ಸುದ್ದಿಗಳು

ಮತ್ತೊಮ್ಮೆ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಧನುಷ್

ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಸದ್ಯ ನಟನಾಗಿ ಅಷ್ಟೇ ಅಲ್ಲ ಬಹಳಷ್ಟು ಸಿನಿಮಾದಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ವಿಭಾಗಗಳಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿರುವ ಈ‌ ನಟ ಸದ್ಯ ಹಿಂದಿ ಸಿನಿಮಾ ಮಾಡಲಿದ್ದಾರೆ.  ಈ ಬಗ್ಗೆ ಈ ನಟನೇ ಸ್ವತಃ ಹೇಳಿರುವುದು ವರದಿಗಳಾಗಿವೆ.

ಮುಂದಿನ ಸಿನಿಮಾ ಹಿಂದಿಯಲ್ಲಿ

ಹೌದು, ತಮಿಳು‌ ನಟ ಧನುಷ್ ಸದ್ಯ ಹಿಂದಿ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರಂತೆ. ಈ ನಟನ ‘ದಿ ಎಕ್ಸ್ಟಾರ್ಡಿನರಿ ಜರ್ನಿ ಆಫ್ ಫಕಿರ್’ ಎಂಬ ಸಿನಿಮಾ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯ್ತು. ಬಿಡುಗಡೆ ಸಮಾರಂಭದಲ್ಲಿ ಈ ನಟ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಇದು ಅವರ ಹಿಂದಿಯಲ್ಲಿ ಮೂರನೇ ಸಿನಿಮಾವಾಗಿದೆಯಂತೆ.  ಸದ್ಯ ಈ ಮೂಲಕ ಮತ್ತೆ ಹಿಂದಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ ಧನುಷ್.

ಅಭಿಮಾನಿಗಳಿಗೆ ಖುಷಿ ನೀಡಿದ ಧನುಷ್

ಸದ್ಯ ಈ ಸಿನಿಮಾ ಬಗ್ಗೆಯಾಗಲೀ ಅಥವಾ ತಾರ ಬಳಗವಾಗಲೀ ಯಾವುದೇ ವಿಚಾರ ಬಹಿರಂಗವಾಗಿಲ್ಲ. ಬದಲಾಗಿ ಸದ್ಯ ಸಿನಿಮಾ ಸಹಿ ಹಾಕಿರುವ ಬಗ್ಗೆ ಹೇಳಿದ್ದಾರೆ. ಅದೇನೆ ಇರಲಿ ಮತ್ತೊಮ್ಮೆ ಹಿಂದಿ ಸಿನಿಮಾ ಮಾಡುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಲು ರೆಡಿಯಾಗಿದ್ದಾರೆ ಧನುಷ್. ಇನ್ನೂ ಅಭಿಮಾನಿಗಳಿಗೂ ಕೂಡ ಹಿಂದಿಯಲ್ಲಿ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ.

ಪಾಕೆಟ್ ಮನಿಗೋಸ್ಕರ ಚಿತ್ರರಂಗಕ್ಕೆ ಬಂದ ಈ ನಟಿ!!

 

#dhanushmovies #dhanushhits #dhanushinstagram

Tags