ಚಿತ್ರದ ಮೇಲಿನ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಈಗ ‘ಡಾಲಿ’ ಧನಂಜಯ್ ಕೆಂಡಾಮಂಡಲರಾಗಿದ್ದಾರೆ. ಇದೀಗ ‘ವಂದೇ ಮಾತರಂ’ ಅನ್ನೋ ಸ್ಪೆಷಲ್ ಹಾಡಿನ ಪ್ರೋಮೊವನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಹೌದು, ‘ವಂದೇ ಮಾತರಂ’ ಹಾಡಿನಲ್ಲಿ ಧನಂಜಯ್ ಕ್ರಾಂತಿಕಾರಿ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಊರವರನ್ನು ಒಟ್ಟುಗೂಡಿಸಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ. ಜಾತಿ, ಅಂತಸ್ತು, ಜೀತಗಾರಿಕೆಯ ವಿರುದ್ಧವಾಗಿ ಹಾಡು ಕಟ್ಟಲಾಗಿದೆ. ಇದೇ 22ರಂದು ಭೈರವ ಗೀತಾ ರಿಲೀಸ್ ಆಗ್ತಿದೆ.

Tags

Related Articles