ಸುದ್ದಿಗಳು

‘ಪಾಪ್ ಕಾರ್ನ್’ ನಲ್ಲಿ ಡಾಲಿಯ ಹಲವು ಮುಖಗಳು

ಸದ್ಯ ಕನ್ನಡ ಮತ್ತು ತೆಲುಗಿನಲ್ಲಿ ಮಿಂಚುತ್ತಿರುವ ಧನಂಜಯ್

ಬೆಂಗಳೂರು.ಡಿ.16: ‘ಟಗರು’ ಚಿತ್ರದ ನಂತರ ಧನಂಜಯ್ ಈಗ ‘ಡಾಲಿ’ ಧನಂಜಯ್ ಆಗಿ ಮಿಂಚುತ್ತಿದ್ದಾರೆ. ಸದ್ಯ ಅವರು ನಟಿಸಿರುವ ದ್ವಿಭಾಷೆಯ ‘ಭೈರವ ಗೀತಾ’ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗುತ್ತಿವೆ.

ಹಲವು ಮುಖಗಳು

ಧನಂಜಯ ಈಗ ಸೂರಿ ನಿರ್ದೇಶನದ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಲು ಹಲವು ಕಾರಣಗಳಿವೆ. ‘ಟಗರು’ ಚಿತ್ರದ ನಂತರ ನಿರ್ಮಾಪಕ ಕೆ.ಪಿ ಶ್ರೀಕಾಂಯ್ ಹಾಗೂ ನಿರ್ದೇಶಕ ಸೂರಿ ಮತ್ತೊಮ್ಮೆ ಒಂದಾಗಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಧನಂಜಯ ಹಂಚಿಕೊಂಡಿರುವ ಫೋಟೋಗಳು ಸಖತ್ ಕುತೂಹಲ ಕೆರಳಿಸಿವೆ. ಅವರು ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎಂಬುದಕ್ಕೆ ಸಣ್ಣ ಸುಳಿವು ಸಿಕ್ಕಿದೆ. ಒಂದರಲ್ಲಿ ನಗುಮೊಗದ ಲವರ್ ಬಾಯ್ ರೀತಿ ಅವರು ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಮೊಳದಷ್ಟು ಗಡ್ಡಬಿಟ್ಟು, ಕಪ್ಪು ಕನ್ನಡಕ ಧರಿಸಿ ರಗಡ್ ಆಗಿ ಪೋಸ್ ನೀಡಿದ್ದಾರೆ.

ಚಿತ್ರದ ಬಗ್ಗೆ

ಈಗಾಗಲೇ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಬೆಂಗಳೂರು ಮಾತ್ರವಲ್ಲದೇ ಉತ್ತರ ಕರ್ನಾಟಕದ ಹಲವೆಡೆ ಚಿತ್ರೀಕರಣ ಮಾಡಲಾಗುತ್ತಿದೆ. ಇನ್ನು ಚಿತ್ರಕ್ಕೆ ನಾಯಕಿಯರಾಗಿ ನಿವೇದಿತಾ, ಅಮೃತಾ ಅಭಿನಯಿಸಿದ್ದಾರೆ.

Tags

Related Articles