ಸುದ್ದಿಗಳು

ಹುಟ್ಟೂರಿನಲ್ಲಿ ಗ್ರಾಮದೇವತೆಯ ಪೂಜೆ ಸಲ್ಲಿಸಿದ ‘ಡಾಲಿ’ ಧನಂಜಯ್

‘ಟಗರು’ ಚಿತ್ರದ ನಂತರ ಮಿಂಚುತ್ತಿರುವ ಧನಂಜಯ್

ಬೆಂಗಳೂರು.ಫೆ.12

ಕನ್ನಡದ ಸ್ಟಾರ್ ನಟರಿಗೆ ಫೆವರೇಟ್ ನಟರಾಗುತ್ತಿದ‍್ದಾರೆ ಡಾಲಿ ಧನಂಜಯ್. ತಾವೇ ಸ್ವತಃ ನಾಯಕನಟರಾಗಿದ್ದರೂ ಸಹ ಬೇರೆ ನಾಯಕರಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ಕಳೆದ ವರ್ಷ ‘ಟಗರು’ ಚಿತ್ರದಲ್ಲಿ ಡಾಲಿ ಆಗಿ ಅಬ್ಬರಿಸಿದ್ದ ಅವರೀಗ ‘ಯಜಮಾನ’ ಮೂಲಕ ಮಿಠಾಯಿ ಸೂರಿ ಆಗುತ್ತಿದ್ದಾರೆ.

ಪೂಜೆ ಸಲ್ಲಿಸಿದ ಧನಂಜಯ್

ಸದ್ಯ ಧನಂಜಯ್ ಒಂದಾದರಂತೆ ಒಂದೊಂದೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹಾಗೆಯೇ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಹುಟ್ಟೂರಿಗೆ ಹೋದ ಅವರು ಗ್ರಾಮದೇವತೆಯ ಪೂಜೆ ಸಲ್ಲಿಸಿದ್ದಾರೆ.

ಮುಂದಿನ ಸಿನಿಮಾಗಳು

ದರ್ಶನ್ ಅಭಿನಯದ ‘ಯಜಮಾನ’ ಚಿತ್ರದಲ್ಲಿ ಮೇನ್ ವಿಲನ್ ಆಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ

‘ನನ್ನದು ಬಹಳ ಮುಖ್ಯವಾದ ಪಾತ್ರ. ಆದರೆ ವಿಲನ್ ಅಲ್ಲ. ಮಿಠಾಯಿ ಸೂರಿಯಾಗಿ ಚಿತ್ರದಲ್ಲಿ ಸ್ವಲ್ಪ ಸಮಯ ಬಂದು ಹೋದರೂ ಬಹಳ ಪ್ರಾಮುಖ್ಯತೆ ನನ್ನ ಪಾತ್ರಕ್ಕೆ ಇದೆ. ಒಬ್ಬ ಕಲಾವಿದನಿಗೆ ನಾನಾ ಬಗೆಯ ಪಾತ್ರಗಳು ಸಿಗುವುದು ಅಪರೂಪ. ಅಂತಹ ಅವಕಾಶಗಳು ನನಗೆ ಸಿಕ್ಕಿವೆ. ಈ ಚಿತ್ರದೊಂದಿಗೆ ಜಗ್ಗೇಶ್ ನಟನೆಯ ‘ತೋತಾಪುರಿ’ ಚಿತ್ರದಲ್ಲೂ ನಟಿಸುತ್ತಿದ್ದೇನೆ’ ಎಂದು ಧನಂಜಯ್ ಹೇಳಿಕೊಂಡಿದ್ದಾರೆ.

ಸದ್ಯ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ಬ್ಯೂಸಿಯಾಗಿರುವ ಅವರ ‘ಡಾಲಿ’ ಹೆಸರಿನಲ್ಲೇ ಪ್ರಭು ಶ್ರೀನಿವಾಸ್ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.

ಈಗಿನ ಹೊಸ ಟ್ರೆಂಡ್ ಗೆ ಸನ್ ಗ್ಲಾಸ್!!

#dhananjaya, #balkaninews #filmnews, #yajamana, #thothapuri, #villion

Tags