ಸುದ್ದಿಗಳು

‘ಡಾಲಿ’ ಧನಂಜಯ್ ‘ಲಿಪ್-ಲಾಕ್’

‘ಭೈರವ ಗೀತಾ’ ಚಿತ್ರದ ಹೊಸ ಪೊಸ್ಟರ್ ನಲ್ಲಿ ಲಿಪ್-ಲಾಕ್ ಮಾಡಿದ ಧನಂಜಯ್

ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡುತ್ತಿರುವ ‘ಭೈರವ ಗೀತಾ’ ಚಿತ್ರವು ಈಗಾಗಲೇ ನಿರೀಕ್ಷೆ ಮೂಡಿಸಿದ್ದು, ಸದ್ಯ ಈ ಚಿತ್ರದ ಹೊಸ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಸದ್ದು ಮಾಡುತ್ತಿವೆ.

ಬೆಂಗಳೂರು, ಆ.30: ‘ಭೈರವ ಗೀತಾ’… ಈ ಹೆಸರು ಕೇಳಿದ ತಕ್ಷಣ ಇದೊಂದು ಸಾಹಸಮಯ ಚಿತ್ರವೆನ್ನುವ ಅನುಮಾನ ಎಲ್ಲರಲ್ಲೂ ಕಾಡುತ್ತಿತ್ತು. ಅನುಮಾನಕ್ಕೆ ಪುಷ್ಟಿ ನೀಡುವಂತೆ ನಟ ಧನಂಜಯ್ ನ ಫೋಸ್ಟರ್ ಗಳು ಕೂಡ ಇದ್ದವು. ಇದೀಗ ಇದೆಲ್ಲಕ್ಕೂ ಉಲ್ಟಾ ಹೊಡೆಯುವಂತ ಕೆಲವೊಂದು ಪೋಸ್ಟರ್ಗಳು ಬಿಡುಗಡೆಯಾಗಿವೆ.

ಡಾಲಿ ಪ್ರಣಯ ನೋಟ

ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡುತ್ತಿರುವ ಹಾಗೂ ಸಿದ್ದಾರ್ಥ್ ಎಂಬ ನವ ನಿರ್ದೇಶಕ ಈ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ದೇಶನ ಮಾಡುತ್ತಿರುವ ‘ಭೈರವ ಗೀತಾ’ ಚಿತ್ರದ ಚಿತ್ರೀಕರಣ ಸದ್ಯ ಭರದಿಂದ ಸಾಗಿದೆ. ಹಾಗೂ ಪೋಸ್ಟರ್ ಗಳ ನೋಟದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇಷ್ಟು ದಿನ ಖಡಕ್ ಹಾಗೂ ರಗಡ್ ಆಗಿ ಕಾಣಿಸಿಕೊಂಡಿದ್ದ ‘ಡಾಲಿ’ ಈ ಹೊಸ ಪೋಸ್ಟರ್ ಗಳಲ್ಲಿ ಪ್ರಣಯದ ನೋಟವನ್ನು ಬೀರಿದ್ದಾರೆ.

ಹೊಸ ಪೋಸ್ಟರ್ ಗಳು

ಹೌದು, ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ‘ಭೈರವಗೀತಾ’ ಪೋಸ್ಟರ್ ಗಳ ಒಂದರಲ್ಲಿ ನಾಯಕ ಡಾಲಿ, ನಾಯಕಿಯ ಜೊತೆಗೆ ಲಿಪ್ ಲಾಕ್ ಮಾಡಿರುವ ಪೋಸ್ಟರ್ ಸದ್ಯ ಸುದ್ದಿಯಲ್ಲಿದೆ. ಇಷ್ಟು ದಿನ ಇದೊಂದು ಸಾಹಸಮಯ ಚಿತ್ರವೆಂದುಕೊಂಡಿದ್ದ ಮಂದಿ ‘ಓ..! ಇದರಲ್ಲಿ ಪ್ರಣಯದ ಕಥೆಯೂ ಇದೆಯೋ..?’ ಎಂದು ತಮಗೆ ತಾವೇ ಅಚ್ಚರಿಗೊಂಡಿದ್ದಾರೆ. ಇನ್ನು ಈ ಸಿನಿಮಾದ ಟ್ರೇಲರ್ ಸಪ್ಟೆಂಬರ್ ಒಂದಕ್ಕೆ ಬಿಡುಗಡೆಯಾಗಲಿದೆ.

Tags