ಸುದ್ದಿಗಳು

ದಾಖಲೆ ಮೇಲೆ ದಾಖಲೆ; 600 ಮಿಲಿಯನ್ ಮುಟ್ಟಿದ ‘ರೌಡಿ ಬೇಬಿ’!

ಧನುಷ್ ಮತ್ತು ಸಾಯಿ ಪಲ್ಲವಿ ನಟನೆಯ ‘ಮಾರಿ 2’ ಚಿತ್ರದ ಚಾರ್ಟ್ ಬಸ್ಟರ್ ಟ್ರ್ಯಾಕ್ ‘ರೌಡಿ ಬೇಬಿ’ ಮತ್ತೊಂದು ದಾಖಲೆ ನಿರ್ಮಿಸಿದೆ. ಹೌದು, ನಟ ಪ್ರಭುದೇವ ಅವರ ನೃತ್ಯ ಸಂಯೋಜನೆಯಿರುವ ರೌಡಿ ಬೇಬಿ ಹಾಡು ಯೂಟ್ಯೂಬ್‌ನಲ್ಲಿ 600 ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು, ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ ಹಾಡು ಖ್ಯಾತಿಗೆ ಪಾತ್ರವಾಗಿದೆ.

‘ರೌಡಿ ಬೇಬಿ’ ಹಾಡಿಗೆ ಸಂಗೀತವನ್ನು ಯುವನ್ ಶಂಕರ್ ರಾಜ ಸಂಯೋಜಿಸಿದ್ದರು. ಧನುಷ್ ಹಾಡಿಗೆ ಸಾಹಿತ್ಯ ಬರೆಯುವುದರ ಜೊತೆಗೆ ಅವರೇ ಸ್ವತಃ ಹಾಡಿದ್ದಾರೆ. ‘ರೌಡಿ ಬೇಬಿ’ ಹಾಡಿಗೆ ಸಾಯಿ ಪಲ್ಲವಿ ಮತ್ತು ಧನುಷ್ ಅವರು ಭರ್ಜರಿ ಸ್ಟೆಪ್ಸ್ ಹಾಕಿದ್ದು, ಇಂದಿಗೂ ಸಾಕಷ್ಟು ಜನರ ಗಮನ ಸೆಳೆಯುತ್ತಿದೆ.

ಅಭಿಮಾನಿಗಳು ಸಹ ಹೊಸ ಹೊಸ ಹಾಡುಗಳು ಬರುತ್ತಿದ್ದರೂ ಇನ್ನೂ ಹಾಡಿನ ಮೇಲಿರುವ ಕ್ರೇಜ್ ಕಳೆದುಕೊಂಡಿಲ್ಲ. ‘ಮಾರಿ 2’ ಚಿತ್ರ ನಿರ್ಮಿಸಿದ ವಂಡರ್ಬಾರ್ ಫಿಲ್ಮ್ಸ್ ಇತ್ತೀಚೆಗೆ ಈ ಹೊಸ ದಾಖಲೆಯ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿದೆ.

4 ಕೋಟಿ ರೂ.ಗೆ ಬೇಡಿಕೆಯಿಟ್ಟ ರಾಖಿ ಸಾವಂತ್ ಮಾಜಿ ಗೆಳೆಯ

#balkaninews #rowdybaby #dhanush #saipallavi #maari2 #youtube

Tags